ಸದ್ಯ ಯುಎಇನಲ್ಲಿ ಐಪಿಎಲ್ ಪಂದ್ಯಗಳು ನಡೆಯುತ್ತಿವೆ. ಈ ಪಂದ್ಯಗಳು, ಟಿ-20 ವಿಶ್ವಕಪ್ ಮೇಲೆ ಪ್ರಭಾವ ಬೀರುವ ಸಾಧ್ಯತೆ ಕಾಣ್ತಿದೆ. ನವೆಂಬರ್-ಡಿಸೆಂಬರ್ನಲ್ಲಿ ನಡೆಯುವ ಟಿ-20 ವಿಶ್ವಕಪ್ ಗೆ ಈಗಾಗಲೇ ಟೀಂ ಇಂಡಿಯಾ ಘೋಷಣೆಯಾಗಿದೆ. ಆದ್ರೆ ಐಪಿಎಲ್ ನಲ್ಲಿ ಆಟಗಾರರ ಪ್ರದರ್ಶನ ಈಗ ತಲೆನೋವು ತಂದಿದೆ. ಐಪಿಎಲ್ ನಲ್ಲಿ ಟೀಂ ಇಂಡಿಯಾ ಆಟಗಾರರ ಪ್ರದರ್ಶನ ನೋಡಿದ ನಂತ್ರ, ಮತ್ತೊಮ್ಮೆ ಬಿಸಿಸಿಐ ಟೀಂ ಇಂಡಿಯಾದಲ್ಲಿ ಬದಲಾವಣೆ ಮಾಡುವ ಸಾಧ್ಯತೆ ಎದ್ದು ಕಾಣ್ತಿದೆ.
ಅಕ್ಟೋಬರ್ 10ರೊಳಗೆ ಟಿ-20 ವಿಶ್ವಕಪ್ ಗೆ ಇಂಡಿಯಾ ಆಟಗಾರರು ಬದಲಾಗುವ ಸಾಧ್ಯತೆಯಿದೆ. ಈ ಲೀಗ್ನಲ್ಲಿ ಮುಂಬೈ ಇಂಡಿಯನ್ಸ್ ಸ್ಪಿನ್ ಬೌಲರ್, ರಾಹುಲ್ ಚಹರ್ ಪ್ರದರ್ಶನ ಅತ್ಯಂತ ಕಳಪೆಯಾಗಿದೆ. ಯುಜ್ವೆಂದ್ರ ಚಹಾಲ್ ಬದಲಿಗೆ ರಾಹುಲ್ ಚಹರ್ ಗೆ ಟಿ-20 ವಿಶ್ವಕಪ್ ಗೆ ಸ್ಥಾನ ನೀಡಲಾಗಿದೆ. ಆದರೆ ಐಪಿಎಲ್ ನಲ್ಲಿ ಚಹಲ್ ಪ್ರದರ್ಶನ ಕೆಟ್ಟದಾಗಿದ್ದು, ಟೀಂ ಇಂಡಿಯಾದಲ್ಲಿ ಸ್ಥಾನ ಪಡೆಯಲು ಅರ್ಹರೇ ಎಂಬ ಪ್ರಶ್ನೆ ಕಾಡಲು ಶುರುವಾಗಿದೆ.
ಆರ್ಸಿಬಿ ಸ್ಪಿನ್ ಬೌಲರ್ ಯುಜ್ವೇಂದ್ರ ಚಹಾಲ್, ಉತ್ತಮ ಪ್ರದರ್ಶನ ನೀಡ್ತಿದ್ದಾರೆ. ಐಪಿಎಲ್ 2021 ರ ಮೊದಲ ಹಂತದಲ್ಲಿ ಚಹಾಲ್ ಫಾರ್ಮ್ನಲ್ಲಿರಲಿಲ್ಲ. ಆದರೆ ಅವರು ಯುಎಇಯಲ್ಲಿ ಅದ್ಭುತ ಬೌಲಿಂಗ್ ಮಾಡುತ್ತಿದ್ದಾರೆ. ಚಹಾಲ್ ಕೊನೆಯ ಎರಡು ಪಂದ್ಯಗಳಲ್ಲಿ ಐದು ವಿಕೆಟ್ ಪಡೆದಿದ್ದಾರೆ.
ಐಪಿಎಲ್ ಮೊದಲ ಋತುವಿನಲ್ಲಿ ಕೆಟ್ಟ ಪ್ರದರ್ಶನ ನೀಡಿದ್ದು, ಚಹಾಲ್ ಗೆ ಹಿನ್ನಡೆಯಾಗಿತ್ತು. ವಿಶ್ವಕಪ್ ತಂಡದಿಂದ ಹೊರಗುಳಿಯಲು ಇದೇ ಕಾರಣವಾಗಿತ್ತು. ಚಹಾಲ್, ಟಿ 20 ಕ್ರಿಕೆಟ್ ನಲ್ಲಿ ಭಾರತದ ಪರ ಅತಿ ಹೆಚ್ಚು ವಿಕೆಟ್ ಪಡೆದ ಬೌಲರ್. ಆದ್ರೆ ಟಿ-20 ವಿಶ್ವಕಪ್ ತಂಡದಲ್ಲಿ ಸ್ಥಾನ ಪಡೆದಿಲ್ಲ.