ಅನುಮತಿ ಇಲ್ಲದೇ ಮರಗಳನ್ನು ಕತ್ತರಿಸಿದ ಹಿನ್ನೆಲೆ ರಿಯಲ್ ಎಸ್ಟೇಟ್ ಕಂಪನಿಗೆ ಅರಣ್ಯ ಇಲಾಖೆ 4 ಲಕ್ಷ ರೂಪಾಯಿ ದಂಡ ವಿಧಿಸಿದ ಘಟನೆ ಹೈದರಾಬಾದ್ನ ಮೊಯಿನಾಬಾದ್ನಲ್ಲಿ ನಡೆದಿದೆ.
ಇ-ಶ್ರಮ್ ಪೋರ್ಟಲ್ ನಲ್ಲಿ ನೋಂದಣಿ ಮಾಡಲು ಇಲ್ಲಿದೆ ಮಾಹಿತಿ
ಅರಣ್ಯ ಇಲಾಖೆ ನೀಡಿರುವ ಮಾಹಿತಿಯ ಪ್ರಕಾರ ಮೊಯಿನಾಬಾದ್ನ ಚಿಲ್ಕೂರಿನಲ್ಲಿ ರಿಯಲ್ ಎಸ್ಟೇಟ್ ಕಂಪನಿಯು ಅರಣ್ಯ ಇಲಾಖೆಯ ಅನುಮತಿಯನ್ನು ಪಡೆಯದೇ 65 ಮರಗಳನ್ನು ಕಡಿದು ಹಾಕಿತ್ತು. ಈ ಸಂಬಂಧ ಸ್ಥಳೀಯರು ನೀಡಿದ ದೂರನ್ನು ಆಧರಿಸಿದ ಅರಣ್ಯ ಇಲಾಖೆ ಅಧಿಕಾರಿಗಳು ಕ್ರಮ ಕೈಗೊಂಡಿದ್ದಾರೆ.
ಅರಣ್ಯ ಇಲಾಖೆಯು ಜಲಭೂಮಿ ಹಾಗೂ ಮರಗಳ ಕಾಯ್ದೆಯಡಿ ರಿಯಲ್ ಎಸ್ಟೇಟ್ ಕಂಪನಿಗೆ 4 ಲಕ್ಷ ರೂಪಾಯಿ ದಂಡ ವಿಧಿಸಿದೆ. ಅಲ್ಲದೇ ಸಸಿಗಳನ್ನು ನೆಡುವುದು ಮಾತ್ರವಲ್ಲದೇ ಅವುಗಳನ್ನು ರಕ್ಷಿಸುವಂತೆ ಕಂಪನಿಗೆ ಸೂಚನೆ ನೀಡಿದೆ.