ಮದುವೆಯಲ್ಲಿ ಆಹಾರವನ್ನು ನಿರಾಕರಿಸಿದ ನಂತರ ವರನ ಮುಂದೆ ತನ್ನ ಕ್ಯಾಮರಾದಲ್ಲಿರುವ ಎಲ್ಲಾ ಫೋಟೋಗಳನ್ನು ಛಾಯಾಗ್ರಾಹಕ ಅಳಿಸಿ ಹಾಕಿದ್ದಾನೆ.
ಹಣವನ್ನು ಉಳಿಸಲು ಬಯಸಿದ ವರನೊಬ್ಬ ತನ್ನ ಸ್ನೇಹಿತನ ಬಳಿ ಮದುವೆಯ ಫೋಟೋ ತೆಗೆಯುವಂತೆ ಒತ್ತಾಯಿಸಿದ್ದಾನೆ. ತನ್ನಿಂದಾಗಲ್ಲ ಅಂತಾ ಎಷ್ಟು ಹೇಳಿದ್ರೂ ಕೇಳದೆ ಆತನ ಮನವೊಲಿಸಿದ್ದಾನೆ. ಕೊನೆಗೆ ಸರಿ ಎಂದು $250 ಕ್ಕೆ ಒಪ್ಪಿಗೆ ಕೊಟ್ಟಿದ್ದಾನೆ.
ಇನ್ನೇನು ಮದುವೆಯ ದಿನ ಬಂದೇ ಬಿಡ್ತು. ಬೆಳಗ್ಗೆ 11 ಗಂಟೆಯಿಂದ ಸಂಜೆ 7.30ರ ವರೆಗೆ ಫೋಟೋ ತೆಗೆಯುವಂತೆ ಸೂಚಿಸಲಾಗಿತ್ತು. ಸಂಜೆ 5ರ ವೇಳೆ ಹಸಿವು, ಬಾಯಾರಿಕೆಯಿಂದ ಬಳಲಿದ ಛಾಯಾಗ್ರಾಹಕ ಊಟಕ್ಕೆ ಬೇಡಿಕೆಯಿಟ್ಟಿದ್ದಾನೆ. ಆದರೆ, ಇದಕ್ಕೊಪ್ಪದ ವರ ಫೋಟೋ ತೆಗೆಯಲೇಬೇಕು, ಇಲ್ಲದಿದ್ದರೆ $ 250 ಕೊಡುವುದಿಲ್ಲ ಎಂದು ಹೇಳಿದ್ದಾನೆ.
ಗಮನಿಸಿ…! ರಾಜ್ಯದಲ್ಲಿ ನಾಳೆಯಿಂದ ಮೂರು ದಿನ ಭಾರಿ ಮಳೆ, ಯೆಲ್ಲೋ ಅಲರ್ಟ್
ಇದರಿಂದ ಸಿಟ್ಟಿಗೆದ್ದ ಛಾಯಾಗ್ರಾಹಕ ಮತ್ತೊಮ್ಮೆ ಕೇಳಿದಾಗ, ವರ ಅದೇ ಉತ್ತರ ನೀಡಿದ್ದಾನೆ. ಹೀಗಾಗಿ ವರನ ಮುಂದೆಯೇ ಆತನ ಮದುವೆಯ ಫೋಟೋಗಳನ್ನು ಛಾಯಾಗ್ರಾಹಕ ಡಿಲೀಟ್ ಮಾಡಿ ಅಲ್ಲಿಂದ ತೆರಳಿದ್ದಾನೆ.
ಈ ಬಗ್ಗೆ ಸಾಮಾಜಿಕ ಮಾಧ್ಯಮದಲ್ಲಿ ಛಾಯಾಗ್ರಾಹಕ ವಿಷಯ ಹಂಚಿಕೊಂಡಿದ್ದಾನೆ. ಈ ಪೋಸ್ಟ್ ಸಾಮಾಜಿಕ ಮಾಧ್ಯಮದಲ್ಲಿ ವೈರಲ್ ಆಗಿದ್ದು, ನೆಟ್ಟಿಗರು ಛಾಯಾಗ್ರಾಹಕನನ್ನು ಬೆಂಬಲಿಸಿದ್ದಾರೆ.