ಮದುವೆ ಸಮಾರಂಭವು ಜೀವನದಲ್ಲಿ ಮರೆಯಲಾಗದ ದಿನಗಳಲ್ಲಿ ಒಂದಾಗಿದೆ. ಅಲಂಕಾರದಿಂದ ಹಿಡಿದು ಫ್ಯಾಷನ್ ವರೆಗೆ ಎಲ್ಲವೂ ದೋಷರಹಿತವಾಗಿರಬೇಕು. ವಿವಾಹದಲ್ಲಿ ಖಾದ್ಯಗಳು ಕೂಡ ಈವೆಂಟ್ನ ಅತ್ಯಗತ್ಯ ಭಾಗವಾಗಿದೆ. ಅದರಲ್ಲೂ ವಿಶೇಷವಾಗಿ ಮದುವೆಯ ಕೇಕ್. ನವವಿವಾಹಿತ ದಂಪತಿ ತಮ್ಮ ದೊಡ್ಡ ದಿನದಂದು ಸಾಕಷ್ಟು ಸುಂದರವಾದ ಕೇಕ್ಗಳನ್ನು ಕತ್ತರಿಸುವುದನ್ನು ನಾವು ನೋಡಿದ್ದೇವೆ.
ಇತ್ತೀಚೆಗೆ, ನವ ದಂಪತಿ ತಮ್ಮ ಮೊದಲ ವಾರ್ಷಿಕೋತ್ಸವಕ್ಕಾಗಿ ತಮ್ಮ ವಿವಾಹದ ಕೇಕ್ ಅನ್ನು ಉಳಿಸಲು ನಿರ್ಧರಿಸಿದ್ದರು. ಹನಿಮೂನ್ ಗೆಂದು ಹೋಗಿದ್ದ ದಂಪತಿ ವಾಪಸ್ ಬಂದಾಗ ಕೇಕ್ ಇಲ್ಲದಿರುವುದನ್ನು ಕಂಡು ಶಾಕ್ ಆಗಿದ್ದಾರೆ.
ಅಲ್ಲು ಅರ್ಜುನ್ ಗೆ ಅಭಿಮಾನಿಯಿಂದ ಸಿಗ್ತು ವಿಶೇಷ ಉಡುಗೊರೆ..!
ಮದುವೆಯ ಕೇಕ್ ಅನ್ನು ಫ್ರೀಜ್ ಮಾಡಿ ತಮ್ಮ ಮೊದಲ ವಾರ್ಷಿಕೋತ್ಸವದಂದು ಸೇವಿಸಲು ದಂಪತಿ ಯೋಜಿಸಿದ್ದರು. ಹೀಗಾಗಿ ತಮ್ಮ ವಿವಾಹದಂದು ಅತಿಥಿಗಳಿಗೆ ಕಪ್ ಕೇಕ್ ಗಳನ್ನು ನೀಡಿದ್ದಾರೆ. ಕೇಕ್ ದುಬಾರಿಯಲ್ಲದಿದ್ದರೂ, ನವವಿವಾಹಿತರು ಇದನ್ನು ಒಂದು ವರ್ಷ ‘ಸಂಪ್ರದಾಯ’ದಂತೆ ಉಳಿಸಲು ತೀರ್ಮಾನಿಸಿದ್ದರು. ಆದರೆ ಇವರು ಮಧುಚಂದ್ರಕ್ಕೆ ಹೋಗಿ ಬರುವ ವೇಳೆ ದಂಪತಿಯ ಪ್ಲಾನ್ ತಲೆಕೆಳಗಾಗಿದೆ. ಮನೆಯಲ್ಲೇ ಇದ್ದ ಅತ್ತೆ-ಮಾವ ಆ ಕೇಕ್ ಅನ್ನು ತಿಂದು ಮುಗಿಸಿದ್ದರು.
ಈ ಬಗ್ಗೆ ಮಹಿಳೆಯು ಸಾಮಾಜಿಕ ಜಾಲತಾಣದಲ್ಲಿ ಪೋಸ್ಟ್ ಹಂಚಿಕೊಂಡಿದ್ದರು. “ಒಂದು ವರ್ಷದವರೆಗೆ ಮದುವೆಯ ಕೇಕ್ ಅನ್ನು ಉಳಿಸುವುದು ಅಸಹ್ಯಕರವಾಗಿದೆ ಮತ್ತು ಅವರು ನಮಗೆ ಒಂದು ಉಪಕಾರ ಮಾಡಿದ್ದಾರೆ” ಎಂದು ಆಕೆ ತಮ್ಮ ಪೋಸ್ಟ್ನಲ್ಲಿ ಬರೆದಿದ್ದಾರೆ. ದಂಪತಿಯ ವಿಲಕ್ಷಣ ಕಥೆಗೆ ನೆಟ್ಟಿಗರು ಕೂಡ ತಮಾಷೆಯಾಗಿ ಪ್ರತಿಕ್ರಿಯಿಸಿದ್ದಾರೆ.
ಕೆಲವು ಬಳಕೆದಾರರು “ಒಂದು ವರ್ಷದವರೆಗೆ ವಿವಾಹದ ಕೇಕ್ ಅನ್ನು ಉಳಿಸುವ ಸಂಪ್ರದಾಯವು ತುಂಬಾ ಅನಗತ್ಯ ಹಾಗೂ ಅದರ ಬದಲಿಗೆ ಹೊಸದನ್ನು ಆದೇಶಿಸಬಹುದು” ಎಂದು ಹೇಳಿದ್ದಾರೆ.