ಪಿಎಂ ಕಿಸಾನ್ ಸಮ್ಮಾನ್ ನಿಧಿ ಯೋಜನೆ ಲಾಭ ಪಡೆಯುತ್ತಿರುವ ರೈತರಿಗೆ ಮುಖ್ಯವಾದ ಸುದ್ದಿಯೊಂದಿದೆ. ಈಗಾಗಲೇ ಕಿಸಾನ್ ಸಮ್ಮಾನ್ ನಿಧಿ ಯೋಜನೆ ಲಾಭ ಪಡೆಯುತ್ತಿದ್ದರೆ, ನೀವು ಪ್ರತಿ ತಿಂಗಳು 3000 ರೂಪಾಯಿ ಪಡೆಯಲು ಅರ್ಹತೆ ಪಡೆಯುತ್ತೀರಿ. ಇದಕ್ಕಾಗಿ ಯಾವುದೇ ದಾಖಲೆಗಳನ್ನು ಒದಗಿಸಬೇಕಾಗಿಲ್ಲ. ಪ್ರಧಾನ ಮಂತ್ರಿ ಕಿಸಾನ್ ಮಂಧನ್ ಯೋಜನೆಯಡಿ ರೈತರು ಪ್ರತಿವರ್ಷ 36000 ರೂಪಾಯಿಗಳನ್ನು ಪಡೆಯಬಹುದು.
ಪಿಎಂ ಕಿಸಾನ್ ಮಂಧನ್ ಯೋಜನೆ, ಸಣ್ಣ ರೈತರಿಗೆ ಪ್ರತಿ ತಿಂಗಳು ಪಿಂಚಣಿ ನೀಡುವ ಯೋಜನೆಯಾಗಿದೆ. ಈ ಯೋಜನೆಯಡಿ, 60 ವರ್ಷದ ನಂತರ, ರೈತರಿಗೆ ಪ್ರತಿ ತಿಂಗಳು 3000 ರೂಪಾಯಿ ಸಿಗುತ್ತದೆ. ಅಂದರೆ ವರ್ಷಕ್ಕೆ 36000 ರೂ. ಪಿಂಚಣಿ ನೀಡಲಾಗುತ್ತದೆ.
ಈ ಪಿಂಚಣಿ ಯೋಜನೆಯನ್ನು ಕೇಂದ್ರ ಸರ್ಕಾರವು ದೇಶದ ಸಣ್ಣ ಹಾಗೂ ಅತಿ ಸಣ್ಣ ರೈತರಿಗಾಗಿ ನಡೆಸುತ್ತಿದೆ. ಇದರಲ್ಲಿ, 60 ವರ್ಷದ ನಂತರ ಪ್ರತಿ ತಿಂಗಳು 3000 ರೂಪಾಯಿ ಪಿಂಚಣಿ ಸಿಗಲಿದೆ. ಈಗಾಗಲೇ ಪಿಎಂ ಕಿಸಾನ್ ಲಾಭವನ್ನು ಪಡೆಯುತ್ತಿದ್ದರೆ, ಇದಕ್ಕಾಗಿ ಯಾವುದೇ ದಾಖಲೆ ನೀಡಬೇಕಾಗಿಲ್ಲ.
18 ರಿಂದ 40 ವರ್ಷದ ಯಾವುದೇ ರೈತರು ಕಿಸಾನ್ ಮಂಧನ್ ಯೋಜನೆಯ ಲಾಭವನ್ನು ಪಡೆಯಬಹುದು. ಇದ್ರ ಲಾಭ ಪಡೆಯಲು ಗರಿಷ್ಠ 2 ಹೆಕ್ಟೇರ್ಗಳವರೆಗೆ ಕೃಷಿ ಭೂಮಿಯನ್ನು ಹೊಂದಿರಬೇಕು. ರೈತನ ವಯಸ್ಸಿಗೆ ಅನುಗುಣವಾಗಿ, ಕನಿಷ್ಟ 20 ವರ್ಷಗಳವರೆಗೆ ಮತ್ತು ಗರಿಷ್ಠ 40 ವರ್ಷಗಳವರೆಗೆ ಮಾಸಿಕ ಕೊಡುಗೆಯನ್ನು ನೀಡಬೇಕಾಗುತ್ತದೆ.
18 ನೇ ವಯಸ್ಸಿನಲ್ಲಿ ಇದಕ್ಕೆ ಹೆಸರು ನೋಂದಾಯಿಸಿದ್ರೆ ಮಾಸಿಕ ಕೊಡುಗೆ ಪ್ರತಿ ತಿಂಗಳು 55 ರೂಪಾಯಿಯಾಗುತ್ತದೆ. 30 ನೇ ವಯಸ್ಸಿನಲ್ಲಿ ಈ ಯೋಜನೆಗೆ ಹೆಸರು ನೋಂದಾಯಿಸಿದರೆ 110 ರೂಪಾಯಿಗಳನ್ನು ಜಮಾ ಮಾಡಬೇಕಾಗುತ್ತದೆ. 40 ನೇ ವಯಸ್ಸಿನಲ್ಲಿ ಹೆಸರು ನೋಂದಾಯಿಸಿದ್ರೆ ಪ್ರತಿ ತಿಂಗಳು 200 ರೂಪಾಯಿ ಪಾವತಿ ಮಾಡಬೇಕಾಗುತ್ತದೆ.