ಮುಂಬೈನ ಆರ್ರೆ ಅರಣ್ಯಪ್ರದೇಶ ನಗರದ ಹೊರವಲಯದಲ್ಲಿ ದಟ್ಟವಾಗಿ ಹಬ್ಬಿಕೊಂಡಿರುವ ಪ್ರದೇಶ. ಇಲ್ಲಿ ಆಗಾಗ್ಗೆ ಕಾಡುಪ್ರಾಣಿಗಳು ಗೋಚರವಾಗುವುದು ಸಾಮಾನ್ಯ ಸಂಗತಿ. ಆದರೆ ಸೆ.26ರ ಸಂಜೆ 7 ಗಂಟೆಗೆ ಆರ್ರೆ ಅರಣ್ಯದ ಬಳಿಯಲ್ಲಿನ ಯೂನಿಟ್-3ರ ಮನೆಯ ಬಳಿಯಲ್ಲೇ ಆಟವಾಡುತ್ತಿದ್ದ 4 ವರ್ಷದ ಆಯುಷ್ ಮೇಲೆ ಚಿರತೆಯೊಂದು ಎಗರಿತ್ತು ! ಹೌದು, ಮಗುವಿನ ಕುತ್ತಿಗೆಗೆ ಬಾಯಿ ಹಾಕಿ ಎಳೆದು ಒಯ್ಯಲು ಆರಂಭಿಸಿತು.
ಅದೃಷ್ಟವಶಾತ್ ಬಾಲಕನ ಸೋದರ ಮಾವ, 25 ವರ್ಷದ ವಿನೋದ್ ಕುಮಾರ್ ಯಾದವ್ ಅಲ್ಲಿಯೇ ಇದ್ದರು. ಕೂಡಲೇ ರಕ್ಷಣೆಗಾಗಿ ಕಿರುಚಿಕೊಂಡ ವಿನೋದ್, ಚಿರತೆಯ ಹಿಂದೆ ಓಡಿದರು. ಹೀಗೆ ಆರ್ರೆ ಅರಣ್ಯ ಪ್ರವೇಶಿಸುವಾಗ ಚಿರತೆಯು ತನ್ನ ಹಿಡಿತ ಕಳೆದುಕೊಂಡ ಪರಿಣಾಮ ಬಾಲಕ ಆಯುಷ್ ನೆಲಕ್ಕೆ ಬಿದ್ದಿದ್ದಾನೆ. ಕೂಡಲೇ ಜಿಗಿದು ಬಾಲಕನ ಕಾಲುಗಳನ್ನು ಬಿಗಿಯಾಗಿ ವಿನೋದ್ ಹಿಡಿದುಕೊಂಡಿದ್ದಾರೆನೆ.
ಪ್ಲಾಸ್ಟಿಕ್ ಮೊಸಳೆ ಕಂಡು ಬೆಚ್ಚಿಬಿದ್ದ ಮಹಿಳೆ ಮಾಡಿದ್ದೇನು ಗೊತ್ತಾ….?
ಬೇಟೆ ತಪ್ಪಿದ ಆತಂಕದಲ್ಲಿ ಚಿರತೆ ತನ್ನ ಪ್ರಾಣರಕ್ಷಣೆಗಾಗಿ ಅರಣ್ಯಕ್ಕೆ ಜೋರಾಗಿ ಓಡಿಹೋಗಿದೆ. ಬಾಲಕನ ತಲೆಗೆ ಗಾಯಗಳಾಗಿದ್ದು, ಎಂಟು ಹೊಲಿಗೆಗಳನ್ನು ಹಾಕಲಾಗಿದೆ. ಆತನಿಗೆ ಆಸ್ಪತ್ರೆಯಲ್ಲಿ ಸೂಕ್ತ ಚಿಕಿತ್ಸೆ ನೀಡಲಾಗಿದೆ. ಆತನಿಗೆ ಯಾವುದೇ ಪ್ರಾಣಹಾನಿ ಆಗಿಲ್ಲ.
ಆರ್ರೆ ಪ್ರದೇಶದ ಸುತ್ತಲೂ ಕಳೆದ ಒಂದು ತಿಂಗಳಿಂದ ನಾಲ್ಕು ಬಾರಿ ಚಿರತೆಗಳು ದಾಳಿ ನಡೆಸಿವೆ. ಮಾನವ-ಕಾಡುಪ್ರಾಣಿಗಳ ಸಂಘರ್ಷ ತಡೆಯಲು ಅರಣ್ಯ ಇಲಾಖೆಯು ಕ್ಯಾಮೆರಾ, ಚಿರತೆ ಸೆರೆಯ ಬೋನುಗಳನ್ನು ಕೂಡ ಇರಿಸಿ ಕಾರ್ಯಾಚರಣೆಗಳನ್ನು ನಡೆಸುತ್ತಿದ್ದಾರೆ.