alex Certify ಅತ್ತಿಗೆ ಮೇಲೆರಗಿದ ಮೈದುನ..! ತಮ್ಮನಿಗಿತ್ತು ಅಣ್ಣನ ಬೆಂಬಲ | Kannada Dunia | Kannada News | Karnataka News | India News
ಕನ್ನಡ ದುನಿಯಾ
    Dailyhunt JioNews

Kannada Duniya

ಅತ್ತಿಗೆ ಮೇಲೆರಗಿದ ಮೈದುನ..! ತಮ್ಮನಿಗಿತ್ತು ಅಣ್ಣನ ಬೆಂಬಲ

ಅತ್ತಿಗೆಯನ್ನು ತಾಯಿಗೆ ಹೋಲಿಸಲಾಗುತ್ತದೆ. ಆದ್ರೆ ತಾಯಿ ಸ್ಥಾನದಲ್ಲಿರುವ ಅತ್ತಿಗೆ ಮೇಲೆ ಮೈದುನನೊಬ್ಬ ಅತ್ಯಾಚಾರವೆಸಗಿದ ಘಟನೆ ಬೆಳಕಿಗೆ ಬಂದಿದೆ. ಮೈದುನನ ದುಷ್ಕೃತ್ಯಕ್ಕೆ ಮಹಿಳೆ ಮಗುವಿಗೆ ಜನ್ಮ ನೀಡಿದ್ದಾಳೆ. ಈಗ ಪತಿ, ತಮ್ಮನ ಜೊತೆ ಪತ್ನಿಯ ಮದುವೆ ಮಾಡಿಸಲು ಮುಂದಾಗಿದ್ದಾನೆ. ಈ ಎಲ್ಲ ಗಲಾಟೆಯಿಂದ ಬೇಸತ್ತ ಮಹಿಳೆ ಪೊಲೀಸ್ ಠಾಣೆ ಮೆಟ್ಟಿಲೇರಿದ್ದಾಳೆ.

ಪೀಡಿತೆಗೆ 2018ರ ಮಾರ್ಚ್ 6 ರಂದು ಮೊರೆನಾದ ಆದರ್ಶ್ ಕಾಲೋನಿಯಲ್ಲಿ ವಾಸಿಸುತ್ತಿದ್ದ ವ್ಯಕ್ತಿ ಜೊತೆ ಮದುವೆಯಾಗಿತ್ತು. ಮದುವೆ ನಂತ್ರ ಗಂಡನ ಜೊತೆ ಆಕೆಗೆ ಯಾವುದೇ ಸಂಬಂಧವಿರಲಿಲ್ಲ. ಮನೆಯಲ್ಲಿ ಪ್ರತ್ಯೇಕ ಕೋಣೆಯಲ್ಲಿ ವಾಸವಾಗಿದ್ದಳು. ಒಂಟಿಯಾಗಿ ಮಲಗುತ್ತಿದ್ದ ಅತ್ತಿಗೆ ಮೇಲೆ ಮೈದುನನ ಕಣ್ಣು ಬಿದ್ದಿತ್ತು. ಕಳೆದ ವರ್ಷ, ಅತ್ತಿಗೆ ಕೋಣೆ ಪ್ರವೇಶ ಮಾಡಿ ಆಕೆ ಮೇಲೆ ಅತ್ಯಾಚಾರವೆಸಗಿದ್ದಾನೆ. ಅತ್ಯಾಚಾರಕ್ಕೆ ಪತಿ ಕೂಡ ಕುಮ್ಮಕ್ಕು ನೀಡಿದ್ದನಂತೆ. ಸುಮ್ಮನಿರದೆ ಹೋದ್ರೆ ಹತ್ಯೆ ಮಾಡುವುದಾಗಿ ಬೆದರಿಸಿದ್ದನಂತೆ.

ಮೈದುನ ಪ್ರತಿ ದಿನ ಅತ್ಯಾಚಾರವೆಸಗುತ್ತಿದ್ದನಂತೆ. ಕೆಲ ಅಶ್ಲೀಲ ಫೋಟೋ ತೆಗೆದಿದ್ದ ಆತ, ಬೆದರಿಕೆ ಹಾಕ್ತಿದ್ದನಂತೆ. ಮೈದುನನ ಕೃತ್ಯಕ್ಕೆ ಮಹಿಳೆ ಗರ್ಭ ಧರಿಸಿದ್ದಳು. ಈ ವರ್ಷ ಹೆಣ್ಣು ಮಗುವಿಗೆ ಜನ್ಮ ನೀಡಿದ್ದಾಳೆ. ಈಗ ಪತಿ, ತಮ್ಮನಿಗೆ ಮದುವೆ ಮಾಡುವುದಾಗಿ ಹೇಳುತ್ತಿದ್ದಾನಂತೆ. ಇದ್ರಿಂದ ನೊಂದ ಮಹಿಳೆ ಈಗ ಪೊಲೀಸ್ ಠಾಣೆ ಮೆಟ್ಟಿಲೇರಿದ್ದಾಳೆ.

Opinion Poll

  • ʼಮುಡಾʼ ಹಗರಣದಲ್ಲಿ ರಾಜೀನಾಮೆ ನೀಡ್ತಾರಾ ಸಿಎಂ ಸಿದ್ದರಾಮಯ್ಯ ?

    View Results

    Loading ... Loading ...