ಕಾಲುಗಳನ್ನು ಕಳೆದುಕೊಂಡಿರುವ ಗೇಬ್ ಆಡಮ್ಸ್-ವೀಟ್ಲೆ ಎಂಬ ಈತ ಮೇಕ್-ಅಪ್ ಕಲಾವಿದನಾಗಿ ಕ್ರಿಯಾಶೀಲ ಪಯಣಕ್ಕೆ ಇಳಿದಿದ್ದಾರೆ. ಅಮೆರಿಕದ ಈ ಕಲಾವಿದ ತಾನು ಹೇಗೆಲ್ಲಾ ಮೇಕ್-ಅಪ್ ಮಾಡುತ್ತೇನೆಂದು ಸಾಮಾಜಿಕ ಜಾಲತಾಣದಲ್ಲಿ ತೋರಿದ್ದಾರೆ.
ಯಾವುದೇ ವೃತ್ತಿಪರ ಮೇಕ್-ಅಪ್ ಕಲಾವಿದನಿಗೂ ಕಮ್ಮಿ ಇಲ್ಲದಂತೆ ತಮ್ಮ ಕೈಚಳಕ ತೋರುವ ಇವರು ಟಿಕ್ಟಾಕ್ ವಿಡಿಯೋಗಳ ಮೂಲಕ ಸಾಕಷ್ಟು ಫೇಮಸ್ ಆಗಿದ್ದಾರೆ.
ತಮ್ಮ ಗಲ್ಲ ಹಾಗೂ ತೋಳುಗಳ ನಡುವೆ ಮೇಕ್-ಅಪ್ ಕುಂಚ ಹಿಡಿದ ಗೇಬ್, ತಮ್ಮ ಟ್ಯುಟೋರಿಯಲ್ ವಿಡಿಯೋವನ್ನು ಇನ್ಸ್ಟಾಗ್ರಾಂನಲ್ಲಿ ಶೇರ್ ಮಾಡಿಕೊಂಡಿದ್ದಾರೆ.
ಅಚ್ಚರಿ..! ಕೊರೊನಾ ಕಾರಣಕ್ಕೆ ಉಳೀತು ಈಕೆ ಜೀವ
ತಮ್ಮ ಮುಖದ ನಾಜೂಕಾದ ಚಲನೆಗಳಿಂದಲೇ ಗಲ್ಲ ಹಾಗೂ ತೋಳಿನಿಂದ ಹಿಡಿದ ಕುಂಚ ಹಾಗೂ ಇತರ ಸಲಕರಣೆಗಳನ್ನು ಹಿಡಿದು ತಮ್ಮ ಕೈಚಳಕ ತೋರುತ್ತಾರೆ ಗೇಬ್. ಕನ್ಸೀಲರ್ ಮೂಲಕ ಮೊದಲ ಹಂತ ಪೂರೈಸುವ ಗೇಬ್, ಬಳಿಕ ಬ್ಯೂಟಿ ಬ್ಲೆಂಡರ್ ಸೇರಿಸುವ ಮೂಲಕ ಮುಖದ ಮೇಲೆ ಬಣ್ಣದ ಚಿತ್ತಾರವನ್ನೇ ಅರಳಿಸುತ್ತಾರೆ.