20,000 ರೂಪಾಯಿ ಗೆಲ್ಲಲು ನೀವು ಯಾವೆಲ್ಲಾ ಹಂತಕ್ಕೆ ಹೋಗಬಲ್ಲಿರಿ ? 30 ಮೊಟ್ಟೆಗಳಿಂದ ಮಾಡಲಾದ 10 ಕೆಜಿ ತೂಕದ ಕಾಟಿ ರೋಲ್ ಅನ್ನು ಒಮ್ಮೆಲೇ ತಿನ್ನಬಲ್ಲಿರಾ ?
ದೆಹಲಿಯ ಮಾಡೆಲ್ ಟೌನ್‌ನ ರಸ್ತೆ ಬದಿಯ ಫುಡ್ ಸ್ಟಾಲ್ ಒಂದು ಈ ಸವಾಲೆಸೆದಿದೆ. ಈ ರೋಲ್ ಅನ್ನು 20 ನಿಮಿಷಗಳಲ್ಲಿ ತಿಂದು ಮುಗಿಸಿದರೆ ನಗದು ಬಹುಮಾನ ನೀಡುವ ಆಫರ್ ಅನ್ನು ಸ್ಟಾಲ್‌ನ ಮಾಲೀಕರು ನಿಮ್ಮ ಮುಂದೆ ಎಸೆಯುತ್ತಾರೆ.
’ದಿ ಫುಡ್ ಕಲ್ಟ್’ ಹೆಸರಿನ ಫುಡ್ ಬ್ಲಾಗಿಂಗ್ ಪೇಜ್ ಒಂದು ಈ ವಿಡಿಯೋವನ್ನು ಇನ್‌ಸ್ಟಾಗ್ರಾಂನಲ್ಲಿ ಶೇರ್ ಮಾಡಿಕೊಂಡಿದೆ. ಕಾಟಿ ರೋಲ್‌ನ ಗಾತ್ರ ನೋಡಿಯೇ ನಿಮಗೆ ಹೊಟ್ಟೆಭಾರವಾದಂತೆ ಭಾಸವಾಗಬಹುದು.
ವಿಡಿಯೋ ರೆಕಾರ್ಡ್ ಆಗುತ್ತಾ ಸಾಗಿದಂತೆ ಕಾಟಿ ರೋಲ್ ಮಾಡುವಾಗ ಮೈದಾ ಹಿಟ್ಟನ್ನು ಒತ್ತಿ, ದೊಡ್ಡ ರೋಲ್ ಮಾಡಿ, ಅದಕ್ಕೆ ಮೊಟ್ಟೆ ಹಾಗೂ ನೂಡಲ್ಸ್ ಹಾಗೂ ವಿವಿಧ ರೀತಿಯ ಸಾಸ್‌ಗಳು ಹಾಗೂ ಇತರೆ ಸಾಮಗ್ರಿಗಳನ್ನು ಸೇರಿಸಲಾಗುತ್ತದೆ.
ಶೇರ್ ಮಾಡಿದ ಬಳಿಕ 8 ಲಕ್ಷಕ್ಕೂ ಹೆಚ್ಚು ವೀವ್ಸ್ ಸಿಕ್ಕಿದ್ದು, ಈ ದೈತ್ಯ ರೋಲ್ ಕಂಡು ನೆಟ್ಟಿಗರು ದಂಗು ಬಡಿದಿದ್ದಾರೆ.
https://www.instagram.com/p/CUMRmEWj1Ug/?utm_source=ig_embed&ig_rid=49504f50-3460-4cf7-b84c-e14c87b7ff34