
ನವದೆಹಲಿ: ದೇಶಾದ್ಯಂತ ಗುರುವಾರ ಪೆಟ್ರೋಲ್ ಮತ್ತು ಡೀಸೆಲ್ ಬೆಲೆ ಏರಿಕೆಯಾಗಿದೆ. ಪೆಟ್ರೊಲ್ 25 ಪೈಸೆಯಷ್ಟು, ಡೀಸೆಲ್ 35 ಪೈಸೆಯಷ್ಟು ಹೆಚ್ಚಳವಾಗಿದೆ.
ಇಂದು ದರ ಪರಿಷ್ಕರಣೆ ನಂತರ ದೆಹಲಿಯಲ್ಲಿ ಪೆಟ್ರೋಲ್ ಬೆಲೆ ಪ್ರತಿ ಲೀಟರ್ ಗೆ 101.64 ರೂಪಾಯಿಗಳಾಗಿದ್ದು, ಡೀಸೆಲ್ 89.87 ರೂ.ಗೆ ಲಭ್ಯವಿದೆ.
ಮುಂಬೈನಲ್ಲಿ ಪೆಟ್ರೋಲ್ 107.71 ರೂ. ಗೆ ಮಾರಾಟವಾಗುತ್ತಿದ್ದು, ಡೀಸೆಲ್ ಬೆಲೆ 97.52 ರೂ. ಆಗಿದೆ. ಪೆಟ್ರೋಲ್ ಪ್ರತಿ ಲೀಟರ್‌ಗೆ 24 ಪೈಸೆ ಮತ್ತು ಡೀಸೆಲ್ ಬೆಲೆ 31 ಪೈಸೆ ಹೆಚ್ಚಳವಾಗಿದೆ.
ಚೆನ್ನೈನಲ್ಲಿ ಒಂದು ಲೀಟರ್ ಪೆಟ್ರೋಲ್ ಬೆಲೆ 21 ಪೈಸೆ ಹೆಚ್ಚಳವಾಗಿ 99.36 ರೂ. ತಲುಪಿದೆ. ಪ್ರತಿ ಲೀಟರ್ ಡೀಸೆಲ್ ಬೆಲೆ 28 ಪೈಸೆ ಹೆಚ್ಚಳವಾಗಿ 94.45 ರೂ.ಗೆ ತಲುಪಿದೆ.
ಬೆಂಗಳೂರಿನಲ್ಲಿ ಪೆಟ್ರೋಲ್ ಪ್ರತಿ ಲೀಟರ್ ಗೆ 105.18 ರೂ., ಡೀಸೆಲ್ ಪ್ರತಿ ಲೀಟರ್‌ಗೆ 95.38 ರೂ. ಇದೆ.
ಭಾರತ್ ಪೆಟ್ರೋಲಿಯಂ, ಇಂಡಿಯನ್ ಆಯಿಲ್ ಮತ್ತು ಹಿಂದುಸ್ತಾನ್ ಪೆಟ್ರೋಲಿಯಂ ಸೇರಿದಂತೆ ತೈಲ ಮಾರುಕಟ್ಟೆ ಕಂಪನಿಗಳಿಂದ ಪೆಟ್ರೋಲ್ ಮತ್ತು ಡೀಸೆಲ್ ಬೆಲೆಯನ್ನು ಪರಿಷ್ಕರಿಸಲಾಗಿದೆ. ಹೊಸ ಬೆಲೆಯನ್ನು ಪ್ರತಿದಿನ ಬೆಳಿಗ್ಗೆ 6 ಗಂಟೆಗೆ ಜಾರಿಗೆ ತರಲಾಗುತ್ತದೆ. ಮೌಲ್ಯವರ್ಧಿತ ತೆರಿಗೆಗಳು, ಸ್ಥಳೀಯ ಮತ್ತು ಸರಕು ಶುಲ್ಕಗಳು ಸ್ಥಳವನ್ನು ಅವಲಂಬಿಸಿ ಇಂಧನ ದರ ಬದಲಾಗುತ್ತವೆ.