ಬೆಂಗಳೂರು: ಒಂದರಿಂದ ಐದನೇ ತರಗತಿ ಆರಂಭಿಸುವ ಕುರಿತಾಗಿ ಯಾವುದೇ ಚರ್ಚೆ ನಡೆದಿಲ್ಲ ಎಂದು ಮುಖ್ಯಮಂತ್ರಿ ಬಸವರಾಜ ಬೊಮ್ಮಾಯಿ ಹೇಳಿದ್ದಾರೆ.
ಬೆಂಗಳೂರಿನಲ್ಲಿ ಮಾತನಾಡಿದ ಅವರು, ಶಾಲೆ ಆರಂಭಿಸುವ ಬಗ್ಗೆ ಇನ್ನು ಯಾವುದೇ ರೀತಿಯ ಚರ್ಚೆ ನಡೆದಿಲ್ಲ. ತಜ್ಞರು ಕೂಡ ಶಾಲೆ ಆರಂಭಿಸುವ ಕುರಿತಾಗಿ ಯಾವುದೇ ಸಲಹೆ ನೀಡಿಲ್ಲವೆಂದು ಸಿಎಂ ಹೇಳಿದ್ದಾರೆ.
ಪ್ರಾಥಮಿಕ ಮತ್ತು ಪ್ರೌಢ ಶಿಕ್ಷಣ ಸಚಿವ ಬಿ.ಸಿ. ನಾಗೇಶ್ ಅವರು, ರಾಜ್ಯದಲ್ಲಿ ದಸರಾ ನಂತರ ಹಂತ ಹಂತವಾಗಿ ಪ್ರಾಥಮಿಕ ಶಾಲೆ ಆರಂಭಿಸಲಾಗುವುದು. ಸಿಎಂ ಮತ್ತು ತಜ್ಞರೊಂದಿಗೆ ಚರ್ಚಿಸಿ ಈ ಬಗ್ಗೆ ತೀರ್ಮಾನಿಸಲಾಗುವುದು. ಒಂದರಿಂದ ಐದನೇ ತರಗತಿ ಆರಂಭಿಸಲು ಅನುಮತಿ ಸಿಗದಿದ್ದರೆ 3 ರಿಂದ 5 ನೇ ತರಗತಿ ಆರಂಭಿಸಲು ಮನವಿ ಮಾಡಲಾಗುವುದು ಎಂದು ಹೇಳಿದ್ದಾರೆ.