ರಾಜ್ಯದಲ್ಲೇಕೋ ಪಂಚೆ ಪುರಾಣ ಮುಗಿಯುವಂತೆ ಕಾಣುತ್ತಿಲ್ಲ. ಅಧಿವೇಶನದಲ್ಲಿ ವಿಪಕ್ಷ ನಾಯಕ ಸಿದ್ದರಾಮಯ್ಯ ಪಂಚೆ ಕಳಚಿದ ಸುದ್ದಿಯನ್ನು ಬಿಜೆಪಿ ನಾಯಕರು ಇನ್ನೂ ಆಡಿಕೊಳ್ಳುತ್ತಿರುವಾಗಲೇ ಇದೀಗ ಸ್ವತಃ ಬಿಜೆಪಿ ಸಚಿವರ ಪಂಚೆಯೇ ಸಾರ್ವಜನಿಕ ಸ್ಥಳದಲ್ಲಿ ಕಳಚಿದೆ..!
ಹೌದು..! ಮೆಟ್ಟಿಲು ಹತ್ತುವ ವೇಳೆ ಸಚಿವ ಮಾಧುಸ್ವಾಮಿ ಪಂಚೆ ಕಳಚಿದ್ದು ಸಾರ್ವಜನಿಕವಾಗಿಯೇ ತಮ್ಮ ಪಂಚೆಯನ್ನು ಬಿಗಿಯಾಗಿ ಕಟ್ಟಿಕೊಂಡಿದ್ದಾರೆ. ಏತ ನೀರಾವರಿ ಯೋಜನೆಗೆ ಚಾಲನೆ ನೀಡಿ ಪರಿಶೀಲನೆ ನಡೆಸುತ್ತಿದ್ದ ವೇಳೆ ಕೆಆರ್ಎಸ್ ಡೌನ್ ಸ್ಟ್ರೀಮ್ ಬ್ರಿಡ್ಜ್ ಬಳಿಯಲ್ಲಿ ಈ ಘಟನೆ ಸಂಭವಿಸಿದೆ. ವಿಡಿಯೋ ಚಿತ್ರೀಕರಣ ಮಾಡದಂತೆ ಮಾಧ್ಯಮಗಳಿಗೆ ಸಚಿವರು ಆಪ್ತರು ಸೂಚನೆ ನೀಡಿದರು ಎನ್ನಲಾಗಿದೆ.
ಕೆರೆಗಳಿಗೆ ನೀರು ತುಂಬಿಸುವ ಯೋಜನೆ ಉದ್ಘಾಟನೆ ಸಮಾರಂಭದಲ್ಲಿ ಸಣ್ಣ ನೀರಾವರಿ ಹಾಗೂ ಕಾನೂನು ಸಂಸದೀಯ ವ್ಯವಹಾರಗಳ ಸಚಿವ ಮಾಧುಸ್ವಾಮಿ ಭಾಗಿಯಾಗಿದ್ದರು. ಬಳಘಟ್ಟ ಗ್ರಾಮ ಪಂಚಾಯ್ತಿ ವ್ಯಾಪ್ತಿಯ 51 ಕೆರೆಗಳಿಗೆ ನೀರು ತುಂಬಿಸುವ ಯೋಜನೆ ಇದಾಗಿದೆ.