ಟೀಂ ಇಂಡಿಯಾ ನಾಯಕ ವಿರಾಟ್ ಕೊಹ್ಲಿ, ಟಿ-20 ನಾಯಕತ್ವ ತೊರೆಯುವ ಘೋಷಣೆ ಮಾಡಿದ್ದಾರೆ. ಕೊಹ್ಲಿ ಈ ಘೋಷಣೆ ಮಾಡ್ತಿದ್ದಂತೆ ಎಲ್ಲರನ್ನೂ ಅಚ್ಚರಿಗೊಂಡಿದ್ದರು.
ಕೊಹ್ಲಿ ಸಮಯ ಸರಿಯಾಗಿಲ್ಲ. ಕೊಹ್ಲಿಗೆ ನಾಯಕತ್ವ ತೊರೆಯುವಂತೆ ಬಿಸಿಸಿಐ ಸೂಚಿಸಿದೆ ಎಂಬ ಸುದ್ದಿಗಳು ಹರಿದಾಡ್ತಿದ್ದವು. ಈಗ ಬಿಸಿಸಿಐ ಈ ಬಗ್ಗೆ ಮೌನ ಮುರಿದಿದೆ.
ವಿರಾಟ್ ಕೊಹ್ಲಿ ನಾಯಕತ್ವ ತೊರೆಯುವ ನಿರ್ಧಾರದ ಬಗ್ಗೆ ಬಿಸಿಸಿಐ ಮಹತ್ವದ ಹೇಳಿಕೆ ನೀಡಿದೆ. ಬಿಸಿಸಿಐ ಖಜಾಂಚಿ ಅರುಣ್ ಧುಮಾಲ್, ವಿರಾಟ್ ಕೊಹ್ಲಿ, ಟಿ 20 ನಾಯಕತ್ವ ಕೆಳಗಿಳಿಯಲು ಯಾರು ಕಾರಣ ಎಂಬುದನ್ನು ಹೇಳಿದ್ದಾರೆ. ನಾಯಕತ್ವದಿಂದ ಕೆಳಗಿಳಿಯುವಂತೆ ಬಿಸಿಸಿಐ ಸೂಚನೆ ನೀಡಿಲ್ಲ. ಇದು ಅವರ ನಿರ್ಧಾರ. ನಾಯಕತ್ವದಿಂದ ಕೆಳಗಿಳಿಯುವಂತೆ ಬಿಸಿಸಿಐ, ಕೊಹ್ಲಿಗೆ ಏಕೆ ಹೇಳುತ್ತದೆ ? ಕೊಹ್ಲಿ ತಮ್ಮ ಕೆಲಸವನ್ನು ಉತ್ತಮವಾಗಿ ನಿರ್ವಹಿಸುತ್ತಿದ್ದಾರೆಂದು ಅವರು ಹೇಳಿದ್ದಾರೆ.
ಕೆಲವು ದಿನಗಳ ಹಿಂದೆ ಟೀಮ್ ಇಂಡಿಯಾದ ಹಿರಿಯ ಆಟಗಾರರೊಬ್ಬರು, ಇಂಗ್ಲೆಂಡ್ ಪ್ರವಾಸದಲ್ಲಿ ಕೊಹ್ಲಿಯ ವರ್ತನೆಯ ಬಗ್ಗೆ ಬಿಸಿಸಿಐಗೆ ದೂರು ನೀಡಿದ್ದರು ಎನ್ನಲಾಗಿದೆ. ಟೀಂ ಇಂಡಿಯಾದಲ್ಲಿ, ವಿರಾಟ್ ಕೊಹ್ಲಿ ವಿರುದ್ಧ ಕೆಲ ತಿಂಗಳ ಹಿಂದಿನಿಂದ ದಂಗೆ ಶುರುವಾಗಿದೆ. ಡ್ರೆಸ್ಸಿಂಗ್ ರೂಂನಲ್ಲಿ ವಿರಾಟ್ ಕೊಹ್ಲಿಯ ವರ್ತನೆಯ ಬಗ್ಗೆ ಅನೇಕ ಹಿರಿಯ ಆಟಗಾರರು ಅಸಮಾಧಾನಗೊಂಡಿದ್ದಾರೆ. ಬಿಸಿಸಿಐಗೆ ಈ ಬಗ್ಗೆ ದೂರು ನೀಡಿದ್ದಾರೆ. ಈ ಕಾರಣಕ್ಕೆ ಬಿಸಿಸಿಐ, ಕೊಹ್ಲಿ ಮೇಲೆ ಕೋಪಗೊಂಡಿತ್ತು ಎನ್ನಲಾಗಿದೆ. ಆದ್ರೆ ಕೊಹ್ಲಿ ವಿರುದ್ಧ ಯಾವ ಆಟಗಾರರು ದೂರು ನೀಡಿದ್ದಾರೆಂಬುದು ಬಹಿರಂಗವಾಗಿಲ್ಲ.