alex Certify ಟಿ-20 ವಿಶ್ವಕಪ್ ಗೆ ಧೋನಿ ಮಾರ್ಗದರ್ಶಕರಾಗಿದ್ದೇಕೆ…..? ರಹಸ್ಯ ಬಿಚ್ಚಿಟ್ಟ ಬಿಸಿಸಿಐ | Kannada Dunia | Kannada News | Karnataka News | India News
ಕನ್ನಡ ದುನಿಯಾ
    Dailyhunt JioNews

Kannada Duniya

ಟಿ-20 ವಿಶ್ವಕಪ್ ಗೆ ಧೋನಿ ಮಾರ್ಗದರ್ಶಕರಾಗಿದ್ದೇಕೆ…..? ರಹಸ್ಯ ಬಿಚ್ಚಿಟ್ಟ ಬಿಸಿಸಿಐ

ಟಿ-20 ವಿಶ್ವಕಪ್ ಗೆ ದಿನಗಣನೆ ಶುರುವಾಗಿದೆ. ಐಪಿಎಲ್ ಮಧ್ಯೆಯೇ ಟಿ-20 ವಿಶ್ವಕಪ್ ಬಗ್ಗೆ ಚರ್ಚೆ ನಡೆಯುತ್ತಿದೆ. ಟಿ-20 ವಿಶ್ವಕಪ್ ಗೆ ಬಿಸಿಸಿಐ, ಟೀಂ ಇಂಡಿಯಾ ತಂಡದ ಮಾರ್ಗದರ್ಶಕರಾಗಿ ಮಾಜಿ ನಾಯಕ ಮಹೇಂದ್ರ ಸಿಂಗ್ ಧೋನಿಯನ್ನು ನೇಮಿಸಿ ಎಲ್ಲರನ್ನು ಅಚ್ಚರಿಗೊಳಿಸಿತ್ತು.ಧೋನಿಯನ್ನು ಟೀಂ ಇಂಡಿಯಾದ ಮಾರ್ಗದರ್ಶಕರನ್ನಾಗಿ ಏಕೆ ಮಾಡಲಾಗಿದೆ ಎಂಬ ರಹಸ್ಯವನ್ನು ಬಿಸಿಸಿಐ ಬಹಿರಂಗಪಡಿಸಿದೆ.

ಬಿಸಿಸಿಐ ಖಜಾಂಚಿ ಅರುಣ್ ಧುಮಾಲ್ ಈ ಬಗ್ಗೆ ಮಾತನಾಡಿದ್ದಾರೆ. ಟಿ 20 ವಿಶ್ವಕಪ್ ನಲ್ಲಿ ಧೋನಿ ಭಾರತ ತಂಡದ ಜೊತೆಗಿದ್ರೆ ಖಂಡಿತವಾಗಿಯೂ ಲಾಭವಾಗಲಿದೆ ಎಂದಿದ್ದಾರೆ. ಧೋನಿ ಒಬ್ಬ ಮಹಾನ್ ನಾಯಕ. ಧೋನಿಯ ನಾಯಕತ್ವದಲ್ಲಿ, ಭಾರತ 2007ರಲ್ಲಿ ಟಿ-20 ವಿಶ್ವಕಪ್, 2010 ಮತ್ತು 2016ರಲ್ಲಿ ಏಷ್ಯಾ ಕಪ್, 2011ರಲ್ಲಿ ವಿಶ್ವಕಪ್ ಮತ್ತು 2013ರಲ್ಲಿ ಚಾಂಪಿಯನ್ಸ್ ಟ್ರೋಫಿಯನ್ನು ಗೆದ್ದಿದೆ. ಧೋನಿಯ ದಾಖಲೆ ಅದ್ಭುತವಾಗಿದೆ. ಐಸಿಸಿ ಟಿ 20 ವಿಶ್ವಕಪ್‌ಗೆ, ಧೋನಿ ತಂಡದ ಮಾರ್ಗದರ್ಶಕರಾಗಿರುವುದು ನಿಜಕ್ಕೂ ಅದ್ಭುತವಾಗಿದೆ ಎಂದವರು ಹೇಳಿದ್ದಾರೆ.

2007 ರ ಟಿ 20 ವಿಶ್ವಕಪ್ ಮತ್ತು 2011 ಐಸಿಸಿ ಏಕದಿನ ವಿಶ್ವಕಪ್‌ನಲ್ಲಿ ಟೀಮ್ ಇಂಡಿಯಾವನ್ನು ಚಾಂಪಿಯನ್ ಮಾಡಿದ ಕೀರ್ತಿ ಧೋನಿಗೆ ಲಭಿಸಿದೆ. ಈ ಬಾರಿಯೂ ಭಾರತದ ಭವಿಷ್ಯವನ್ನು ಅವರು ಬದಲಿಸಲಿದ್ದಾರೆಂಬ ನಿರೀಕ್ಷೆಯಲ್ಲಿ ಬಿಸಿಸಿಐ ಇದೆ. ವಿರಾಟ್ ಕೊಹ್ಲಿ, ಮೈದಾನದಲ್ಲಿ ಟೀಂ ಇಂಡಿಯಾ ನಾಯಕರಾಗಿರಬಹುದು, ಆದರೆ ಯೋಜನೆ ಧೋನಿಯದ್ದಾಗಿರುತ್ತದೆ. ಮೈದಾನದ ಹೊರಗಿನಿಂದ ಧೋನಿ, ಟೀಂ ಇಂಡಿಯಾ ನಾಯಕತ್ವ ವಹಿಸಲಿದ್ದಾರೆ. ಈ ಕಾರ್ಯತಂತ್ರದಿಂದಾಗಿ ಭಾರತಕ್ಕೆ ಟಿ 20 ವಿಶ್ವಕಪ್ ಗೆಲ್ಲುವ ಅತ್ಯುತ್ತಮ ಅವಕಾಶವಿದೆ.

Opinion Poll

  • ʼಮುಡಾʼ ಹಗರಣದಲ್ಲಿ ರಾಜೀನಾಮೆ ನೀಡ್ತಾರಾ ಸಿಎಂ ಸಿದ್ದರಾಮಯ್ಯ ?

    View Results

    Loading ... Loading ...