ದೆಹಲಿ: ಪೊಲೀಸ್ ಚೆಕ್ಪಾಯಿಂಟ್ನಲ್ಲಿ ತನ್ನ ಕಾರನ್ನು ನಿಲ್ಲಿಸಲು ನಿರಾಕರಿಸಿದಲ್ಲದೆ ವೇಗವಾಗಿ ಚಲಾಯಿಸಿ ಕಾರಿನ ಬಾನೆಟ್ನಲ್ಲಿ ಪೊಲೀಸ್ ಪೇದೆಯನ್ನು ಎಳೆದೊಯ್ದ ವ್ಯಕ್ತಿಗೆ ದೆಹಲಿ ಹೈಕೋರ್ಟ್ ಜಾಮೀನು ನೀಡಿದೆ.
ಪ್ರಕರಣದ ತನಿಖೆ ಬಹುತೇಕ ಪೂರ್ಣಗೊಂಡಿದೆ ಮತ್ತು ಪೊಲೀಸ್ ಸಾಕ್ಷಿಗಳ ಮೇಲೆ ಪ್ರಭಾವ ಬೀರಲು ಸಾಧ್ಯವಿಲ್ಲ ಎಂದು ಹೇಳುತ್ತಾ ದೆಹಲಿ ಹೈಕೋರ್ಟ್ ಆರೋಪಿಗೆ ಜಾಮೀನು ನೀಡಿ ಆದೇಶ ಹೊರಡಿಸಿದೆ. ಎಂಜಿನಿಯರಿಂಗ್ ಪದವೀಧರನಾದ ಆರೋಪಿಗೆ ಎರಡು ಶ್ಯೂರಿಟಿಯೊಂದಿಗೆ 75,000 ಮೊತ್ತದ ವೈಯಕ್ತಿಕ ಬಾಂಡ್ ನೊಂದಿಗೆ ಜಾಮೀನು ನೀಡಲಾಗಿದೆ.
ಈ ಕಾರಣಕ್ಕೆ ನೆಟ್ಟಿಗರ ಕೆಂಗಣ್ಣಿಗೆ ಗುರಿಯಾಯ್ತು ರೆಸ್ಟೋರೆಂಟ್
ಕಾರು ಚಾಲಕ ಶರ್ಮಾಗೆ ನ್ಯಾಯಾಲಯ ಷರತ್ತು ವಿಧಿಸಿ ಜಾಮೀನು ಮಂಜೂರು ಮಾಡಿದೆ. ಕೋರ್ಟ್ ಅನುಮತಿಯಿಲ್ಲದೆ ನಗರವನ್ನು ತೊರೆಯಬಾರದು, ಸಾಕ್ಷ್ಯಾಧಾರಗಳನ್ನು ತಿರುಚಬಾರದು ಮತ್ತು ಸಾಕ್ಷಿಗಳ ಮೇಲೆ ಪ್ರಭಾವ ಬೀರಲು ಪ್ರಯತ್ನಿಸಬಾರದು ಎಂದು ಕೋರ್ಟ್ ಷರತ್ತು ವಿಧಿಸಿದೆ.
ಅಲ್ಲದೆ ವಾರಕ್ಕೆ ಎರಡು ಬಾರಿ ಸಂಬಂಧಪಟ್ಟ ಪೊಲೀಸ್ ಠಾಣೆಗೆ ವರದಿ ಸಲ್ಲಿಸಬೇಕು, ತನ್ನ ಎಲ್ಲಾ ಮೊಬೈಲ್ ಸಂಖ್ಯೆಗಳನ್ನು ತನಿಖಾಧಿಕಾರಿಗೆ ನೀಡಬೇಕು ಮತ್ತು ಅವುಗಳನ್ನು ಯಾವಾಗಲೂ ಕಾರ್ಯನಿರ್ವಹಿಸುವಂತೆ ನೋಡಿಕೊಳ್ಳಬೇಕು ಎಂದು ನ್ಯಾಯಾಲಯ ಆದೇಶಿಸಿದೆ.