ಸದ್ಯ ಮೃತ ಪಿಂಚಣಿದಾರರ ಮಕ್ಕಳು ಅಥವಾ ಅವಲಂಬಿತರು ವಿಕಲಾಂಗರಾಗಿದ್ದರೆ ಅಥವಾ ತೀವ್ರತರ ಮಾನಸಿಕ ಸಮಸ್ಯೆಗಳಿಂದ ಬಳಲುತ್ತಿದ್ದರೆ, ಅಂಥವರು ಕೌಟುಂಬಿಕ ಪಿಂಚಣಿ ಪಡೆಯಬೇಕಾದಲ್ಲಿ ಮಾಸಿಕ ಆದಾಯವು ಒಂಭತ್ತು ಸಾವಿರ ರೂಪಾಯಿಗಿಂತ ಹೆಚ್ಚಿಗೆ ಇರುವಂತಿಲ್ಲ.
ಈ ಅರ್ಹತೆಯನ್ನು ಹೆಚ್ಚಿಸಿರುವ ಕೇಂದ್ರ ರಕ್ಷಣಾ ಸಚಿವಾಲಯವು, ಮೃತ ಸರಕಾರಿ ನೌಕರ/ ಪಿಂಚಣಿದಾರರು ಸರಕಾರದಿಂದ ಪಡೆದ ಕೊನೆಯ ಪಿಂಚಣಿ ಮೊತ್ತದ 30%ಗಿಂತ ಕಡಿಮೆಯಾಗಿ ಒಟ್ಟಾರೆ ಆದಾಯ ಇದ್ದರೆ ವಿಕಲಾಂಗ ಮಕ್ಕಳು /ಅವಲಂಬಿತರು ಕೌಟುಂಬಿಕ ಪಿಂಚಣಿ ಪಡೆಯಲು ಅರ್ಹರಾಗಿರುತ್ತಾರೆ ಎಂದಿದೆ.
ನಂಬಿದ್ರೆ ನಂಬಿ ಬಿಟ್ರೆ ಬಿಡಿ: 70 ವರ್ಷಗಳ ಬಳಿಕ ಅಮ್ಮ-ಮಗನ ಒಂದು ಮಾಡಿದ ಫೇಸ್ಬುಕ್
2022ರ ಫೆಬ್ರುವರಿ 8 ರಿಂದ ಇದು ಜಾರಿಗೆ ಬರಲಿದೆ. ಕೌಟುಂಬಿಕ ಪಿಂಚಣಿಯನ್ನು ಇಂಥವರಿಗೆ ಮಾತ್ರವೇ ನೀಡಲಾಗುವ ಉದ್ದೇಶವೆಂದರೆ, ಅವರ ಮಾಸಿಕ ಔಷಧ ಖರ್ಚಿಗೆ ನೆರವಾಗಬೇಕು ಎನ್ನುವುದಾಗಿದೆ.
ಕೇಂದ್ರೀಯ ನಾಗರಿಕ ಸೇವೆಗಳು (ಪಿಂಚಣಿ)ನಿಯಮಗಳ ಅನುಸಾರ, ಮೃತ ಸರಕಾರಿ ನೌಕರ ಅಥವಾ ಪಿಂಚಣಿದಾರರ ಮಕ್ಕಳು ಅಂಗವೈಕಲ್ಯ ಅಥವಾ ಮಾನಸಿಕ ಸ್ಥಿಮಿತ ಇಲ್ಲವಾದರೆ ಜೀವನ ನಿರ್ವಹಣೆಗೆ ಬೇರೊಬ್ಬರನ್ನು ಆಶ್ರಯಿಸಬೇಕಾಗಿರುತ್ತದೆ. ಅವರಿಗೆ ದುಡಿದು ತಿನ್ನುವುದು ಕಷ್ಟವಾಗಿರುತ್ತದೆ. ಹೀಗಾದಲ್ಲಿ ಅಂಥವರಿಗೆ ಜೀವನ ನಿರ್ವಹಣೆ ವೆಚ್ಚದ ರೂಪದಲ್ಲಿ ಪಿಂಚಣಿ ಸೌಲಭ್ಯ ಮುಂದುವರಿಯಲಿದೆ.
ಅಂಚೆ ಕಚೇರಿಯ ಈ ʼಪಿಂಚಣಿʼ ಯೋಜನೆ ಕುರಿತು ನಿಮಗೆ ತಿಳಿದಿರಲಿ ಮಾಹಿತಿ
ಇದರಲ್ಲೂ ಕೂಡ ಕೆಲವು ವರ್ಗೀಕರಣ ಮಾಡಲಾಗಿದ್ದು, ವಿಕಲಾಂಗತೆ 40-70% ಇದ್ದರೆ ಮಾಸಿಕ 500 ರೂ. ಮತ್ತು ವಿಕಲಾಂಗತೆ 75%ಗಿಂತ ಹೆಚ್ಚಿದ್ದರೆ (ಬಹುತೇಕ ಹಾಸಿಗೆ ಹಿಡಿದ ಸ್ಥಿತಿ) ಮಾಸಿಕ 1,200 ರೂ. ಪಿಂಚಣಿ ಕೇಂದ್ರ ಸರಕಾರದ ಕಡೆಯಿಂದ ನೀಡಲಾಗುತ್ತದೆ. ಕೌಟುಂಬಿಕ ಪಿಂಚಣಿ ಮೊತ್ತವನ್ನು ಸರಕಾರಿ ನೌಕರ ಪಡೆಯುತ್ತಿದ್ದ ಸಂಬಳ ಮೂಲವೇತನದ ಶೇ. 30ರಷ್ಟು ಎಂದು ಸಾಮಾನ್ಯವಾಗಿ ಲೆಕ್ಕ ಮಾಡಲಾಗುತ್ತದೆ. ಅಲ್ಲಿಗೆ ಮಾಸಿಕ 3500 ರೂ. ಅಂದಾಜು ಸಿಗಬಹುದು.