ಮಕ್ಕಳಿಗೆಂದೇ ವಿಶೇಷವಾಗಿ ಅಭಿವೃದ್ಧಿ ಪಡಿಸಲಾಗುತ್ತಿದ್ದ ಇನ್ಸ್ಟಾಗ್ರಾಂನ ಅವತರಣಿಕೆಯ ಕೆಲಸವನ್ನು ಫೇಸ್ಬುಕ್ ತಾತ್ಕಾಲಿಕವಾಗಿ ನಿಲ್ಲಿಸಿದೆ.
ಫೋಟೋ ಶೇರಿಂಗ್ ಅಪ್ಲಿಕೇಶನ್ನ ಈ ವರ್ಶನ್ ಅನ್ನು 13 ವರ್ಷದೊಳಗಿನ ಮಕ್ಕಳಿಗೆಂದೇ ವಿಶೇಷವಾಗಿ ಅಭಿವೃದ್ಧಿ ಪಡಿಸಲಾಗುತ್ತಿತ್ತು. ಈ ವಿಚಾರವನ್ನು ಸ್ಪಷ್ಟಪಡಿಸಿದ ಇನ್ಸ್ಟಾಗ್ರಾಂ ಮುಖ್ಯಸ್ಥ ಅಡಂ ಮೊಸ್ಸೆರಿ, ಸಣ್ಣ ವಯಸ್ಸಿನ ಬಳಕೆದಾರರಿಗೆ ಹೆತ್ತವರಿಂದ ನಿರ್ದೇಶಿಲ್ಪಟ್ಟ ಅನುಭವ ಕೊಡಮಾಡುವುದನ್ನು ಫೇಸ್ಬುಕ್ ಮಾಲೀಕತ್ವದ ಕಂಪನಿ ಮುಂದುವರೆಸಲಿದೆ ಎಂದಿದ್ದಾರೆ.
ವಿಶ್ವವಿಖ್ಯಾತ ಮೈಸೂರು ದಸರಾ ಉದ್ಘಾಟನೆಗೆ ಮಾಜಿ ಸಿಎಂ ಎಸ್.ಎಂ. ಕೃಷ್ಣ
ಅಪ್ಲಿಕೇಶನ್ನ ಉದ್ದೇಶವನ್ನು ಅಪಾರ್ಥ ಮಾಡಿಕೊಂಡಿರುವುದರ ಬಗ್ಗೆ ಅಸಮಾಧಾನ ವ್ಯಕ್ತಪಡಿಸಿದ ಮೊಸ್ಸೇರಿ, “ಈ ಅಪ್ಲಿಕೇಶನ್ ಪುಟ್ಟ ಮಕ್ಕಳಿಗೆ ಎಂದು ಯಾವತ್ತಿಗೂ ಅಂದುಕೊಂಡಿರಲಿಲ್ಲ. ಆದರೆ ಇದು 10-12 ವರ್ಷ ವಯೋಮಾನದ ಮಕ್ಕಳಿಗೆ,” ಎಂದು ಬರೆದಿದ್ದಾರೆ.
ಮನೆ ಹೊಂದುವ ಕನಸು ಕಂಡವರಿಗೆ ಸಿಹಿ ಸುದ್ದಿ
“ಪ್ರಾಜೆಕ್ಟ್ನ ಸುದ್ದಿ ಲೀಕ್ ಆಗಿದ್ದು, ಮುಂದೆ ಏನಾಗಲಿದೆ ಎಂದು ನಮ್ಮ ಅರಿವಿಗೆ ಬರುವ ಮುನ್ನವೇ ಜನರಿಗೆ ಕೆಟ್ಟ ಭಾವನೆ ಮೂಡಿದ್ದು, ಆ ಹಂತದಲ್ಲಿ ನಮ್ಮ ಬಳಿಕ ತೀರಾ ಕಡಿಮೆ ಉತ್ತರಗಳಿದ್ದವು. ಇದರ ಮೇಲೆ ಇನ್ನಷ್ಟು ಸಮಯ ತೆಗೆದುಕೊಳ್ಳಬೇಕು ಎಂಬುದು ನಮಗೆ ಸ್ಪಷ್ಟವಾಗಿದೆ” ಎಂದಿದ್ದಾರೆ ಮೊಸ್ಸೇರಿ.
“ವಯಸ್ಸಿಗೆ ತಕ್ಕಂತೆ ಇರುವ ಅಪ್ಲಿಕೇಶನ್ ಅನ್ನು ತಮ್ಮ ಮಕ್ಕಳು ಬಳಸುವುದನ್ನು ಹೆತ್ತವರು ಸಮ್ಮತಿಸುತ್ತಾರೆ ಎಂದು ನಾವು ನಂಬಿದ್ದೇವೆ. ಆದರೆ ನಾವು ಹೆತ್ತವರ ಆತಂಕ ಹಾಗೂ ಕಾಳಜಿಗಳನ್ನು ಹಗುರವಾಗಿ ತೆಗೆದುಕೊಳ್ಳಲು ಆಗುವುದಿಲ್ಲ. ನಾವು ಇದನ್ನು ಸರಿಯಾಗಿ ಮಾಡಬೇಕಿದೆ,” ಎಂದಿದ್ದಾರೆ ಮೊಸ್ಸೇರಿ.