alex Certify ದಕ್ಷಿಣ ರಾಜ್ಯಗಳ ಮನೆಗಳಲ್ಲಿ ಸಾಲದ ಹೊರೆ ಅಧಿಕ; ಅಧ್ಯಯನ ವರದಿಯಲ್ಲಿ ಕುತೂಹಲಕಾರಿ ಮಾಹಿತಿ ಬಹಿರಂಗ | Kannada Dunia | Kannada News | Karnataka News | India News
ಕನ್ನಡ ದುನಿಯಾ
    Dailyhunt JioNews

Kannada Duniya

ದಕ್ಷಿಣ ರಾಜ್ಯಗಳ ಮನೆಗಳಲ್ಲಿ ಸಾಲದ ಹೊರೆ ಅಧಿಕ; ಅಧ್ಯಯನ ವರದಿಯಲ್ಲಿ ಕುತೂಹಲಕಾರಿ ಮಾಹಿತಿ ಬಹಿರಂಗ

ದೇಶದ ವಿವಿಧೆಡೆಗಳಿಗಿಂತಲೂ ದಕ್ಷಿಣ ರಾಜ್ಯಗಳ ಮನೆಗಳಲ್ಲಿ ಸಾಲದ ಪ್ರಮಾಣ ಅಧಿಕವಾಗಿದೆ ಎಂದು ಇಂಡಿಯಾ ರೇಟಿಂಗ್ಸ್‌ ಏಜೆನ್ಸಿಯ ಅಧ್ಯಯನ ವರದಿಯೊಂದರಿಂದ ತಿಳಿದುಬಂದಿದೆ.

ಅಖಿಲ ಭಾರತ ಸಾಲ ಮತ್ತು ಹೂಡಿಕೆ ಸಮೀಕ್ಷೆಯ (ಏಯ್ಡಿಸ್) 2013-2019ರ ನಡುವಿನ ದತ್ತಾಂಶವನ್ನು ಆಧರಿಸಿ, ದಕ್ಷಿಣ ಭಾರತದ ಗ್ರಾಮೀಣ ಹಾಗೂ ನಗರ ಪ್ರದೇಶಗಳೆರಡರಲ್ಲೂ ಸಾಲದ ಪ್ರಮಾಣ ಹೆಚ್ಚಾಗಿದೆ ಎಂದು ಇಂಡಿಯಾ ರೇಟಿಂಗ್ಸ್ ತಿಳಿಸುತ್ತದೆ.

ಕೋವಿಡ್ ಮರಣ: ಬಿಪಿಎಲ್ ಕುಟುಂಬಕ್ಕೆ 1 ಲಕ್ಷ ರೂ. ಪರಿಹಾರಕ್ಕಾಗಿ ಅರ್ಜಿ ಆಹ್ವಾನ

2019ರಲ್ಲಿ ಗ್ರಾಮೀಣ ಪ್ರದೇಶದಲ್ಲಿ 67.2%ನಷ್ಟು ಮನೆಗಳು ಸಾಲದ ಹೊರೆಯಲ್ಲಿದ್ದ ತೆಲಂಗಾಣ ಈ ವಿಚಾರದಲ್ಲಿ ಮೊದಲ ಸ್ಥಾನದಲ್ಲಿದ್ದರೆ, ಗ್ರಾಮಾಂತರ ಪ್ರದೇಶದ ಕೇವಲ 6.6%ರಷ್ಟು ಮನೆಗಳು ಸಾಲದಲ್ಲಿರುವ ನಾಗಾಲ್ಯಾಂಡ್ ಪಟ್ಟಿಯಲ್ಲಿ ಅಂತಿಮ ಸ್ಥಾನದಲ್ಲಿದೆ.

ನಗರ ಪ್ರದೇಶಗಳ ಮನೆಗಳ ಪೈಕಿ 47.8%ರಷ್ಟು ಸಾಲದಲ್ಲಿರುವ ಕೇರಳ ಮೊದಲ ಸ್ಥಾನದಲ್ಲಿದ್ದರೆ, ನಗರ ಪ್ರದೇಶದ 5.1% ಮನೆಗಳು ಸಾಲದಲ್ಲಿರುವ ಮೇಘಾಲಯ ಈ ಪಟ್ಟಿಯಲ್ಲಿ ಅತ್ಯಂತ ಕೆಳಮಟ್ಟದಲ್ಲಿದೆ.

ದೇಶದ ಈ ಐಟಿ ಕಂಪನಿಯಲ್ಲಿ ಇನ್ಮುಂದೆ ವಾರಕ್ಕೆ 4 ದಿನ ಮಾತ್ರವೇ ಕೆಲಸ…..!

ದೇಶದ ಇತರೆ ಭಾಗಗಳಿಗಿಂತ ತಲಾ ಆದಾಯ ಹೆಚ್ಚಿರುವ ದಕ್ಷಿಣ ರಾಜ್ಯಗಳಲ್ಲೇ ಸಾಲದ ಪ್ರಮಾಣವೂ ಹೆಚ್ಚಿರುವುದು ಗಮನಾರ್ಹ ಸಂಗತಿಯಾಗಿದೆ.

Opinion Poll

  • ʼಮುಡಾʼ ಹಗರಣದಲ್ಲಿ ರಾಜೀನಾಮೆ ನೀಡ್ತಾರಾ ಸಿಎಂ ಸಿದ್ದರಾಮಯ್ಯ ?

    View Results

    Loading ... Loading ...