ಸೌದಿ ಮಹಿಳೆಯರಿಗೆ ಸೈಕ್ಲಿಂಗ್ ಕ್ರೇಜ಼್ ಹುಟ್ಟಿಸುತ್ತಿದ್ದಾರೆ ಈ ಮಹಿಳೆ…! 29-09-2021 8:03AM IST / No Comments / Posted In: Latest News, Live News, International ಮಹಿಳೆಯರು ಕ್ರೀಡೆಗಳಲ್ಲಿ ಭಾಗವಹಿಸಲು ಅನುಮತಿ ಇಲ್ಲದ ಕಟ್ಟರ್ ಪಂಥೀಯ ಸೌದಿ ಅರೇಬಿಯಾದ ಬೀದಿಗಳಲ್ಲಿ ಸೈಕಲ್ ತುಳಿದು ಸಾಗುವುದು ಅಸಾಧ್ಯದ ಮಾತೇ ಎಂದು ಸಮರ್ ರಹ್ಬಿನಿ ಅಂದುಕೊಂಡಿದ್ದರು. ಈ ಕಾರಣಕ್ಕೆ ‘ಮಹೇಶ್ ಬಾಬು’ ಬಗ್ಗೆ ಬೇಸರಗೊಂಡಿದ್ದಾರೆ ಅಭಿಮಾನಿಗಳು ಆದರೆ ಇದೀಗ ಸಮರ್ ಕೆಂಪು ಸಮುದ್ರದ ತೀರದಲ್ಲಿರುವ ಜೆಡ್ಡಾ ನಗರದಲ್ಲಿ ಮಹಿಳೆಯರು ಹಾಗೂ ಪುರುಷರಿಗೆ ಸೈಕ್ಲಿಂಗ್ ಕ್ಲಬ್ ನಡೆಸುತ್ತಿದ್ದಾರೆ. ಸೌದಿಯಲ್ಲಿ ಸಾಮಾಜಿಕ ಸುಧಾರಣೆಗಳು ನಿಧಾನವಾಗಿ ಆಗುತ್ತಿದ್ದರೂ ಸಹ ಈ ಮಟ್ಟದಲ್ಲಿ ಮಹಿಳೆಯೊಬ್ಬರು ದಿಟ್ಟತನ ತೋರಿರುವುದು ಹಲವರ ಹುಬ್ಬೇರಿಸಿದೆ. ತಮ್ಮ ಕ್ಲಬ್‌ಗೆ ’ಕರೇಜ್’ (ಧೈರ್ಯ) ಎಂದು ಹೆಸರಿಡಲು ನಿರ್ಧರಿಸಿದ ಸಮರ್, “ನಾವು ಏನು ಮಾಡುತಿದ್ದೇವೋ ಅದಕ್ಕೆ ಧೈರ್ಯ ಬೇಕು…. ಬೀದಿಗಳಿಗೆ ಇಳಿದು, ಜನದಟ್ಟಣೆ ಇರುವ ಪ್ರದೇಶಗಳಲ್ಲಿ ಅಭ್ಯಾಸ ಮಾಡಲು,” ಎಂದು ತಿಳಿಸಿದ್ದಾರೆ. ನಿಮ್ಮ ಹಸ್ತದಲ್ಲೂ ಈ ಅಕ್ಷರ ಮೂಡಿದ್ರೆ ಬದಲಾಗಲಿದೆ ʼಅದೃಷ್ಟʼ “2017ಕ್ಕೂ ಮುನ್ನ ಪರಿಸ್ಥಿತಿ ಬಹಳ ಕೆಟ್ಟದಾಗಿತ್ತು. ಮಹಿಳೆಯರನ್ನು ಕ್ರೀಡೆಗಳಲ್ಲಿ ನೋಡಲು ಸಮಾಜ ಇಷ್ಟಪಡದೇ ಇದ್ದ ಕಾರಣಕ್ಕೆ, ಸೈಕ್ಲಿಂಗ್‌ನಲ್ಲಿ…. ಆದರೆ ಈಗ ದೊಡ್ಡ ಸಂಖ್ಯೆಯಲ್ಲಿ ಮಹಿಳೆಯರು ಪ್ರತಿನಿತ್ಯದ ಜೀವನದಲ್ಲಿ ಮಹಿಳೆಯರ ಸೈಕ್ಲಿಂಗ್ ಅನ್ನು ಸಾಮಾನ್ಯ ಎಂಬಂತೆ ಮಾಡಿಬಿಟ್ಟಿದ್ದಾರೆ,” ಎನ್ನುತ್ತಾರೆ ಸಮರ್. ವಾರದಲ್ಲಿ ಎರಡು ದಿನ ರೈಡಿಂಗ್ ಪಾಠ ಹೇಳಿಕೊಡುವ ಸಮರ್, ಆಗಾಗ ಬೈಕ್ ಟೂರ್‌ಗಳನ್ನು ಆಯೋಜಿಸುತ್ತಿರುತ್ತಾರೆ. ಕಡಿಮೆ ಶುಲ್ಕದಲ್ಲಿ ಬೈಕ್‌ಗಳು ಹಾಗೂ ಇತರೆ ಎಲ್ಲಾ ಅಗತ್ಯ ಸಲಕರಣೆಗಳನ್ನು ಬಾಡಿಗೆಗೆ ನೀಡುವ ಕ್ಲಬ್, ಬಾಡಿಗೆ ಕಟ್ಟಲಾಗದ ಮಂದಿಗೆ ಉಚಿತವಾಗಿ ನೀಡುತ್ತದೆ ಎನ್ನುತ್ತಾರೆ ಅವರು. ಅಮಲೇರಿರುವುದು ಇನ್ಮೇಲೆ ಫೋನಿನಲ್ಲೇ ಗೊತ್ತಾಗುತ್ತೆ ಹುಷಾರ್…! “ಮಗುವಾಗಿದ್ದಾಗ ಸೈಕಲ್ ತುಳಿಯುತ್ತಿದ್ದೆ. ಈಗ ಮತ್ತೊಮ್ಮೆ ಈ ಚಟುವಟಿಕೆಯಲ್ಲಿ ಭಾಗಿಯಾಗಲು ನನಗೆ ಬಹಳ ಸಮಯ ಹಿಡಿದಿದೆ. ಈಗ ಏನಾಗುತ್ತಿದೆಯೋ ಅದು ನಮಗೆ ಹೊಸದಾಗಿದ್ದು, ಮಹಿಳೆಯರು ತಮ್ಮ ಹವ್ಯಾಸಗಳನ್ನು ಕಂಡುಕೊಳ್ಳಲು ಅವಕಾಶ ನೀಡಿರುವುದು ಬಹಳ ಸುಂದರವಾದ ವಿಚಾರ,” ಎಂದು ನಾಲ್ವರು ಮಕ್ಕಳ ತಾಯಿಯಾದ 44 ವರ್ಷದ ಫಾತಿಮಾ ಸಲೇಂ ತಿಳಿಸಿದ್ದಾರೆ. ತಲೆಗೆ ಸ್ಕಾರ್ಫ್ ಧರಿಸಿದ ಫಾತಿಮಾ, ಪಿಂಕ್ ಟೀ-ಶರ್ಟ್ ಹಾಗೂ ಟ್ರಾಕ್‌ಸೂಟ್‌ನಲ್ಲಿ ಸೈಕ್ಲಿಂಗ್‌ಗೆ ಇಳಿದಿದ್ದಾರೆ. “ಸೌದಿಯ ಪ್ರತಿ ಮಹಿಳೆಯೂ ಸೈಕಲ್ ತುಳಿಯುವುದನ್ನು ನೋಡುವುದೇ ನನ್ನ ಕನಸು,” ಎನ್ನುತ್ತಾರೆ ಸಮರ್.