ಸಾಮಾಜಿಕ ಜಾಲತಾಣದ ಪ್ರಭಾವದಿಂದ ಬಾಂಗ್ಲಾದೇಶದ 82 ವರ್ಷದ ವ್ಯಕ್ತಿಯೊಬ್ಬರು ಶತಾಯುಷಿಯಾದ ತಮ್ಮ ತಾಯಿಯನ್ನು 70 ವರ್ಷಗಳ ಬಳಿಕ ಮತ್ತೆ ಕೂಡಿಕೊಂಡಿದ್ದಾರೆ.
ಅಬ್ದುಲ್ ಕುದ್ದುಸ್ ಮುನ್ಸಿ ಹೆಸರಿನ ಈತ ತನ್ನ 10ನೇ ವಯಸ್ಸಿನಲ್ಲಿ ಚಿಕ್ಕಪ್ಪನೊಂದಿಗೆ ವಾಸಿಸಲು ಕುಟುಂಬ ತೊರೆದವರು ತಮ್ಮಿಬ್ಬರು ಸಹೋದರಿಯರಿಂದ ದತ್ತು ಪಡೆಯಲ್ಪಟ್ಟರು.
“ಇದು ನನ್ನ ಜೀವನದ ಅತ್ಯಂತ ಸಂತಸದ ದಿನ,” ಎಂದು 1939ರಲ್ಲಿ ಪೂರ್ವದ ಗಡಿ ಜಿಲ್ಲೆ ಭ್ರಮಣ್‌ಬಾರಿಯಾದಲ್ಲಿ ಜನಿಸಿದ 82 ವರ್ಷದ ಅಬ್ದುಲ್ ತಿಳಿಸಿದ್ದಾರೆ.
ಏಪ್ರಿಲ್‌ನಲ್ಲಿ ಬ್ಯುಸಿನೆಸ್‌ಮನ್ ಒಬ್ಬರು ಕುದ್ದುಸ್‌ರ ಚಿತ್ರವೊಂದನ್ನು ಫೇಸ್ಬುಕ್‌ನಲ್ಲಿ ಪೋಸ್ಟ್ ಮಾಡಿ, ಆತನ ಸಂಬಂಧಿಗಳ ಸುಳಿವು ಸಿಕ್ಕರೆ ತಿಳಿಸಲು ಮನವಿ ಮಾಡಿಕೊಂಡಿದ್ದರು. ತನ್ನ ಹೆತ್ತವರ ಹೆಸರು ಊರನ್ನು ಬಿಟ್ಟರೆ ಕುದ್ದುಸ್‌ಗೆ ಬೇರೇನೂ ಗೊತ್ತಿರಲಿಲ್ಲ.
BDA ಉಚಿತ ನಿವೇಶನ ಹಂಚಿಕೆ: ಹುತಾತ್ಮ ಯೋಧರ ಕುಟುಂಬಕ್ಕೆ ಸೈಟ್ ಹಕ್ಕುಪತ್ರ ವಿತರಣೆ
ಕುದ್ದುಸ್‌ರ ದೂರದ ಸಂಬಂಧಿಯೊಬ್ಬರು ಈ ವಿಚಾರ ತಿಳಿದು, ಆತನ ತಾಯಿ ಮೊಂಗೊಲಾ ನೆಸ್ಸಾ ಇನ್ನೂ ಜೀವಂತವಿದ್ದಾರೆ ಎಂದು ತಿಳಿಸಿದ್ದಾರೆ. ಈ ವಿಷಯ ಅರಿತ ಕುದ್ದುಸ್, ಪಶ್ಚಿಮದಲ್ಲಿರುವ ರಾಜ್‌ಶಾಹಿ ನಗರದಿಂದ 350 ಕಿಮೀ ದೂರ ಕ್ರಮಿಸಿ ತಮ್ಮ ತಾಯಿಯನ್ನು ಕೂಡಿಕೊಂಡಿದ್ದಾರೆ. ಕುದ್ದುಸ್‌ಗೆ ಮೂವರು ಗಂಡು ಮಕ್ಕಳು ಹಾಗೂ ಐವರು ಹೆಣ್ಣು ಮಕ್ಕಳಿದ್ದಾರೆ.
ʼಫಾರ್ಮ್ 16ʼ ಅಂದರೇನು…? ಇಲ್ಲಿದೆ ಈ ಕುರಿತ ಉಪಯುಕ್ತ ಮಾಹಿತಿ
“ನನ್ನ ತಾಯಿಗೆ ಬಹಳ ವಯಸ್ಸಾಗಿದ್ದು ಸರಿಯಾಗಿ ಮಾತನಾಡಲು ಆಗುತ್ತಿಲ್ಲ. ನನ್ನನ್ನು ಕಂಡ ಕೂಡಲೇ ಕೈಗಳನ್ನು ಹಿಡಿದು ಆಕೆ ಕಣ್ಣೀರಿಡುತ್ತಿದ್ದರು. ನಿನ್ನ ಮಗ ಮರಳಿ ಬಂದಿದ್ದು ನೀನೀಗ ಚಿಂತಿಸುವ ಅಗತ್ಯವಿಲ್ಲ ಎಂದು ನಾನು ಆಕೆಗೆ ಹೇಳಿದೆ,” ಎಂದು ತಾಯಿಯನ್ನು ಭೇಟಿ ಮಾಡಿದ ಕುದ್ದುಸ್ ತಿಳಿಸಿದ್ದಾರೆ.
ಅಮ್ಮ-ಮಗನ ಈ ಬೆಸುಗೆಯನ್ನು ನೋಡಲು ಬಂದ ನೂರಾರು ಗ್ರಾಮಸ್ಥರ ಕಣ್ಣಲ್ಲೂ ಭಾವಧಾರೆ ಜಿನುಗಿತ್ತು ಎಂದು ಪ್ರತ್ಯಕ್ಷದರ್ಶಿಗಳು ತಿಳಿಸಿದ್ದಾರೆ.