alex Certify ಸ್ಮಾರ್ಟ್‌ ಫೋನ್‌ ಖರೀದಿ ಲೆಕ್ಕಾಚಾರದಲ್ಲಿದ್ದವರಿಗೆ ಭರ್ಜರಿ ಬಂಪರ್‌ ಸುದ್ದಿ | Kannada Dunia | Kannada News | Karnataka News | India News
ಕನ್ನಡ ದುನಿಯಾ
    Dailyhunt JioNews

Kannada Duniya

ಸ್ಮಾರ್ಟ್‌ ಫೋನ್‌ ಖರೀದಿ ಲೆಕ್ಕಾಚಾರದಲ್ಲಿದ್ದವರಿಗೆ ಭರ್ಜರಿ ಬಂಪರ್‌ ಸುದ್ದಿ

Amazon Great Indian Festival Sale 2021: Deals on Smartphones, Electronics Revealed | Technology Newsಶಾಪಿಂಗ್ ಗೀಳಿನ ಮಂದಿ ಭಾರೀ ಉತ್ಸುಕತೆಯಿಂದ ಕಾಯುತ್ತಿರುವ ಅಮೆಜ಼ಾನ್‌ನ ಗ್ರೇಟ್ ಇಂಡಿಯನ್ ಶಾಪಿಂಗ್ ಫೆಸ್ಟಿವಲ್‌ ಅಕ್ಟೋಬರ್‌ 3ರಿಂದ ಆರಂಭವಾಗಲಿದೆ.

ಅನೇಕ ಸ್ಮಾರ್ಟ್‌ಫೋನ್‌ಗಳು, ಎಲೆಕ್ಟ್ರಾನಿಕ್ ವಸ್ತುಗಳು, ವೈರ್‌ಲೆಸ್‌ ಸ್ಟೀರಿಯೋ, ಇಯರ್‌ಫೋನ್‌ಗಳು, ಸ್ಮಾರ್ಟ್‌ವಾಚ್‌ಗಳು, ಟ್ಯಾಬ್ಲೆಟ್‌ಗಳು ಹಾಗೂ ಕ್ಯಾಮೆರಾಗಳ ಮೇಲೆ ವಿಶೇಷ ಆಫರ್‌ಗಳನ್ನು ಕೊಡಲಾಗಿದೆ. ಇದರೊಂದಿಗೆ ಅಮೆಜ಼ಾನ್‌ ಉತ್ಪನ್ನಗಳಾದ ಎಕೋ, ಫೈರ್‌ ಟಿವಿ ಹಾಗೂ ಕಿಂಡಲ್‌ಗಳೂ ಸಹ ಬಹಳ ಕಡಿಮೆ ಬೆಲೆಯಲ್ಲಿ ಸಿಗಲಿವೆ.

ಈ ರಾಶಿಯವರಿಗಿದೆ ಇಂದು ಉದ್ಯಮದ ಎಲ್ಲಾ ಪ್ರಯತ್ನಗಳಲ್ಲಿ ಯಶಸ್ಸು

ತಿಂಗಳು ಫೂರ್ತಿ ಇರಲಿರುವ ಶಾಪಿಂಗ್ ಹಬ್ಬದ ಮಾಸದಲ್ಲಿ ಜನಪ್ರಿಯ ಬ್ರಾಂಡ್‌ಗಳಾದ ಆಪಲ್, ಎಚ್‌ಪಿ, ಲೆನೋವೋ, ಒನ್‌ಪ್ಲಸ್, ಸ್ಯಾಮ್ಸಂಗ್, ಸೋನಿ ಹಾಗೂ ಶಿಯೋಮಿ ಉತ್ಪನ್ನಗಳು ಎಕ್ಸ್‌ಚೇಂಜ್‌ ಆಫರ್‌ಗಳಲ್ಲಿ, ವೆಚ್ಚರಹಿತ ಇಎಂಐಗಳಲ್ಲಿ ಸಿಗಲಿವೆ.

ವಿವೋ ವಿ21ಇ 5ಜಿ ಸ್ಮಾರ್ಟ್‌ಫೋನ್‌ 24,990 ರೂ.ಗಳಿಗೆ ಲಭ್ಯವಿದ್ದು, ವಿವೋ ವೈ73 29,990, ವಿವೋ ಎಕ್ಸ್‌60 ಪ್ರೋ 49,990 ರೂ.ಗೆ ಸಿಗಲಿದೆ. ಇದೇ ವೇಳೆ ಸ್ಯಾಮ್ಸಂಗ್ ಗ್ಯಾಲಾಕ್ಸಿ ನೋಟ್ 20 – 58,260 ರೂ.ಗೆ ಲಭ್ಯವಿದ್ದು, ಕ್ವಾಲ್ಕಾಂ ಸ್ನಾಪ್‌ಡ್ರಾಗನ್ 865+ ಎಸ್‌ಓಸಿ ಸ್ಯಾಮ್ಸಂಗ್ ಗ್ಯಾಲಾಕ್ಸಿ ನೋಟ್ 20 ಅಲ್ಟ್ರಾ 5ಜಿ ಈ ಸೇಲ್‌ ವೇಳೆ 69,999 ರೂ.ಗಳಿಗೆ ದೊರಕಲಿದೆ.

ಮನೆ ಹೊಂದುವ ಕನಸು ಕಂಡವರಿಗೆ ಸಿಹಿ ಸುದ್ದಿ

ಲ್ಯಾಪ್ಟಾಪ್‌ಗಳ ಮೇಲೆ 50%ವರೆಗೆ ರಿಯಾಯಿತಿ, ಹೆಡ್‌ಫೋನ್‌ಗಳು ಹಾಗೂ ಸ್ಪೀಕರ್‌ಗಳ ಮೇಲ 80%ವರೆಗೆ, ಸ್ಮಾರ್ಟ್‌ವಾಚ್‌ಗಳ ಮೇಲೆ 60%, ಟ್ಯಾಬ್ಲೆಟ್‌ಗಳ ಮೇಲೆ 45% ಹಾಗೂ ಕ್ಯಾಮೆರಾ ಮತ್ತು ಅಕ್ಸೆಸರಿಗಳ ಮೇಲೆ 60% ಮತ್ತು ಟಿವಿ ಅಪ್ಲೈಯನ್ಸ್‌ಗಳ ಮೇಲೆ 65% ರಿಯಾಯಿತಿ ಇರಲಿದೆ.

ಸೇಲ್‌ನಲ್ಲಿ ಅಮೆಜ಼ಾನ್ ಪ್ರೈಂ ಸದಸ್ಯರಿಗೆ ವಿಶೇಷವಾದ ಆಕ್ಸೆಸ್ ಇರಲಿದೆ.

ಇದೇ ವೇಳೆ ಅಮೆಜ಼ಾನ್‌ನ ಪ್ರತಿಸ್ಫರ್ಧಿ ಫ್ಲಿಪ್‌ಕಾರ್ಟ್ ಸಹ ತನ್ನ ಬಿಗ್ ಬಿಲಿಯನ್ ಡೇಸ್ ಶಾಪಿಂಗ್ ಮೇಳವನ್ನು ಅಕ್ಟೋಬರ್‌ 3ರಿಂದಲೇ ಆರಂಭಿಸಲಿದೆ.

Opinion Poll

  • ʼಮುಡಾʼ ಹಗರಣದಲ್ಲಿ ರಾಜೀನಾಮೆ ನೀಡ್ತಾರಾ ಸಿಎಂ ಸಿದ್ದರಾಮಯ್ಯ ?

    View Results

    Loading ... Loading ...