ಮಂಗಳೂರು: ಮಂಗಳೂರಲ್ಲಿ ಹಾಡಹಗಲೇ ಹಲ್ಲೆ ಮಾಡಿ 4.2 ಲಕ್ಷ ರೂಪಾಯಿ ದೋಚಲಾಗಿದೆ. ಮಂಗಳೂರಿನ ಚಿಲಿಂಬಿ ಬಳಿ ಬ್ಯಾಟ್ ನಿಂದ ಹಲ್ಲೆ ಮಾಡಿ ದರೋಡೆ ಮಾಡಲಾಗಿದೆ.
ಬ್ಯಾಂಕ್ ಗೆ ಹಣ ಕಟ್ಟಲು ಹೋಗುತ್ತಿದ್ದಾಗ ಅಡ್ಡಗಟ್ಟಿ ದರೋಡೆ ನಡೆಸಲಾಗಿದೆ. ಬೈಕ್ ನಲ್ಲಿ ಬಂದಿದ್ದ ದುಷ್ಕರ್ಮಿಗಳು ಭೋಜಪ್ಪ ಎಂಬುವರ ಮೇಲೆ ಹಲ್ಲೆ ಮಾಡಿ ಹಣ ದೋಚಿ ಪರಾರಿಯಾಗಿದ್ದಾರೆ. ಮಣ್ಣಗುಡ್ಡದ ಐಶ್ವರ್ಯಾ ಪೆಟ್ರೋಲ್ ಬ್ಯಾಂಕ್ ಮ್ಯಾನೇಜರ್ ಭೋಜಪ್ಪ ಹಣ ಕಟ್ಟಲು ಹೋಗುವಾಗ ಕೃತ್ಯವೆಸಗಲಾಗಿದೆ. ಉರ್ವಾ ಪೊಲೀಸ್ ಠಾಣೆಯಲ್ಲಿ ಪ್ರಕರಣ ದಾಖಲಾಗಿದೆ.