alex Certify ಈ ರಾಶಿಯವರಿಗಿದೆ ಇಂದು ಉದ್ಯಮದ ಎಲ್ಲಾ ಪ್ರಯತ್ನಗಳಲ್ಲಿ ʼಯಶಸ್ಸುʼ | Kannada Dunia | Kannada News | Karnataka News | India News
ಕನ್ನಡ ದುನಿಯಾ
    Dailyhunt JioNews

Kannada Duniya

ಈ ರಾಶಿಯವರಿಗಿದೆ ಇಂದು ಉದ್ಯಮದ ಎಲ್ಲಾ ಪ್ರಯತ್ನಗಳಲ್ಲಿ ʼಯಶಸ್ಸುʼ

ಮೇಷ : ಹಿರಿಯರಿಗೆ ಗೌರವ ಕೊಡುವ ನಿಮ್ಮ ಒಳ್ಳೆಯ ಗುಣವು ಕುಟುಂಬದಲ್ಲಿ ಪ್ರಶಂಸೆಗೆ ಪಾತ್ರವಾಗಲಿದೆ. ವಿದ್ಯಾರ್ಥಿಗಳ ಭವಿಷ್ಯಕ್ಕೆ ದೊಡ್ಡ ತಿರುವನ್ನೇ ನೀಡಬಲ್ಲ ಅವಕಾಶವೊಂದು ಸಿಗಲಿದೆ. ಉದ್ಯಮದಲ್ಲಿ ಎಲ್ಲಾ ಪ್ರಯತ್ನಗಳಲ್ಲಿ ಯಶಸ್ಸು ಸಿಗಲಿದೆ.

ವೃಷಭ : ನೀವು ಪ್ರೀತಿಸುತ್ತಿರುವ ವಿಚಾರವು ಮನೆಯವರಿಗೆ ತಿಳಿದು ದೊಡ್ಡ ಕಲ್ಲೋಲಕ್ಕೆ ಸಾಕ್ಷಿಯಾಗಲಿದ್ದೀರಿ. ಕಚೇರಿ ಕೆಲಸದ ನಿಮಿತ್ತ ದೂರ ಪ್ರಯಾಣ ಮಾಡಲಿದ್ದೀರಿ. ಅಂದುಕೊಂಡ ಕೆಲಸಗಳಲ್ಲಿ ನಿರೀಕ್ಷಿತ ಲಾಭ ಸಿಗಲಿದೆ. ಕಿರಿಯ ಪುತ್ರಿಗೆ ಕಂಕಣ ಭಾಗ್ಯವಿದೆ.

ಮಿಥುನ : ಇಂದು ನಿಮ್ಮ ಹಣಕಾಸಿನ ಸ್ಥಿತಿ ಸುಧಾರಿಸಲಿದೆ. ಇದರಿಂದ ನಿರಾಳವಾಗಿ ಇರಲಿದ್ದೀರಿ. ಆದರೂ ಅನಗತ್ಯ ಖರ್ಚಿನ ಕಡೆಗೆ ಬ್ರೇಕ್​ ಹಾಕುವುದು ಒಳ್ಳೆಯದು. ಜವಳಿ ಉದ್ಯಮಿಗಳಿಗೆ, ಎಲೆಕ್ಟ್ರಾನಿಕ್​ ಉದ್ಯಮಿಗಳಿಗೆ ಇದು ಶುಭದಿನವಾಗಿದೆ.

ಕಟಕ : ಇದಕ್ಕಿದ್ದಂತೆ ನಿಮ್ಮ ಖರ್ಚು ವೆಚ್ಚಗಳಲ್ಲಿ ಏರಿಕೆ ಕಂಡು ಬರಲಿದೆ. ಇದರಿಂದ ಚಿಂತೆಗೆ ಒಳಗಾಗುವಿರಿ. ಹೊಸ ವ್ಯಾಪಾರ ಯೋಜನೆಗಳಲ್ಲಿ ಹೂಡಿಕೆ ಮಾಡಲಿದ್ದೀರಿ. ವಿದೇಶಿ ಪ್ರಯಾಣ ಮಾಡುವ ಅವಕಾಶ ಕೂಡಿಬಂದರೂ ಸಹ ಹಣದ ಕೊರತೆಯಿಂದಾಗಿ ಅದು ಸಾಧ್ಯವಾಗದೇ ಹೋಗಬಹುದು.

ಸಿಂಹ : ನಿಮ್ಮ ಆರ್ಥಿಕ ಸಂಕಷ್ಟಗಳಿಗೆ ಸ್ನೇಹಿತರು ನೆರವಾಗಲಿದ್ದಾರೆ. ಸ್ನೇಹಿತರ ಸಹಾಯದಿಂದ ನಿಮಗೆ ಒಳ್ಳೆಯ ಹಣ ಸಿಗಲಿದೆ. ಆರೋಗ್ಯದ ಬಗ್ಗೆ ಕಾಳಜಿ ವಹಿಸಿ. ಹೊರಗಿನ ಆಹಾರ ಸೇವನೆ ಬೇಡ. ಹೊಸ ಕಚೇರಿಯ ವಾತಾವರಣಕ್ಕೆ ಹೊಂದಿಕೊಳ್ಳಲು ಆರಂಭಿಸಿದ್ದೀರಿ. ಹೊಸ ವ್ಯಕ್ತಿಗಳು ಭೇಟಿಯಾಗುವಿರಿ.

ಕನ್ಯಾ : ಮನೆಯಲ್ಲಿ ಧಾರ್ಮಿಕ ಕಾರ್ಯ ನಡೆಸುವ ಬಗ್ಗೆ ಚರ್ಚೆ ನಡೆಯಲಿದೆ. ಪೋಷಕರ ಜೊತೆ ಅನಗತ್ಯ ವಾದಕ್ಕೆ ಇಳಿಯಬೇಡಿ. ತಾಳ್ಮೆಯಿಂದ ವರ್ತಿಸಿ. ಸಂಗಾತಿಯು ನಿಮ್ಮೆಲ್ಲ ಪ್ರಯತ್ನಕ್ಕೆ ಸಾಥ್​ ನೀಡಲಿದ್ದಾರೆ. ಬೆನ್ನು ನೋವಿನ ಸಮಸ್ಯೆಯಿಂದಾಗಿ ಇಡೀ ದಿನ ಕಿರಿಕಿರಿ ಅನುಭವಿಸುವ ಸಾಧ್ಯತೆ ಇದೆ.

ತುಲಾ : ದಾಂಪತ್ಯದಲ್ಲಿ ಉಂಟಾದ ಕಲಹವು ಬೀದಿ ಜಗಳದವರೆಗೆ ಬಂದು ನಿಲ್ಲಲಿದೆ. ಇದರಿಂದ ನೀವು ಮಾನಸಿಕವಾಗಿ ತುಂಬಾನೇ ಕೊರಗಲಿದ್ದೀರಿ. ಇದು ನಿಮ್ಮ ಪಾಲಿಗೆ ಅತ್ಯಂತ ಕಠಿಣಕರ ಘಟ್ಟವಾಗಿದೆ. ಕುಲದೇವತೆಯನ್ನು ಪ್ರಾರ್ಥಿಸಿ. ವಿದ್ಯಾರ್ಥಿಗಳಿಗೆ ಒಳಿತಿದೆ.

ವೃಶ್ಚಿಕ : ಹೂಡಿಕೆ ಮಾಡಿದ ಹಣವೆಲ್ಲವೂ ಲಾಭದ ಸಮೇತ ಹಿಂದಿರುಗುವ ಹಿನ್ನೆಲೆಯಿಂದಾಗಿ ನಿಮಗೆ ಧನ ಸಮೃದ್ಧಿಯಾಗಲಿದೆ. ಮಾತಿನಿಂದ ಯಾವುದೇ ಕಾರ್ಯವನ್ನು ಸಾಧಿಸಬಲ್ಲ ನಿಮ್ಮ ನೈಪುಣ್ಯತೆ ನಿಮಗೆ ಉದ್ಯಮದಲ್ಲಿ ಯಶಸ್ಸನ್ನು ನೀಡಲಿದೆ.

ಧನು : ಸಹೋದರರಲ್ಲಿ ಆಸ್ತಿ ವಿಚಾರವಾಗಿ ಕಲಹ ಏರ್ಪಡುವ ಸಾಧ್ಯತೆ ಇದೆ. ಇದು ಪೋಷಕರ ಬೇಸರಕ್ಕೆ ಕಾರಣವಾಗಲಿದೆ. ವಿದ್ಯಾರ್ಥಿಗಳಿಗೆ ಇಂದು ವಿದೇಶಿ ಪ್ರಯಾಣ ಯೋಗ ಕೂಡಿ ಬರಲಿದೆ. ರಾಜಕೀಯ ವ್ಯಕ್ತಿಗಳು ಉನ್ನತ ಸ್ಥಾನಕ್ಕೆ ಏರುತ್ತಾರೆ.

ಮಕರ : ನಿರಂತರ ಪ್ರಯಾಣದಿಂದ ಆರೋಗ್ಯದ ಸಮಸ್ಯೆ ಎದುರಾಗಲಿದೆ. ಬೆಲ್ಲವನ್ನು ದಾನ ಮಾಡಿ. ಇದರಿಂದ ನಿಮ್ಮ ಕುಟುಂಬದಲ್ಲಿನ ಕಿರಿಕಿರಿಗೆ ಪರಿಹಾರ ಸಿಗಲಿದೆ. ಪೋಷಕರಿಂದ ಮಾರ್ಗದರ್ಶನ ಪಡೆದು ಉದ್ಯಮದಲ್ಲಿ ಬದಲಾವಣೆ ಮಾಡಲಿದ್ದೀರಿ.

ಕುಂಭ : ಸಹೋದರಿಯು ನಿಮ್ಮ ಆರ್ಥಿಕ ಸಂಕಷ್ಟಕ್ಕೆ ಹೆಗಲು ನೀಡಲಿದ್ದಾರೆ. ವಾಹನ ಸವಾರಿ ಮಾಡುವಾಗ ಆದಷ್ಟು ಎಚ್ಚರಿಕೆಯಿಂದಿರಿ. ಆರೋಗ್ಯದ ಬಗ್ಗೆ ಹೆಚ್ಚಿನ ಕಾಳಜಿ ಇರಲಿ. ಪತ್ನಿಯಿಂದ ಕೊಂಚ ಕಿರಿಕಿರಿ ಇರಲಿದೆ.

ಮೀನ : ವೈವಾಹಿಕ ಸಂಬಂಧಕ್ಕೆಂದು ಅರಸುತ್ತಿರುವವರಿಗೆ ಇಂದು ಶುಭ ಸುದ್ದಿ ಕಾದಿದೆ. ವೃತ್ತಿ ಜೀವನದಲ್ಲಿ ನಿಮಗೆ ಯಶಸ್ಸು ಸಿಗಲಿದೆ. ಪದೇ ಪದೇ ಕೆಟ್ಟ ಕನಸು ಬೀಳುವುದರಿಂದ ಬೇಸತ್ತಿದ್ದೀರಾ. ಸೋಮವಾರದಂದು ಶಿವನಿಗೆ ರುದ್ರಾಭಿಷೇಕ ಮಾಡಿಸಿ. ಸಾರ್ವಜನಿಕ ಜೀವನದಲ್ಲಿ ಮೆಚ್ಚುಗೆ ಪಡೆಯುವಿರಿ.

Opinion Poll

  • ʼಮುಡಾʼ ಹಗರಣದಲ್ಲಿ ರಾಜೀನಾಮೆ ನೀಡ್ತಾರಾ ಸಿಎಂ ಸಿದ್ದರಾಮಯ್ಯ ?

    View Results

    Loading ... Loading ...