ಮಗುವಿಗೆ ಜನ್ಮ ನೀಡುವುದು ಮಹಿಳೆಯ ಸೌಭಾಗ್ಯ ಎನ್ನಲಾಗುತ್ತದೆ. ಪ್ರತಿಯೊಂದು ಮಹಿಳೆ ಗರ್ಭ ಧರಿಸಿದಾಗ ಸಂಭ್ರಮಿಸುತ್ತಾಳೆ. ಹಿಂದಿನ ಕಾಲದಲ್ಲಿ, ಮನೆ ತುಂಬ ಇರಲಿ ಮಕ್ಕಳು ಎನ್ನುತ್ತಿದ್ದರು. ಇತ್ತೀಚಿನ ದಿನಗಳಲ್ಲಿ, ಆರ್ಥಿಕ ಮುಗ್ಗಟ್ಟಿನಿಂದಾಗಿ ಜನರು ಒಂದೇ ಮಗು ಸಾಕು ಎನ್ನುತ್ತಿದ್ದಾರೆ. ಆದ್ರೆ ಅಮೆರಿಕಾದ ಮಹಿಳೆಯೊಬ್ಬಳು 6 ಮಕ್ಕಳನ್ನು ಹೊಂದಿದ್ದು, 8ನೇ ಬಾರಿ ಗರ್ಭಿಣಿಯಾಗಿದ್ದಾಳೆ.
ಏರಿಯಲ್ ಟೈಸನ್ ಹೆಸರಿನ ಮಹಿಳೆಗೆ 6 ಗಂಡು ಮಕ್ಕಳು. ಏಳನೇ ಮಗು ಸಾವನ್ನಪ್ಪಿದ್ದು, 8ನೇ ಬಾರಿ ಆಕೆ ಗರ್ಭ ಧರಿಸಿದ್ದಾಳೆ. ಮನೆ, ಮಕ್ಕಳ ಜೊತೆ ಖುಷಿಯಾಗಿರುವ ಮಹಿಳೆ, ಇನ್ನೊಂದು ಮಗುವಿನ ನಿರೀಕ್ಷೆಯಲ್ಲಿದ್ದಾಳೆ. ಆದ್ರೆ ಆಕೆಗೆ ಜನರು ಕೇಳುವ ಪ್ರಶ್ನೆ ತಲೆನೋವು ತಂದಿದೆಯಂತೆ.
ಸಾಮಾಜಿಕ ಜಾಲತಾಣದಲ್ಲಿ ಸಕ್ರಿಯವಾಗಿರುವ ಟೈಸನ್, ಆಗಾಗ ತಮ್ಮ ಕುಟುಂಬ, ಮಕ್ಕಳ ಬಗ್ಗೆ ಹೇಳ್ತಿರುತ್ತಾಳೆ. ಸಾಮಾಜಿಕ ಜಾಲತಾಣದಲ್ಲಿ ಸಾವಿರಾರು ಫಾಲೋವರ್ಸ್ ಹೊಂದಿದ್ದಾಳೆ. ಆದ್ರೆ ಇತ್ತೀಚಿಗೆ ಜನರು ಪದೇ ಪದೇ ಕೇಳುವ ಪ್ರಶ್ನೆಯಿಂದ ಆಕೆ ಸುಸ್ತಾಗಿದ್ದಾಳಂತೆ.
ಸಾಮಾಜಿಕ ಜಾಲತಾಣದಲ್ಲಿ, ಇಷ್ಟೊಂದು ಮಕ್ಕಳ ಖರ್ಚನ್ನು ಹೇಗೆ ನಿಭಾಯಿಸುತ್ತೀರೆಂದು ಎಲ್ಲರೂ ಕೇಳ್ತಿದ್ದಾರಂತೆ. ಇಷ್ಟೇ ಅಲ್ಲ, ಮುಂದಿನ ಮಗು ಹೆಣ್ಣಾಗಬಹುದಾ ಎಂಬ ಪ್ರಶ್ನೆಯನ್ನೂ ಕೇಳ್ತಿದ್ದಾರಂತೆ. ಮುಂದಿನ ಮಗು ಹೆಣ್ಣಾಗ್ಲಿ, ಗಂಡಾಗ್ಲಿ ಅದನ್ನು ಪ್ರೀತಿಯಿಂದ ಸ್ವಾಗತಿಸುತ್ತೇವೆಂದು ಆಕೆ ಹೇಳಿದ್ದಾಳೆ. ಟೆನ್ನೆಸ್ ನಲ್ಲಿ ವಾಸಿಸುತ್ತಿರುವ ಕುಟುಂಬ, ಇತ್ತೀಚಿಗಷ್ಟೆ ಮನೆ ನವೀಕರಣ ಮಾಡಿದೆ.