ಮುಖದ ಸೌಂದರ್ಯ ಬಹಳ ಮುಖ್ಯ. ವಿಶೇಷವಾಗಿ ಹೆಣ್ಣು ಮಕ್ಕಳು, ಮುಖದ ಸೌಂದರ್ಯಕ್ಕೆ ಹೆಚ್ಚಿನ ಮಹತ್ವ ನೀಡ್ತಾರೆ. ಮುಖದ ಮೇಲೆ ಸಣ್ಣ ಕೂದಲು ಕಾಣಿಸಿಕೊಂಡ್ರೂ ಬ್ಯೂಟಿಪಾರ್ಲರ್ ಗೆ ಹೋಗ್ತಾರೆ. ಆದ್ರೆ ಬ್ರಿಟನ್ ನಲ್ಲಿರುವ ಭಾರತೀಯ ಮೂಲದ ಹುಡುಗಿಗೆ ವಿಚಿತ್ರ ಕಾಯಿಲೆ ಕಾಣಿಸಿಕೊಂಡಿದೆ. ಆಕೆ ಮುಖ ಮತ್ತು ದೇಹದ ಇತರ ಭಾಗಗಳಲ್ಲಿ ಅಸಹಜವಾಗಿ ಕೂದಲು ಬೆಳೆದಿದೆ.
ಹುಡುಗಿ ಅನೇಕ ಬಾರಿ ಕೂದಲು ಕತ್ತರಿಸಿಕೊಂಡಿದ್ದಾಳೆ. ಹೇರ್ ರಿಮೂವರ್ ನಂತಹ ಸೌಂದರ್ಯ ವರ್ಧಕಗಳನ್ನು ಬಳಸಿದ್ದಾಳೆ. ಆದ್ರೆ ಕೂದಲು ಸಮಸ್ಯೆ ಕಡಿಮೆಯಾಗಿಲ್ಲ. ಹಾಗಾಗಿ ಈ ಕೂದಲಿನ ಜೊತೆಯೇ ಜೀವನ ನಡೆಸುವ ನಿರ್ಧಾರಕ್ಕೆ ಬಂದಿದ್ದಾಳೆ.
ವರದಿಯ ಪ್ರಕಾರ, ಹರ್ನಮ್ ಕೌರ್ ಕೇವಲ 11 ವರ್ಷದವಳಾಗಿದ್ದಾಗ ಆಕೆಯ ಮುಖದಲ್ಲಿ ಗಡ್ಡ ಬೆಳೆಯಲು ಆರಂಭವಾಯಿತು. ಪಾಲಿಸಿಸ್ಟಿಕ್ ಓವರಿ ಸಿಂಡ್ರೋಮ್‌ನಿಂದಾಗಿ ಕೂದಲು ಎದೆ ಮತ್ತು ತೋಳುಗಳಿಗೆ ಹರಡಿತು. ಎಲ್ಲರೂ ಹರ್ನಮ್ ಕೌರ್ ನೋಡಿ ನಗ್ತಿದ್ದರು.
ಹರ್ನಮ್ ಕೌರ್ ಗೆ ಈಗ 16 ವರ್ಷ. ಮೊದಲು ಕೂದಲಿನ ಬಗ್ಗೆ ಚಿಂತಿತವಾಗಿದ್ದ ಹರ್ಮನ್, ಆಗಾಗ ವ್ಯಾಕ್ಸಿಂಗ್, ಬ್ಲೀಚಿಂಗ್ ಮಾಡ್ತಿದ್ದಳಂತೆ. ಕೂದಲು ದಪ್ಪದಾಗಿ ಬರ್ತಿದ್ದರಿಂದ ಆಕೆ ಮನೆಯಿಂದ ಹೊರ ಹೋಗ್ತಿರಲಿಲ್ಲವಂತೆ. ಅನೇಕ ಬಾರಿ ಆತ್ಮಹತ್ಯೆ ಬಗ್ಗೆಯೂ ಆಲೋಚನೆ ಮಾಡಿದ್ದಳಂತೆ.
ಈಗ ಕೂದಲಿನ ಜೊತೆ ಜೀವಿಸುವ ನಿರ್ಧಾರಕ್ಕೆ ಬಂದ ಹರ್ಮನ್, ಗಡ್ಡ, ಮೀಸೆ ಜೊತೆ ಹೊರಗೆ ಹೋಗ್ತಾಳೆ. ತಲೆಗೆ ಪೇಟಾ ಕಟ್ಟುವ ಆಕೆಯನ್ನು ನೋಡಿದ್ರೆ, ಆಕೆ ಹುಡುಗಿ ಎನ್ನಲು ಸಾಧ್ಯವಿಲ್ಲ. ಹರ್ಮನ್ ಧೈರ್ಯಕ್ಕೆ ಎಲ್ಲರೂ ಮೆಚ್ಚುಗೆ ವ್ಯಕ್ತಪಡಿಸುತ್ತಿದ್ದಾರೆ. ಸಾಮಾಜಿಕ ಜಾಲತಾಣದಲ್ಲಿ ಪ್ರಸಿದ್ಧೀಯಾಗಿರುವ ಹರ್ಮನ್, 1 ಲಕ್ಷ 63 ಸಾವಿರ ಫಾಲೋವರ್ಸ್ ಹೊಂದಿದ್ದಾಳೆ. ಹರ್ಮನ್ ಹೆಸರು ಗಿನ್ನಿಸ್ ಬುಕ್ ಸೇರಿದೆ.