ಹಬ್ಬದ ಋತುವಿಗೂ ಮೊದಲು ಜಿಯೋ ತನ್ನ ಗ್ರಾಹಕರಿಗೆ ಮಹತ್ವದ ಸುದ್ದಿ ನೀಡಿದೆ. ರಿಲಾಯನ್ಸ್ ಜಿಯೋ ತನ್ನ ಪ್ರಿಪೇಯ್ಡ್ ಪ್ಲಾನ್ ನಲ್ಲಿ ಬದಲಾವಣೆ ಮಾಡಿದೆ. ಬಳಕೆದಾರರಿಗೆ ಪ್ರಿಪೇಯ್ಡ್ ಪ್ಲಾನ್ ಕೈಗೆಟಕುವ ದರಲ್ಲಿ ನೀಡಲು ಜಿಯೋ ಮುಂದಾಗಿದೆ. ಜಿಯೋ ವೆಬ್ಸೈಟ್ ನಲ್ಲಿ ಈ ಬಗ್ಗೆ ಮಾಹಿತಿ ನೀಡಲಾಗಿದೆ.
ರಿಲಾಯನ್ಸ್ ಜಿಯೋ ತನ್ನ ಕೆಲ ಪ್ಲಾನ್ ನಲ್ಲಿ ಕ್ಯಾಶ್ಬ್ಯಾಕ್ ನೀಡ್ತಿದೆ. ಆಫರ್ ಮುಗಿಯುವ ಮೊದಲೇ ನೀವು ಇದ್ರ ಲಾಭ ಪಡೆಯಿರಿ ಎಂದು ಕಂಪನಿ ಹೇಳಿದೆ. ಕಂಪನಿ 249 ರೂಪಾಯಿ, 555 ರೂಪಾಯಿ ಮತ್ತು 599 ರೂಪಾಯಿ ಯೋಜನೆಯಲ್ಲಿ ಕ್ಯಾಶ್ಬ್ಯಾಕ್ ಆಫರ್ ನೀಡ್ತಿದೆ. ಈ ಯೋಜನೆಯಲ್ಲಿ ಶೇಕಡಾ 20ರಷ್ಟು ಕ್ಯಾಶ್ಬ್ಯಾಕ್ ನೀಡಲಾಗ್ತಿದೆ. ಜಿಯೋ ಮೊಬೈಲ್ ಅಪ್ಲಿಕೇಷನ್ ಹಾಗೂ ಜಿಯೋ ವೆಬ್ಸೈಟ್ ನಲ್ಲಿ ಕ್ಯಾಶ್ಬ್ಯಾಕ್ ಸಿಗ್ತಿದೆ.
ರಷ್ಯಾದಲ್ಲಿ ನೀಲಿಯಾಗ್ತಿದೆ ನಾಯಿಗಳ ಬಣ್ಣ…! ಭಾರತದಲ್ಲಿ 4 ವರ್ಷಗಳ ಹಿಂದೆ ನಡೆದಿತ್ತು ಇಂಥ ಘಟನೆ
ರಿಲಾಯನ್ಸ್ ಜಿಯೋ 249 ರೂಪಾಯಿ ಪ್ರಿಪೇಯ್ಡ್ ಪ್ಲಾನ್ 28 ದಿನಗಳ ಸಿಂಧುತ್ವದೊಂದಿಗೆ ಬರಲಿದೆ. ರಿಲಾಯನ್ಸ್ ಜಿಯೋದ 555 ರೂಪಾಯಿ ಹಾಗೂ 599 ರೂಪಾಯಿ ಪ್ಲಾನ್ 84 ದಿನಗಳ ಸಿಂಧುತ್ವದೊಂದಿಗೆ ಬರಲಿದೆ. 555 ರೂಪಾಯಿ ಪ್ಲಾನ್ ನಲ್ಲಿ 1.5 ಜಿಬಿ ಡೇಟಾ ಸಿಗಲಿದೆ. 599 ರೂಪಾಯಿ ಪ್ಲಾನ್ ನಲ್ಲಿ 2ಜಿಬಿ ಡೇಟಾ ಸಿಗುತ್ತದೆ.
ಈ ಎಲ್ಲ ಪ್ಲಾನ್ ನಲ್ಲಿ ಅನಿಯಮಿತ ವಾಯ್ಸ್ ಕಾಲ್, ಪ್ರತಿ ದಿನ 100 ಎಸ್ಎಂಎಸ್, ಜಿಯೋ ಆಪ್ ಸೇರಿದಂತೆ ಅನೇಕ ಸೌಲಭ್ಯ ಸಿಗುತ್ತಿದೆ.