ಜಪಾನ್‌ನ ರಾಜಕುಮಾರಿ ಮಾಕೋ ತನ್ನ ಸಹಪಾಠಿಯನ್ನು ಮದುವೆಯಾಗಲು ತನ್ನ ರಾಯಲ್ ಸ್ಥಾನಮಾನವನ್ನು ಬಿಟ್ಟುಕೊಟ್ಟಿದ್ದಕ್ಕಾಗಿ ನೀಡಲಾಗುವ ಒಂದು-ಮಿಲಿಯನ್ ಡಾಲರ್ ಪಾವತಿಯನ್ನು ಬಿಟ್ಟುಬಿಡಲು ನಿರ್ಧರಿಸಿದ್ದಾರೆ ಎಂದು ವರದಿಗಳು ತಿಳಿಸಿವೆ.
ರಾಜಕುಮಾರಿ ಮಾಕೋಳ ನಿಶ್ಚಿತ ವರನ ವಿವಾದದಿಂದ ವರ್ಷಗಳ ಕಾಲ ವಿಳಂಬವಾಗಿದ್ದ ಮದುವೆಗೆ ಇದೀಗ ದಾರಿ ಮಾಡಿಕೊಟ್ಟಿದೆ. ಜಪಾನಿನ ಯುವರಾಜನ ಮಗಳು ಮತ್ತು ಮಹಾರಾಜ ನರುಹಿಟೋ ಸೋದರ ಸೊಸೆ ಮೈಕೋ, ತನ್ನ ಕಾಲೇಜಿನ ಸಹಪಾಠಿಯಾಗಿದ್ದ ಕೆಯಿ ಕೊಮುರೊ ಜೊತೆ 2017 ರಲ್ಲಿ ತಮ್ಮ ನಿಶ್ಚಿತಾರ್ಥವನ್ನು ಘೋಷಿಸಿದ್ದರು.
ಆದರೆ, ಕುಮುರೋ ತನ್ನ ತಾಯಿಯು ಹಿಂದೆ ನಿಶ್ವಯವಾಗಿದ್ದ ವಧುವಿನ ಜೊತೆ ಹಣಕಾಸಿನ ವಿವಾದದಿಂದಾಗಿ ಮದುವೆಯನ್ನು ಮುಂದೂಡಲಾಗಿತ್ತು. ಇನ್ನು ರಾಜಕುಮಾರಿಯು ರಾಜಮನೆತನದ ಮದುವೆ ಪದ್ಧತಿ ಮತ್ತು ಸಾಂಪ್ರದಾಯಿಕ ವಿಧಿ ವಿಧಾನಗಳು ಇಲ್ಲದೆ ಮದುವೆಯಾಗಲು ನಿರ್ಧರಿಸಿದ್ದು, ಸಾಮಾನ್ಯವಾಗಿ ರಾಜ ಕುಟುಂಬದ ಹೊರಗಿನವರನ್ನು ಮದುವೆಯಾಗುವ ರಾಜ ಕುಟುಂಬದ ಸ್ತ್ರೀಯರಿಗೆ ರಾಜಮನೆತನದಿಂದ ನೀಡಲಾಗುವ ಧನವನ್ನು ಕೂಡ ನಿರಾಕರಿಸಿದ್ದಾರೆ.
ರಾಜಕುಮಾರಿಯು ಈ ಹಿಂದೆ 150 ಮಿಲಿಯನ್ ಯೆನ್ (1.35 ಮಿಲಿಯನ್ ಡಾಲರ್) ವರೆಗಿನ ಪಾವತಿಯನ್ನು ಬಿಟ್ಟುಬಿಡುವ ಬಯಕೆಯನ್ನು ವ್ಯಕ್ತಪಡಿಸಿದ್ದರು. ಈಕೆಯ ಇಚ್ಛೆಯನ್ನು ಸ್ವೀಕರಿಸಲು ಸಿದ್ಧವಿರುವುದಾಗಿ ಸರ್ಕಾರ ಹೇಳಿದೆ. ಇವರಿಬ್ಬರ ಮದುವೆಯ ದಿನಾಂಕವನ್ನು ಅಕ್ಟೋಬರ್‌ನಲ್ಲಿ ಘೋಷಿಸಬಹುದು ಎನ್ನಲಾಗಿದೆ. ಮದುವೆಯ ನಂತರ ಅಮೆರಿಕಕ್ಕೆ ಹೋಗಿ ನೆಲೆಸಲು ನಿರ್ಧರಿಸಿದ್ದಾರೆ ಎಂದು ಹೇಳಲಾಗಿದೆ.