ನವದೆಹಲಿ: ಎಲ್ಪಿಜಿ ಗ್ರಾಹಕರಿಗೆ ಗುಡ್ ನ್ಯೂಸ್ ಇಲ್ಲಿದೆ. ಅಡುಗೆ ಅನಿಲಕ್ಕೆ ಮತ್ತೆ ಸಬ್ಸಿಡಿ ನೀಡಲು ಕೇಂದ್ರ ಸರ್ಕಾರ ಮುಂದಾಗಿದೆ.
ಬೆಲೆ ಏರಿಕೆಯಿಂದಾಗಿ ಬಡವರು, ಮಧ್ಯಮ ವರ್ಗದವರಿಗೆ ತೊಂದರೆಯಾಗಿದ್ದು, ಸಿಲಿಂಡರ್ ದರದ ಹೊರೆ ಕಡಿಮೆ ಮಾಡಲು ಸಬ್ಸಿಡಿಯನ್ನು ಮರು ಜಾರಿ ಮಾಡುವ ಕುರಿತು ಚಿಂತನೆ ನಡೆಸಲಾಗಿದೆ. ದೇಶದಲ್ಲಿ ಸಬ್ಸಿಡಿ ಕಡಿತಗೊಂಡ ಸಂದರ್ಭದಲ್ಲಿ ಸಿಲಿಂಡರ್ ದರ 581.60 ರೂ. ಇತ್ತು. ಪ್ರಸ್ತುತ ಸಿಲಿಂಡರ್ ದರ 900 ರೂ. ಆಗಿದ್ದು, ಗ್ರಾಹಕರ ಹೊರೆ ಇಳಿಸಲು ಮತ್ತೆ ಸಬ್ಸಿಡಿ ಮರು ಜಾರಿ ಮಾಡಲು ಪೆಟ್ರೋಲಿಯಂ ಸಚಿವಾಲಯ ಚಿಂತನೆ ನಡೆಸಿದೆ ಎನ್ನಲಾಗಿದೆ.
ಪೆಟ್ರೋಲಿಯಂ ಮತ್ತು ನೈಸರ್ಗಿಕ ಅನಿಲ ಸಚಿವಾಲಯದ ವತಿಯಿಂದ ಈ ಕುರಿತಾಗಿ ಸಮೀಕ್ಷೆ ಕೈಗೊಳ್ಳಲಾಗಿದೆ. ವರದಿ ಕೈಸೇರಿದ ಕೂಡಲೇ ಸಬ್ಸಿಡಿ ಮರು ಜಾರಿ ಮಾಡುವ ಸಾಧ್ಯತೆ ಇದೆ. ಉಜ್ವಲ ಯೋಜನೆ ಫಲಾನುಭವಿಗಳಿಗೆ ಸಬ್ಸಿಡಿ ಮುಂದುವರೆಸಲಾಗಿದ್ದು, ಸಮೀಕ್ಷೆ ಬಳಿಕ ಸಬ್ಸಿಡಿ ಮರು ಜಾರಿ ಮಾಡುವ ಸಾಧ್ಯತೆ ಇದೆ. ದೇಶದಲ್ಲಿ ಅಂದಾಜು 30 ಕೋಟಿ ಎಲ್ಪಿಜಿ ಗ್ರಾಹಕರಿದ್ದು, ಅವರಲ್ಲಿ 20 ಕೋಟಿಗೂ ಅಧಿಕ ಮಂದಿ ಪ್ರಧಾನಮಂತ್ರಿ ಉಜ್ವಲ ಯೋಜನೆ ವ್ಯಾಪ್ತಿಗೆ ಒಳಪಡದ ಗ್ರಾಹಕರಾಗಿದ್ದಾರೆ ಎಂದು ಹೇಳಲಾಗಿದೆ.