ಈ ಸಿನೆಮಾ ರಾಜೇಶ್ ಖನ್ನಾ ಅವರನ್ನು ಹಾಕಿ ಮಾಡಬೇಕಿತ್ತಂತೆ. ಅಷ್ಟರಲ್ಲಿ ಅಮಿತಾಬ್ ಅವರ ಜಂಜೀರ್ ಸಿನೆಮಾ ಬಂದು, ಬಿಗ್ ಬಿ ಅತ್ಯಂತ ಬೇಡಿಕೆ ನಟ ಆಗಿದ್ದರು. ಖನ್ನಾ ಅವರನ್ನು ಕೈಬಿಟ್ಟು, ದೀವಾರ್ ಸಿನೆಮಾದಲ್ಲಿ ಅಮಿತಾಬ್ ಅವರಿಗೆ ಪಾತ್ರ ಕೊಡಲಾಯಿತೆಂದು ಛೋಪ್ರಾ ಹಲವು ಬಾರಿ ಹೇಳಿಕೊಂಡಿದ್ದರು.
ಯಶ್ ಅವರು ಅಮಿತಾಬ್ ಬಚ್ಚನ್ ಮತ್ತು ಶಶಿ ಕಪೂರ್ ಅವರನ್ನು ದೀವಾರ್ ಮತ್ತು ಕಭಿ ಕಭಿ, ಎರಡೂ ಸಿನಿಮಾಗಳಲ್ಲಿ ಇಬ್ಬರೂ ನಟರನ್ನು ಹಾಕಿಕೊಂಡು ಮಾಡಲಾಗಿತ್ತು, ಎರಡೂ ಸಿನೆಮಾ ಶೂಟಿಂಗ್ ಏಕ ಕಾಲದಲ್ಲಿ ನಡೆಸಲಾಗುತ್ತಿತ್ತು. ಇವರಿಬ್ಬರಲ್ಲಿ ಬದ್ಧತೆ ಇತ್ತು ಎಂದು ಶಾರುಖ್ ಖಾನ್ ಮುಂದೆ ಹೇಳಿಕೊಂಡಿದ್ದರು.
ಬಿಗ್ ಬಿ ಕೂಡ ತಮ್ಮ ಬ್ಲಾಗಿನಲ್ಲಿ ಒಮ್ಮೆ ಈ ವಿಷಯ ಹಂಚಿಕೊಂಡಿದ್ದರು. ಯಶ್ ಜಿ ಅವರೊಂದಿಗೆ ಸಿನೆಮಾ ಮಾಡುವುದು ಒಂದು ಪಿಕ್ನಿಕ್ ಇದ್ದಂತೆ, ಒಳ್ಳೆ ಜಾಗ, ಒಳ್ಳೆ ಊಟ ಮತ್ತು ಆರಾಮಾಗಿ ಕೆಲಸ ಮಾಡುವುದು. ಇದು ಯಾವಾಗಲು ಖುಷಿಯನ್ನೇ ತರುತ್ತಿತ್ತು ಎಂದು ಹೇಳಿಕೊಂಡಿದ್ದಾರೆ.
1981ರಲ್ಲಿ ತೆರೆಕಂಡ ಸಿಲ್ಸಿಲಾ ಸಿನೆಮಾದಲ್ಲಿ ಮೊದಲು ಪರ್ವೀನ್ ಬಾಬಿ ಮತ್ತು ಸ್ಮಿತಾ ಪಾಟೀಲ್ ನಟಿಸಬೇಕಾಗಿತ್ತು. ಆದರೆ ಯಶ್ ಜಿ ಅವರಿಗೆ ಈ ಸಿನೆಮಾವನ್ನು ಜಯಬಾಧುರಿ ಮತ್ತು ರೇಖಾರನ್ನು ಹಾಕಿ ಮಾಡಬೇಕೆಂಬ ಆಸೆ ವ್ಯಕ್ತ ಪಡಿಸಿದ್ದರಂತೆ.
ಸಿನೆಮಾ ನಿರ್ದೇಶಕರು, ಇಬ್ಬರು ನಟಿಯರ ಬಳಿ ಮಾತನಾಡಿ ಒಪ್ಪಿಸಿದ್ದರು. ಅದೇ ಸಮಯದಲ್ಲಿ ಅಮಿತಾಬ್ ಬಚ್ಚನ್ ಮತ್ತು ರೇಖಾ ಅವರೊಂದಿಗಿನ ಗಾಸಿಪ್ ಸಾಕಷ್ಟು ಹರಿದಾಡುತ್ತಿದ್ದು, ಆದರೂ ಮೂವರು ಅತ್ಯಂತ ನೈಜವಾಗಿ ನಟಿಸಿ ಸಿನೆಮಾ ಯಶಸ್ವಿಯಾಗಲು ಕಾರಣರಾದರು ಎಂದು ಯಶ್ ಛೋಪ್ರಾ ನೆನಸಿಕೊಂಡಿದ್ದರು.
ಅನಂತರ ಕೆಲವರ್ಷಗಳ ಹಿಂದೆ ಅಮಿತಾಬ್ ಬಚ್ಚನ್ ದಿವಾಳಿಯಾದಾಗ ಇದೆ ಯಶ್ ಛೋಪ್ರಾ ಬ್ಯಾನರ್ ಅಡಿಯಲ್ಲಿ ಮೊಹಬತೆ ಸಿನೆಮಾ ಮಾಡಿ, ಇವರನ್ನು ಮತ್ತೆ ಮೇಲಕ್ಕೆ ಎದ್ದು ನಿಲ್ಲಿಸಿದ್ದು ಇದೆ ಯಶ್ ಛೋಪ್ರಾ ಬ್ಯಾನರ್. ಅನಂತರ ಅಮಿತಾಬ್ ಬಚ್ಚನ್ ʼಕೌನ್ ಬನೇಗಾ ಕರೋಡ್ ಪತಿʼ ಮಾಡಿ, ಅದು ಕೂಡ ಇವರನ್ನು ಕೈ ಹಿಡಿದು ನಿಲ್ಲಿಸಿತು ಎಂಬುದನ್ನು ಇಲ್ಲಿ ಸ್ಮರಿಸಬಹುದು.