alex Certify ಮದುವೆ ಸಮಾರಂಭದಲ್ಲಿ ಭರ್ಜರಿ ಸ್ಟೆಪ್ ಹಾಕಿದ ದಾದಿ | Kannada Dunia | Kannada News | Karnataka News | India News
ಕನ್ನಡ ದುನಿಯಾ
    Dailyhunt JioNews

Kannada Duniya

ಮದುವೆ ಸಮಾರಂಭದಲ್ಲಿ ಭರ್ಜರಿ ಸ್ಟೆಪ್ ಹಾಕಿದ ದಾದಿ

ಮದುವೆ ಸಮಾರಂಭಗಳಲ್ಲಿ ಎಲ್ಲರಿಗಿಂತ ಹೆಚ್ಚಾಗಿ ಮಿಂಚುವುದು ಎಂದರೆ ಲವಲವಿಕೆಯಿಂದ ಇರುವ ಹಿರಿಯರು. ಅಂತರ್ಜಾಲದಲ್ಲಿ ಇಂಥ ಹಿರಿಯರ ಸಾಕಷ್ಟು ವಿಡಿಯೋಗಳನ್ನು ನೋಡಿದ್ದೇವೆ.

ಬಾಲಿವುಡ್‌ನ ಜನಪ್ರಿಯ ಹಾಡೊಂದಕ್ಕೆ ದೇಸೀ ದಾದಿಯೊಬ್ಬರು ಭಾರೀ ಲವಲವಿಕೆಯಿಂದ ಸ್ಟೆಪ್ ಹಾಕುತ್ತಿರುವ ಹಳೆಯ ವಿಡಿಯೋವೊಂದು ಈಗ ಮತ್ತೊಮ್ಮೆ ವೈರಲ್‌ ಆಗಿದೆ.

2019ರಲ್ಲಿ ಇನ್‌ಸ್ಟಾಗ್ರಾಂನಲ್ಲಿ ಶೇರ್‌ ಮಾಡಲಾಗಿದ್ದ ಈ ರೆಕಾರ್ಡಿಂಗ್‌ ಅನ್ನು ಬ್ರೈಡ್ಸ್ ಸ್ಪೆಶಲ್ ಹೆಸರಿನ ವಿಡಿಯೋ ಶೇರಿಂಗ್ ಪ್ಲಾಟ್‌ಫಾರಂ ಒಂದು 2020ರಲ್ಲಿ ಮತ್ತೊಮ್ಮೆ ಶೇರ್‌ ಮಾಡಿತ್ತು.

ಅಮೀರ್‌ ಖಾನ್ ಅಭಿನಯದ ’ದಿಲ್’ ಚಿತ್ರದ ಖಂಬೇ ಜೈಸಿ ಖಡೀ ಹೈ ಹಾಡಿಗೆ ದಾದಿ ಸಖತ್‌ ಸ್ಟೆಪ್ ಹಾಕಿದ್ದಾರೆ.

ಅವರ ಉತ್ಸಾಹ, ಸಂಭ್ರಮದ ನೃತ್ಯ ಅವರ ಜೀವನೋತ್ಸಾಹ ಹೆಚ್ಚಿಸುವ ಜೊತೆಗೆ ಇತರರನ್ನೂ ಪ್ರೇರೇಪಿಸುವಂತಿದೆ.

https://www.instagram.com/p/B-O2Ugkln3v/?utm_source=ig_embed&ig_rid=935fb9bd-3cfa-4a6c-ab6a-aae10346cbdf

Opinion Poll

  • ಲೋಕಸಭಾ ಚುನಾವಣೆಯಲ್ಲಿ ಕಾಂಗ್ರೆಸ್‌ ಸರ್ಕಾರಕ್ಕೆ ಅನುಕೂಲಕರವಾಗಲಿದೆಯಾ ʼಗ್ಯಾರಂಟಿʼ ಯೋಜನೆಗಳು ?

    View Results

    Loading ... Loading ...