alex Certify ʼವಿಸ್ತಾʼ ನಿರ್ಮಾಣ ಸ್ಥಳಕ್ಕೆ ಭೇಟಿ ನೀಡಿದ್ದ ಪ್ರಧಾನಿಯಿಂದ ಮಹತ್ವದ ಸಲಹೆ | Kannada Dunia | Kannada News | Karnataka News | India News
ಕನ್ನಡ ದುನಿಯಾ
    Dailyhunt JioNews

Kannada Duniya

ʼವಿಸ್ತಾʼ ನಿರ್ಮಾಣ ಸ್ಥಳಕ್ಕೆ ಭೇಟಿ ನೀಡಿದ್ದ ಪ್ರಧಾನಿಯಿಂದ ಮಹತ್ವದ ಸಲಹೆ

ಕೇಂದ್ರ ವಿಸ್ತಾ ಯೋಜನೆಯ ನಿರ್ಮಾಣ ಪ್ರದೇಶಕ್ಕೆ ಅಚ್ಚರಿಯ ಭೇಟಿ ಕೊಟ್ಟ ಪ್ರಧಾನ ಮಂತ್ರಿ ನರೇಂದ್ರ ಮೋದಿ, ಸಂಸತ್ತಿನ ಹೊಸ ಕಟ್ಟಡ ನಿರ್ಮಾಣಕ್ಕೆ ಶ್ರಮಿಸುತ್ತಿರುವ ಕಾರ್ಮಿಕರ ಕೊಡುಗೆಗಳನ್ನು ಸ್ಮರಿಸಲು ಡಿಜಿಟಲ್ ದಾಖಲೆಗಳನ್ನು ಸೃಷ್ಟಿಸಬೇಕಿದೆ ಎಂದಿದ್ದಾರೆ.

ನಿರ್ಮಾಣ ಕಾರ್ಯದಲ್ಲಿರುವ ಕಾರ್ಮಿಕರಿಗೆ ನಿರಂತರವಾಗಿ ಆರೋಗ್ಯ ತಪಾಸಣೆ ನಡೆಸಲು ಸೂಚಿಸಿದ ಪ್ರಧಾನಿ, ಈ ಕಾರ್ಮಿಕರು ’ಪವಿತ್ರ ಹಾಗೂ ಐತಿಹಾಸಿಕ’ ಯೋಜನೆ ಮೇಲೆ ಕೆಲಸ ಮಾಡುತ್ತಿದ್ದಾರೆ ಎಂದಿದ್ದಾರೆ.

“ಯೋಜನೆಯ ಸ್ಥಳದಲ್ಲಿರುವ ಡಿಜಿಟಲ್ ದಾಖಲೆಗಳು ಕಾರ್ಮಿಕರ ಹೆಸರುಗಳು, ಅವರ ಊರುಗಳು, ಚಿತ್ರಗಳೊಂದಿಗೆ ನಿರ್ಮಾಣ ಕಾರ್ಯಕ್ಕೆ ಅವರ ಕೊಡುಗೆಗಳು ಸೇರಿದಂತೆ ವೈಯಕ್ತಿಕ ವಿವರಗಳನ್ನು ಹೊಂದಿರಬೇಕು,” ಎಂದು ಮೋದಿ ತಿಳಿಸಿದ್ದಾರೆ.

ಕೇಂದ್ರೀಯ ವಿಸ್ತಾ ಯೋಜನೆಯಲ್ಲಿ ಭಾಗಿಯಾದ ಪ್ರಮಾಣ ಪತ್ರವನ್ನು ಕಾರ್ಮಿಕರಿಗೆ ವಿತರಿಸಬೇಕೆಂದ ಪ್ರಧಾನಿ, ನಿರ್ಮಾಣ ಸ್ಥಳದಲ್ಲಿ ಒಂದಷ್ಟು ಹೊತ್ತು ಕಾರ್ಮಿಕರೊಂದಿಗೆ ಸಮಾಲೋಚನೆ ನಡೆಸಿದ್ದಾರೆ.

ಕೇಂದ್ರೀಯ ವಿಸ್ತಾ 2022ರ ಗಣತಂತ್ರೋತ್ಸವ ಹಮ್ಮಿಕೊಳ್ಳಲು ಸಿದ್ಧವಿರಲಿದೆ ಎನ್ನಲಾಗಿದ್ದು, ಸಂಸತ್ತಿನ ನೂತನ ಕಟ್ಟಡವು 2022ರ ಚಳಿಗಾಲದ ಅಧಿವೇಶನ ಹಮ್ಮಿಕೊಳ್ಳಲು ಸಜ್ಜಾಗಿರಲಿದೆ ಎಂದು ವರದಿಗಳು ತಿಳಿಸುತ್ತಿವೆ.

64,500 ಚದರ ಮೀಟರ್‌ ವಿಸ್ತಾರ ಇರಲಿರುವ ಸಂಸತ್ತಿನ ಹೊಸ ಸಮುಚ್ಛಯವು ಸಂವಿಧಾನದ ಪ್ರಾಂಗಣ ಹೊಂದಲಿದ್ದು, ಭಾರತದ ಪ್ರಜಾಪ್ರಭುತ್ವದ ಪರಂಪರೆ ತೋರುವ ಪ್ರದೇಶ, ಸಮಿತಿ ಕೊಠಡಿಗಳು, ಊಟದ ಪ್ರದೇಶ, ಪಾರ್ಕಿಂಗ್‌ ವ್ಯವಸ್ಥೆ, ಗ್ರಂಥಾಲಯ ಹಾಗೂ ಸಂಸದರಿಗೆ ಲೌಂಜ್‌ಗಳನ್ನು ಹೊಂದಿರಲಿವೆ. ಸಂಸತ್ತಿನ ನೂತನ ಕಟ್ಟಡದ ಲೋಕಸಭಾ ವಿಭಾಗದಲ್ಲಿ 888 ಮಂದಿಗೆ ಆಸನ ವ್ಯವಸ್ಥೆ ಆಗಲಿದ್ದು, ರಾಜ್ಯಸಭಾ ವಿಭಾಗದಲ್ಲಿ 384 ಆಸನಗಳು ಇರಲಿವೆ.

 

Opinion Poll

  • ಲೋಕಸಭಾ ಚುನಾವಣೆಯಲ್ಲಿ ಕಾಂಗ್ರೆಸ್‌ ಸರ್ಕಾರಕ್ಕೆ ಅನುಕೂಲಕರವಾಗಲಿದೆಯಾ ʼಗ್ಯಾರಂಟಿʼ ಯೋಜನೆಗಳು ?

    View Results

    Loading ... Loading ...