ರಾಮನಗರ: ರಾಮನಗರ ಜಿಲ್ಲೆಯಲ್ಲಿ 9 ಗೃಹರಕ್ಷಕದಳ ಘಟಕಗಳು ರಾಮನಗರ, ಚನ್ನಪಟ್ಟಣ, ಕನಕಪುರ, ಮಾಗಡಿ, ಸಾತನೂರು, ಬಿಡದಿ ಮತ್ತು ಕುದೂರು, ಕೋಡಿಹಳ್ಳಿ, ಹಾಗೂ ಅಕ್ಕೂರು ಕಾರ್ಯ ನಿರ್ವಹಿಸುತ್ತಿದ್ದು, 70೦ ಮಂದಿ ಗೃಹರಕ್ಷಕರ ಸಂಖ್ಯಾಬಲವನ್ನು ಹೊಂದಿದೆ.
ಪ್ರಸ್ತುತ ಖಾಲಿ ಇರುವ (ರಾಮನಗರ, ಚನ್ನಪಟ್ಟಣ, ಕನಕಪುರ, ಮಾಗಡಿ, ಸಾತನೂರು, ಬಿಡದಿ, ಕುದೂರು, ಕೋಡಿಹಳ್ಳಿ, ಅಕ್ಕೂರು) ಘಟಕಗಳಲ್ಲಿ 220 ಸ್ಥಾನಗಳನ್ನು ತುಂಬಿಕೊಳ್ಳುವ ಗೃಹ ರಕ್ಷಕ ನೇಮಕಾತಿ ಪ್ರಕ್ರಿಯೆ ಹಮ್ಮಿಕೊಳ್ಳಲಾಗಿದೆ.
ಸಂಸ್ಥೆಗೆ ಸೇರಲು ವಿದ್ಯಾರ್ಹತೆ 1೦ ನೇ ತರಗತಿ ಮೇಲ್ಪಟ್ಟು ಮತ್ತು ವಯೋಮಿತಿ 19 ರಿಂದ 50 ವರ್ಷದವರಾಗಿರಬೇಕು. ಮಹಿಳೆಯರೂ ಸಹ ಗೃಹರಕ್ಷಕರಾಗಿ ಸೇರಬಹುದಾಗಿದೆ. ಸ್ವಯಂ ಸೇವೆ ಮಾಡಲಿಚ್ಚಿಸುವವರು ಯಾವುದೇ ವೃತ್ತಿಯಲ್ಲಿರುವವರು, ಸರ್ಕಾರಿ ನೌಕರರು ಗೃಹರಕ್ಷರಿಗೆ ಕರ್ತವ್ಯಗಳ ಸಮಯದಲ್ಲಿ ಮತ್ತು ವಾರದ ಕವಾಯತುಗಳ ಹಾಜರಿಗೆ ಗೌರವಧನ ನೀಡಲಾಗುತ್ತದೆ.
ಗೃಹರಕ್ಷಕ ಸದಸ್ಯತ್ವವನ್ನು ಬಯಸುವ ಗೃಹರಕ್ಷಕರಿಗೆ ಕಂಪ್ಯೂಟರ್, ವಾಹನ ಚಾಲಕರಿಗೆ ಹೆಚ್ಚಿನ ಆದ್ಯತೆ ನೀಡಲಾಗುತ್ತದೆ, ಆಯ್ಕೆಯಾದ ಗೃಹರಕ್ಷಕರಿಗೆ ಸ್ಥಳೀಯದಲ್ಲಿ 10 ದಿನಗಳ ಮೂಲ ತರಬೇತಿಯನ್ನು ನೀಡಲಾಗುತ್ತದೆ. ಹೆಚ್ಚಿನ ತರಬೇತಿಗೆ ಬೆಂಗಳೂರಿನಲ್ಲಿರುವ ಗೃಹರಕ್ಷಕದಳ ಮತ್ತು ಪೌರರಕ್ಷಣಾ ಅಕಾಡೆಮಿಯಲ್ಲಿ ನೀಡುವ ವಿಪತ್ತು ನಿರ್ವಹಣೆ, ನಿಸ್ತಂತು ಚಾಲನಾ ತರಬೇತಿ, ಲಘು ಮತ್ತು ಪ್ರವಾಹ ರಕ್ಷಣೆ, ಪ್ರಥಮ ಚಿಕಿತ್ಸೆ ಮುಂದಾಳತ್ವ ತರಬೇತಿ ಅಗ್ನಿಶಮನ ತರಬೇತಿ ವಿವಿಧ ತರಬೇತಿಗಳಿಗೆ ನಿಯೋಜಿಸಲಾಗುವುದು.
ಈ ಸಂದರ್ಭದಲ್ಲಿ ಆಗುವ ಪ್ರಯಾಣ ವೆಚ್ಚ ಹಾಗೂ ತರಬೇತಿ ಭತ್ಯೆಗಳನ್ನು ಗೃಹರಕ್ಷಕದಳ ಸಂಸ್ಥೆಯಿಂದ ವೆಚ್ಚ ಭರಿಸಲಾಗುತ್ತದೆ. ಕರ್ತವ್ಯದ ಸಮಯದಲ್ಲಿ ವಾರದ ಕವಾಯತುಗಳ ಹಾಜರಿಗೆ ಗೌರವಧನ ನೀಡಲಾಗುತ್ತದೆ ಅದಕ್ಕಾಗಿ ಗೃಹರಕ್ಷಕರಾಗಬಯಸುವವರು ಕಡ್ಡಾಯವಾಗಿ ಯಾವುದೇ ಶಾಖೆಯ ಕೆನರಾ ಬ್ಯಾಂಕ್‌ನಲ್ಲಿ ಉಳಿತಾಯ ಖಾತೆ ಹೊಂದಿರಬೇಕಾಗಿರುತ್ತದೆ.
ಆಸಕ್ತಿವುಳ್ಳವರಿಗೆ ಅರ್ಜಿ ಫಾರಂಗಳನ್ನು ಸೆಪ್ಟಂಬರ್ 27 ರಿಂದ ಅಕ್ಟೊಬರ್ 26 ರವರೆಗೆ ವಿತರಿಸಲಾಗುವುದು. ಹೆಚ್ಚಿನ ಮಾಹಿತಿಗಾಗಿ ಕಛೇರಿ ದೂರವಾಣಿ ಸಂಖ್ಯೆ: 080 27272265 ಜಿಲ್ಲಾ ಗೃಹರಕ್ಷಕದಳ ಕಛೇರಿ, ಹನುಮಂತನಗರ, ಜಾಲಮಂಗಲ ರಸ್ತೆ, ಪಂಚಮುಖಿ ಆಂಜನೇಯ ದೇವಸ್ಥಾನದ ಪಕ್ಕ, ರಾಮನಗರ ಟೌನ್, ರಾಮನಗರ ಇಲ್ಲಿ ಕಛೇರಿ ಸಮಯದಲ್ಲಿ ಸಂಪರ್ಕಿಸಬಹುದಾಗಿದೆ ಎಂದು ಹೇಳಲಾಗಿದೆ.