ಕೋವಿಡ್ ತಪಾಸಣೆಗೆ ಪದೇ ಪದೇ ದೇಹದ ತಾಪಮಾನ ಪರೀಕ್ಷೆ ಮಾಡುವುದರಿಂದ ಹೇಳಿಕೊಳ್ಳುವ ಪ್ರಯೋಜನ ಇಲ್ಲ ಎಂದು ’ಇಂಡಿಯನ್ ಜರ್ನಲ್ ಆಫ್ ಮೆಡಿಕಲ್ ರೀಸರ್ಚ್’ನಲ್ಲಿ ಪ್ರಕಟವಾದ ವರದಿಯೊಂದು ತಿಳಿಸಿದೆ. ಇದರ ಬದಲಾಗಿ ಕೋವಿಡ್ ಪರೀಕ್ಷೆಗಳನ್ನೇ ನಡೆಸಲು ಐಸಿಎಂಆರ್ ಸೂಚಿಸಿದೆ.
ಐಸಿಎಂಆರ್ ಪ್ರಕಟಿಸಿದ ಈ ವರದಿಯಲ್ಲಿ, ದೇಶದ ಅನೇಕ ಭಾಗಗಳಲ್ಲಿ 18 ತಿಂಗಳ ಬಳಿಕ ಶಾಲೆಗಳು ಮರು ಆರಂಭಗೊಳ್ಳುತ್ತಿರುವ ನಡುವೆ ಕೋವಿಡ್ ಸೋಂಕಿನ ನಿಯಂತ್ರಣಕ್ಕೆ ಏನೆಲ್ಲಾ ಮಾಡಬೇಕು ಎಂಬ ಬಗ್ಗೆ ಬೆಳಕು ಚೆಲ್ಲಲಾಗಿದೆ.
Shocking: ಅತ್ಯಂತ ಅಪಾಯಕಾರಿ ಕೊರೊನಾ ವೈರಸ್ ರೂಪಾಂತರಿ ಪತ್ತೆ..!
“ಶಾಲೆಗಳಲ್ಲಿ ಸಾರ್ಸ್-ಕೋವ್-2 ಸೋಂಕಿನ ಪತ್ತೆಗೆ ಅಳವಡಿಸಿಕೊಳ್ಳುವ ಪರೀಕ್ಷಾ ವಿಧಾನಗಳು ಇನ್ನಷ್ಟು ಪರಿಣಾಮಕಾರಿಯಾಗಿರಬೇಕಿದ್ದು, ಕೇವಲ ಕಾಟಾಚಾರಕ್ಕೆ ಮಾಡುವಂತಿರಬಾರದು,” ಎಂದು ಐಸಿಎಂಆರ್‌ನ ಮಹಾ ನಿರ್ದೇಶಕ ಬಲರಾಮ್ ಭಾರ್ಗವ, ಸಮಿರಾನ್ ಪಾಂಡಾ ಹಾಗೂ ತನು ಆನಂದ್ ಬರೆದಿರುವ ಲೇಖನದಲ್ಲಿ ತಿಳಿಸಲಾಗಿದೆ.
“ಪದೇ ಪದೇ ತಾಪಮಾನ ಪರೀಕ್ಷೆ ಮಾಡುವುದು ಸೀಮಿತ ಮಟ್ಟದಲ್ಲಿ ಮಾತ್ರವೇ ಪ್ರಯೋಜನವಾಗುವ ಕಾರಣ ಅವುಗಳನ್ನು ಸಾಧ್ಯವಾದಷ್ಟು ತಪ್ಪಿಸಬೇಕು. ಆಯಾ ದೇಶಗಳ ಸರ್ಕಾರಗಳ ಮಾರ್ಗಸೂಚಿಗಳಂತೆ ಪರೀಕ್ಷೆ ಮಾಡಬಲ್ಲ ಆನ್‌ಸೈಟ್ ಪರೀಕ್ಷಾ ಸವಲತ್ತುಗಳ ಬಳಕೆಗೆ ಶಾಲೆಗಳಿಗೆ ಅವಕಾಶವಿದೆ,” ಎಂದು ಲೇಖನದಲ್ಲಿ ತಿಳಿಸಲಾಗಿದೆ.
BIG NEWS: 1 ರಿಂದ 5 ನೇ ಕ್ಲಾಸ್ ಆರಂಭಕ್ಕೆ ಮುಹೂರ್ತ ಫಿಕ್ಸ್…? ದಸರಾ ರಜೆ ಮುಗಿದ ಬಳಿಕ ಶಾಲೆ ಶುರು…?
“ಸಾರ್ಸ್-ಕೋವ್-2 ಸೋಂಕಿಗೆ 1-17 ವರ್ಷ ವಯಸ್ಸಿನ ಮಕ್ಕಳು ತುತ್ತಾಗುವ ಸಾಧ್ಯತೆಯು ವಯಸ್ಕರಿಗೆ ಇರುವಷ್ಟೇ ಇದೆ. ಆದರೆ ಸೋಂಕಿಗೆ ಜೀವ ಕಳೆದುಕೊಳ್ಳುವ ಸಾಧ್ಯತೆ ವಯಸ್ಕರಿಗಿಂತ ಮಕ್ಕಳಲ್ಲಿ ಕಡಿಮೆ ಇದೆ. ಇದಕ್ಕೆ ಕಾರಣ ಅಲ್ಪ ಸಾಂದ್ರತೆಯಲ್ಲಿರುವ ಆಂಜಿಯೋಟೆನ್ಸಿನ್-ಪರಿವರ್ತಕ ಎಂಜ಼ೈಮ್-2 (ಏಸ್-2) ರಿಸೆಪ್ಟರ್‌ಗಳು ಮಕ್ಕಳ ಉಸಿರಾಟದ ವ್ಯವಸ್ಥೆಯಲ್ಲಿ ಇದ್ದು, ಇದರಿಂದ ಸಾರ್ಸ್-ಕೋವ್-2ನ ಬೈಂಡಿಂಗ್ ಡೊಮೇನ್‌ಗೆ ಜಾಗ ಸಿಕ್ಕು ಪ್ರೋಟೀನ್ ಉತ್ಪತ್ತಿಯಾಗಲು ಅವಕಾಶ ಸಿಗಬಹುದು,” ಎಂದು ಪ್ರಕಟಣೆಯಲ್ಲಿ ಬರೆಯಲಾಗಿದೆ.