ಧಾರವಾಡ: ಮತದಾರರಿಗೆ ಅನುಕೂಲವಾಗುವಂತೆ ವೋಟರ್ ಹೆಲ್ಪ್ ಲೈನ್ ಆಪ್ ಬಿಡುಗಡೆ ಮಾಡಲಾಗಿದ್ದು, ಅನುಕೂಲ ಪಡೆಯಬಹುದಾಗಿದೆ.
ನಾಗರಿಕರು ಮತದಾರರ ಪಟ್ಟಿಯಲ್ಲಿರುವ ತಮ್ಮ ವಿವರಗಳನ್ನು ಪರಿಶೀಲಿಸಿಕೊಳ್ಳಲು, ಅರ್ಹ ಮತದಾರರ ಹೆಸರುಗಳನ್ನು ಹೊಸದಾಗಿ ಸೇರ್ಪಡೆ ಮಾಡಿಕೊಳ್ಳಲು, ಮರಣ ಹೊಂದಿದ ಹಾಗೂ ಸ್ಥಳಾಂತರಗೊಂಡ ಮತದಾರರ ಹೆಸರುಗಳನ್ನು ಮತದಾರರ ಪಟ್ಟಿಯಿಂದ ಕಡಿತಗೊಳಿಸಲು ಮತ್ತು ಮತದಾರರ ಪಟ್ಟಿಯಲ್ಲಿರುವ ಮತದಾರರ ವಿವರಗಳನ್ನು ತಿದ್ದಪಡಿ ಮಾಡಿಕೊಳ್ಳಲು ಸಾರ್ವಜನಿಕರಿಗೆ ಅನುಕೂಲವಾಗುವಂತೆ ಭಾರತ ಚುನಾವಣಾ ಆಯೋಗವು ಅಧೀಕೃತ ಅಪ್ಲಿಕೇಷನ್ ಮತದಾರರ ಸಹಾಯವಾಣಿ (Voter Helpline Mobile Application) ಪರಿಚಯಿಸಿದೆ.
ಈ ಸಹಾಯವಾಣಿಯನ್ನು Google Play Store ನಲ್ಲಿ Voter Helpline ಎಂದು ನಮೂದಿಸಿ Download ಮಾಡಿಕೊಳ್ಳಬೇಕು.
ನಂತರ ತಮ್ಮ ಮೊಬೈಲ್ ಸಂಖ್ಯೆಯನ್ನು ನಮೂದಿಸಿ Generate O.T.P ಮೇಲೆ ಕ್ಲಿಕ್ ಮಾಡಿ ನಂತರ O.T.P ನಮೂದಿಸಿ, Register ಮಾಡಿಕೊಳ್ಳಬಹುದಾಗಿದೆ.
ಮತದಾರ ಪಟ್ಟಿಗೆ ಸಂಬಂಧಿಸಿದಂತೆ ಎಲ್ಲ ರೀತಿಯ ಕಾರ್ಯಗಳನ್ನು ಅತ್ಯಂತ ಸರಳವಾಗಿ ತಾವೇ ಮಾಡಿಕೊಳ್ಳಲು ಅನುಕೂಲವಾಗುವಂತೆ ಭಾರತ ಚುನಾವಣಾ ಆಯೋಗ ಅಧಿಕೃತವಾದ ಮೊಬೈಲ್ ಅಪ್ಲಿಕೇಶನ್ ಅಭಿವೃದ್ಧಿಪಡಿಸಿ, ನಾಗರಿಕರ ಅನುಕೂಲಕ್ಕಾಗಿ ಬಿಡುಗಡೆ ಮಾಡಿದ್ದು, ಸದುಪಯೋಗಪಡೆಯುವಂತೆ ಜಿಲ್ಲಾಧಿಕಾರಿ ನಿತೇಶ ಪಾಟೀಲ ಅವರು ತಿಳಿಸಿದ್ದಾರೆ.