ವೈದ್ಯಕೀಯ ವಿಜ್ಞಾನವನ್ನು ಸರಿಯಾದ ರೀತಿಯಲ್ಲಿ ಬಳಸಿದ್ರೆ ಸಾಕಷ್ಟು ಪ್ರಯೋಜನವಿದೆ. ಕೆಲವರು ಇದನ್ನು ತಪ್ಪಾಗಿ ಬಳಸಿ, ಯಡವಟ್ಟು ಮಾಡಿಕೊಳ್ತಾರೆ.
ಇದಕ್ಕೆ ಬ್ರಿಟನ್ ಮಹಿಳೆ ಉತ್ತಮ ನಿದರ್ಶನ. ಆಗ ಮಾಡಿದ ಕೆಲಸಕ್ಕೆ ಈಗ ಪಶ್ಚಾತಾಪ ಪಡ್ತಿದ್ದಾಳೆ.
ಬ್ರಿಟನ್ ಮಹಿಳೆ ಕೇಸಿ ಬೆರೋಸ್, ತನ್ನ ಖಾಸಗಿ ಅಂಗವನ್ನು ಇಷ್ಟಪಡ್ತಿರಲಿಲ್ಲ. ಇದಕ್ಕಾಗಿ ವಿಚಿತ್ರ ನಿರ್ಧಾರ ಕೈಗೊಂಡಿದ್ದಳು. ತನ್ನ ಖಾಸಗಿ ಅಂಗವನ್ನು ಬಾರ್ಬಿ ಡಾಲ್ ಆಕಾರಕ್ಕೆ ಬದಲಾಯಿಸಲು ನಿರ್ಧರಿಸಿದ್ದಳು. ಇದಕ್ಕಾಗಿ ಆಕೆ ಶಸ್ತ್ರಚಿಕಿತ್ಸೆ ನಿರ್ಧಾರ ತೆಗೆದುಕೊಂಡಿದ್ದಳು.
ಕೇಸಿ, ಈ ಕುರಿತು ಸಾಕ್ಷ್ಯಚಿತ್ರವನ್ನು ನೋಡಿದ್ದಳು. ಲ್ಯಾಬಿಯಾಪ್ಲ್ಯಾಸ್ಟಿ ಒಂದು ಕಾಸ್ಮೆಟಿಕ್ ವಿಧಾನವಾಗಿದ್ದು, ಅದರ ಮೂಲಕ ಭಾಗದ ವಿನ್ಯಾಸವನ್ನು ಬದಲಾಯಿಸಬಹುದು. ಎರಡು ಮಕ್ಕಳ ತಾಯಿಯಾಗಿರುವ ಕೇಸಿ, ಶಸ್ತ್ರಚಿಕಿತ್ಸೆ ನಂತ್ರ ಆತ್ಮವಿಶ್ವಾಸ ಹೆಚ್ಚಾಗುತ್ತದೆ ಎಂದು ಭಾವಿಸಿದ್ದಳಂತೆ. ಆದ್ರೆ ಎರಡು ಮಕ್ಕಳಾದ್ಮೇಲೆ ಸಾಕಷ್ಟು ಭಾವನಾತ್ಮಕ ಸಮಸ್ಯೆ ಎದುರಿಸಿದ್ದಳಂತೆ. ಡಾಕ್ಯುಮೆಂಟರಿ ತೋರಿಸಿದ್ದ ವೈದ್ಯರನ್ನೇ ಶಸ್ತ್ರಚಿಕಿತ್ಸೆಗೆ ಬುಕ್ ಮಾಡಿದ್ದಳಂತೆ. ಸಮಯ ಕಳೆದಂತೆ ನಾಚಿಕೆ ಮತ್ತು ಪಶ್ಚಾತ್ತಾಪ ಶುರುವಾಯಿತು ಎಂದು ಕೇಸಿ ಹೇಳಿದ್ದಾಳೆ.
ತನ್ನ ನಿರ್ಧಾರದಿಂದ ಮಕ್ಕಳ ಮೇಲೆ ಪರಿಣಾಮ ಬೀರಲಿದೆ. ಡಾಕ್ಯುಮೆಂಟರಿಯಲ್ಲಿ ತೋರಿಸಿದ ವಿಡಿಯೋ ನಿಜವಲ್ಲ. ಅದನ್ನು ತಿರುಚಲಾಗಿದೆ ಎಂಬುದು ಕೇಸಿಗೆ ಈಗ ಗೊತ್ತಾಗಿದೆಯಂತೆ.