alex Certify ʼತಲೈವಿʼ ಸಿನಿಮಾದ ಬಳಿಕ ಹೀಗಾಯ್ತಂತೆ ಕಂಗನಾ ದೇಹ…! | Kannada Dunia | Kannada News | Karnataka News | India News
ಕನ್ನಡ ದುನಿಯಾ
    Dailyhunt JioNews

Kannada Duniya

ʼತಲೈವಿʼ ಸಿನಿಮಾದ ಬಳಿಕ ಹೀಗಾಯ್ತಂತೆ ಕಂಗನಾ ದೇಹ…!

ಬಾಲಿವುಡ್​ ನಟಿ ಕಂಗನಾ ರಣಾವತ್​​ ತಲೈವಿ ಸಿನಿಮಾದ ನಟನೆಗಾಗಿ ಸಾಕಷ್ಟು ಪ್ರಶಂಸೆ ಗಳಿಸುತ್ತಿದ್ದಾರೆ. ತಮಿಳುನಾಡು ಸಿಎಂ ಹಾಗೂ ಮಾಜಿ ನಟಿ ದಿವಂಗತ ಜಯಲಲಿತಾ ಅವರ ಜೀವನ ಆಧಾರಿತ ಸಿನಿಮಾದಲ್ಲಿ ನಟಿ ಕಂಗನಾ ಮುಖ್ಯ ಭೂಮಿಕೆಯಲ್ಲಿ ಕಾಣಿಸಿಕೊಂಡಿದ್ದರು.

ಈ ಸಿನಿಮಾದಲ್ಲಿ ಜಯಲಲಿತಾರಂತೆ ಕಾಣುವ ಸಲುವಾಗಿ ನಟಿ ಕಂಗನಾ ತೂಕದಲ್ಲಿ ಸಾಕಷ್ಟು ಹೊಂದಾಣಿಕೆಯನ್ನು ಮಾಡಿಕೊಳ್ಳಬೇಕಾಗಿ ಬಂದಿತ್ತು. ಈ ಸಿನಿಮಾದಿಂದಾಗಿ ನನ್ನ ದೇಹದಲ್ಲಿ ಸಾಕಷ್ಟು ಬದಲಾವಣೆಗಳು ಉಂಟಾಗಿದೆ ಎಂದು ನಟಿ ಕಂಗನಾ ಇನ್​ಸ್ಟಾಗ್ರಾಂನಲ್ಲಿ ಹೇಳಿಕೊಂಡಿದ್ದಾರೆ.

ಸಿನಿಮಾದ ಬಗೆಗಿನ ತಮ್ಮ ಅನುಭವವನ್ನು ಇನ್​ಸ್ಟಾಗ್ರಾಂನಲ್ಲಿ ಹಂಚಿಕೊಂಡ ಕಂಗನಾ, ಆರು ತಿಂಗಳ ಅವಧಿಯಲ್ಲಿ ತೂಕ ಹೊಂದಾಣಿಕೆಯಿಂದಾಗಿ ನನ್ನ ದೇಹದಲ್ಲಿ ಈಗ ಶಾಶ್ವತ ಸ್ಟ್ರೆಚ್​ ಮಾರ್ಕ್​ಗಳು ಉಳಿದುಕೊಂಡಿವೆ ಎಂದು ಹೇಳಿದ್ದಾರೆ. ಸಿನಿಮಾದಲ್ಲಿ ತಮ್ಮ ಎರಡು ಅವತಾರಗಳ ಫೋಟೋವನ್ನು ಈ ಪೋಸ್ಟ್​ನ ಜೊತೆ ಶೇರ್​ ಮಾಡಿದ್ದಾರೆ.

ನನ್ನ ಮೂವತ್ತರ ವಯಸ್ಸಿನಲ್ಲಿ ಕೇವಲ ಆರು ತಿಂಗಳ ಅವಧಿಯಲ್ಲಿ 20 ಕೆಜಿ ಏರಿಸಿಕೊಳ್ಳುವುದು ಹಾಗೂ ಇಳಿಸಿಕೊಳ್ಳುವುದು ನನ್ನ ದೇಹದ ಮೇಲೆ ಸಾಕಷ್ಟು ಪ್ರತಿಕೂಲ ಪರಿಣಾಮವನ್ನು ಬೀರಿದೆ. ಇದರಿಂದ ನನ್ನ ದೇಹದಲ್ಲಿ ಶಾಶ್ವತ ಸ್ಟ್ರೆಚ್​ ಮಾರ್ಕ್​ಗಳನ್ನು ಉಂಟು ಮಾಡಿದೆ. ಆದರೆ ಕಲೆಯು ಒಂದು ಬೆಲೆಯ ಜೊತೆಗೆ ಜೀವನದಲ್ಲಿ ಬರುತ್ತದೆ. ಕಲಾವಿದರು ಸ್ವತಃ ಒಬ್ಬ ತಲೈವಿ ಆಗಿದ್ದಾರೆ ಎಂದು ಈ ಫೋಟೋಗಳಿಗೆ ಶೀರ್ಷಿಕೆ ನೀಡಿದ್ದಾರೆ.

ಕಂಗನಾರ ಈ ಪೋಸ್ಟ್​ಗೆ ನೆಟ್ಟಿಗರಿಂದ ಸಾಕಷ್ಟು ಮೆಚ್ಚುಗೆಯ ಮಾತುಗಳು ಕೇಳಿ ಬಂದಿದೆ. ಅನೇಕರು ಕಂಗನಾರ ಈ ಪ್ರಯತ್ನಕ್ಕೆ ಶಹಬ್ಬಾಸ್​ ಎಂದಿದ್ದಾರೆ.

https://www.instagram.com/p/CURvZ-3sflG/?utm_source=ig_web_copy_link

Opinion Poll

  • ʼಮುಡಾʼ ಹಗರಣದಲ್ಲಿ ರಾಜೀನಾಮೆ ನೀಡ್ತಾರಾ ಸಿಎಂ ಸಿದ್ದರಾಮಯ್ಯ ?

    View Results

    Loading ... Loading ...