ಮೈಗ್ರೇನ್ ಸಮಸ್ಯೆ ಅನುಭವಿಸಿದವರಿಗೆ ಗೊತ್ತು. ಅನೇಕ ಕಾರಣಕ್ಕೆ ಮೈಗ್ರೇನ್ ಕಾಡುತ್ತದೆ. ತಲೆ ನೋವಿನ ಜೊತೆ ತಲೆ ಸುತ್ತು, ವಾಕರಿಕೆ ಕಾಣಿಸಿಕೊಳ್ಳುತ್ತದೆ. ದೊಡ್ಡ ಧ್ವನಿ ಹಾಗೂ ಅತಿಯಾದ ಬೆಳಕು ಕೂಡ ಅನೇಕರಿಗೆ ಮೈಗ್ರೇನ್ ಗೆ ಕಾರಣವಾಗುತ್ತದೆ. ಅನೇಕ ದಿನಗಳಿಂದ ಮೈಗ್ರೇನ್ ಸಮಸ್ಯೆಯಿಂದ ಬಳಲುತ್ತಿರುವವರು ಕೆಲ ಆಹಾರಗಳಿಂದ ದೂರವಿರಬೇಕು.
ಅನೇಕರ ಮೈಗ್ರೇನ್ ಸಮಸ್ಯೆಗೆ ಚಾಕೊಲೇಟ್ ಕಾರಣ. ಹಾಗಾಗಿ ಮೈಗ್ರೇನ್ ನಿಂದ ದೂರವಿರಲು ಚಾಕೊಲೇಟ್ ಬಿಡಿ. ಅಮೆರಿಕನ್ ಮೈಗ್ರೇನ್ ಫೌಂಡೇಶನ್ ನಡೆಸಿದ ಅಧ್ಯಯನದ ಪ್ರಕಾರ, ಶೇಕಡ 22 ರಷ್ಟು ಜನರಿಗೆ ಚಾಕಲೇಟ್ ನಿಂದಾಗಿ ಮೈಗ್ರೇನ್ ಸಮಸ್ಯೆ ಕಾಡುತ್ತದೆಯಂತೆ.
ಅತಿಯಾದ ಪ್ರಮಾಣದ ಕೆಫೀನ್ ಸೇವನೆ ಮೈಗ್ರೇನ್ ಅಪಾಯವನ್ನು ಹೆಚ್ಚಿಸುತ್ತದೆ. ಚಾಕೊಲೇಟ್, ಕಾಫಿ ಮತ್ತು ಚಹಾದಲ್ಲಿ ಕೆಫೀನ್ ಅಧಿಕವಾಗಿರುತ್ತದೆ. ಕಡಿಮೆ ಪ್ರಮಾಣದಲ್ಲಿ ಕೆಫೆನ್ ಸೇವನೆ ಮಾಡಿದ್ರೆ ಯಾವುದೇ ಅಪಾಯವಿಲ್ಲ.
ಅಧ್ಯಯನದ ಪ್ರಕಾರ, ಮದ್ಯಪಾನ ಮಾಡುವುದರಿಂದ ಶೇಕಡಾ 35ರಷ್ಟು ಜನರಿಗೆ ಮೈಗ್ರೇನ್ ಸಮಸ್ಯೆ ಉಂಟಾಗುತ್ತದೆ. ಮೈಗ್ರೇನ್ ನಿಂದ ಬಳಲುತ್ತಿರುವ ಜನರು ಮದ್ಯಪಾನ ಮಾಡಬಾರದು.
ಸಂಸ್ಕರಿಸಿದ ಆಹಾರಗಳಲ್ಲಿ ಕೃತಕ ಸಕ್ಕರೆ ಆಸ್ಪರ್ಟೇಮ್ ಇರುತ್ತದೆ. ಆಸ್ಪರ್ಟೇಮ್ ಮೈಗ್ರೇನ್ ಸಮಸ್ಯೆಗೆ ಕಾರಣವಾಗುತ್ತದೆ.
ದೀರ್ಘಕಾಲದಿಂದ ಸಂಸ್ಕರಿಸಿಟ್ಟ ಚೀಸ್ ಸೇವನೆ ಮಾಡಬಾರದು. ಇದ್ರ ಸೇವನೆಯಿಂದ ಮೈಗ್ರೇನ್ ಕಾಡುತ್ತದೆ. ಮೈಗ್ರೇನ್ ಮಾತ್ರವಲ್ಲ ಇನ್ನೂ ಕೆಲ ಅನಾರೋಗ್ಯಕ್ಕೆ ಇದು ಕಾರಣವಾಗುತ್ತದೆ. ಇದ್ರಲ್ಲಿ ಟೈರಮೈನ್ ಇರುತ್ತದೆ.