alex Certify ವಿಚ್ಛೇದನದ ಬಳಿಕವೂ ಮಾಜಿ ಪತ್ನಿಯೊಂದಿಗೆ ಕಾಣಿಸಿಕೊಂಡ ಆಮೀರ್​ ಖಾನ್​ | Kannada Dunia | Kannada News | Karnataka News | India News
ಕನ್ನಡ ದುನಿಯಾ
    Dailyhunt JioNews

Kannada Duniya

ವಿಚ್ಛೇದನದ ಬಳಿಕವೂ ಮಾಜಿ ಪತ್ನಿಯೊಂದಿಗೆ ಕಾಣಿಸಿಕೊಂಡ ಆಮೀರ್​ ಖಾನ್​

ಬಾಲಿವುಡ್​ ನಟ ಆಮೀರ್ ಖಾನ್​​ ತಮ್ಮ ಪತ್ನಿ ಕಿರಣ್​ ರಾವ್​ ರಿಂದ ವಿಚ್ಛೇದನ ಘೋಷಿಸಿರೋದು ಎಲ್ಲರಿಗೂ ತಿಳಿದಿರುವ ವಿಚಾರವೇ. ಆದರೆ ವಿಚ್ಛೇದನದ ಬಳಿಕವೂ ಒಟ್ಟಾಗಿಯೇ ಕಾಣಿಸಿಕೊಳ್ಳುವ ಮೂಲಕ ಇವರಿಬ್ಬರು ಫ್ಯಾನ್ಸ್​ ತಲೆಗೆ ಹುಳ ಬಿಟ್ಟಿರೋದಂತೂ ಸುಳ್ಳಲ್ಲ. ಈ ಬಾರಿ ಕೂಡ ಮುಂಬೈನ ಈಟರಿಯೊಂದರಲ್ಲಿ ಪುತ್ರ ಆಜಾದ್​ ರಾವ್​ ಖಾನ್​ ಜೊತೆಯಲ್ಲಿ ಆಮೀರ್​ ಹಾಗೂ ಕಿರಣ್​ ಜೊತೆಯಾಗಿ ಕಾಣಿಸಿಕೊಂಡಿದ್ದಾರೆ.

ಆಮೀರ್​ ಖಾನ್​ ರೌಂಡ್​ ನೆಕ್​ ಟೀಶರ್ಟ್​ನಲ್ಲಿ ಸಖತ್​​ ಡ್ಯಾಶಿಂಗ್​ ಆಗಿ ಕಾಣುತ್ತಿದ್ದಾರೆ. ಕಿರಣ್​ ಕ್ಯಾಶುವಲ್​ ಡ್ರೆಸ್​ ಧರಿಸಿದ್ದಾರೆ. ಆಜಾದ್​ ಕೂಡ ಬಿಳಿ ಬಣ್ಣದ ಟೀ ಶರ್ಟ್​ ಹಾಗೂ ಬೂದು ಬಣ್ಣದ ಶಾರ್ಟ್ಸ್​​ನಲ್ಲಿ ಸಖತ್​ ಆಗಿ ಕಾಣ್ತಿದ್ದಾನೆ.

ಈಟರಿಯ ಹೊರಗಡೆ ಕಂಡುಬಂದ ಈ ಮೂವರು ಕ್ಯಾಮರಾ ಕಣ್ಣಿಗೆ ಪೋಸ್​ ನೀಡಿದ್ದಾರೆ. ಆಮೀರ್ ಖಾನ್​ ತಮ್ಮ ಅಭಿಮಾನಿಗಳ ಜೊತೆಯೂ ಫೋಟೋ ಕ್ಲಿಕ್ಕಿಸಿಕೊಂಡಿದ್ದಾರೆ.

ಆಮೀರ್ ಹಾಗೂ ಕಿರಣ್​ ಬರೋಬ್ಬರಿ 15 ವರ್ಷಗಳ ದಾಂಪತ್ಯದ ಬಳಿಕ ಈ ವರ್ಷ ವಿಚ್ಛೇದನದ ಸುದ್ದಿಯನ್ನು ಸೋಶಿಯಲ್​ ಮೀಡಿಯಾ ಮೂಲಕ ಬಹಿರಂಗಗೊಳಿಸಿದ್ದರು. ಸೋಶಿಯಲ್​ ಮೀಡಿಯಾ ವೇದಿಕೆಯಲ್ಲಿ ಜಂಟಿಯಾಗಿ ಹೇಳಿಕೆ ಬಿಡುಗಡೆ ಮಾಡಿದ್ದ ಈ ಮಾಜಿ ದಂಪತಿ, ದಾಂಪತ್ಯ ಮುರಿದಿದ್ದರು ತಾವು ಸ್ನೇಹಿತರಾಗಿ ಮುಂದುವರಿಯಲಿದ್ದೇವೆ ಎಂದು ಹೇಳಿಕೊಂಡಿದ್ದರು.

Opinion Poll

  • ʼಮುಡಾʼ ಹಗರಣದಲ್ಲಿ ರಾಜೀನಾಮೆ ನೀಡ್ತಾರಾ ಸಿಎಂ ಸಿದ್ದರಾಮಯ್ಯ ?

    View Results

    Loading ... Loading ...