ಅಮೆರಿಕದ ಮಹಿಳೆಯೊಬ್ಬರು ಸಾಕಿರುವ ಕಪ್ಪು ಮತ್ತು ಕಂದು ಬಣ್ಣದ ಈ ನಾಯಿಯು ತನ್ನ ಉದ್ದುದ್ದ ಕಿವಿಗಳಿಂದಾಗಿ ಗಿನ್ನೆಸ್ ವಿಶ್ವ ದಾಖಲೆ ಪುಸ್ತಕಗಳನ್ನು ಸೇರಿದೆ.
ಮೂರು ವರ್ಷದ ಶ್ವಾನವಾದ ಲೌ, ಪೈಗ್ ಒಸ್ಲೆನ್ ಎಂಬ ಪಶುತಜ್ಞೆ ಬಳಿ ಇದ್ದು, 12.38 ಇಂಚುಗಳಷ್ಟು ಉದ್ದದ ಕಿವಿಗಳನ್ನು ಹೊಂದಿದೆ. ಜೀವಂತ ಇರುವ ನಾಯಿಗಳ ಪೈಕಿ ಅತ್ಯಂತ ಉದ್ದನೆಯ ಕಿವಿ ಹೊಂದಿರುವ ಶ್ವಾನ ಎಂಬ ಶ್ರೇಯ ಲೌನದ್ದಾಗಿದೆ.
ತನ್ನ ನಾಯಿಯ ಕಿವಿಗಳು ಉದ್ದ ಇವೆ ಎಂದು ಗೊತ್ತಿದ್ದರೂ ಸಹ ಅವನ್ನು ಅಳೆದು ನೋಡುವ ಕುತೂಹಲವೇನೂ ಒಸ್ಲೆನ್ಗೆ ಇರಲಿಲ್ಲ. ಆದರೆ ಕೋವಿಡ್-19 ಸಾಂಕ್ರಮಿಕದ ವೇಳೆ ಅಳೆಯುವ ಕೆಲಸ ಮಾಡಿದ್ದಾರೆ ಒಸ್ಲೆನ್.
ಮತ್ತೊಂದು ದಾಖಲೆ ಬರೆದ ವಿರಾಟ್ ಕೊಹ್ಲಿ, ಟಿ20 ಯಲ್ಲಿ 10 ಸಾವಿರ ರನ್ ಗಳಿಸಿದ ಮೊದಲ ಭಾರತೀಯ
ಲೌನ ಅತಿ ಉದ್ದನೆಯ ಕಿವಿಗಳು ಆತನಿಗೆ ಯಾವುದೇ ರೀತಿಯ ವೈದ್ಯಕೀಯ ತೊಂದರೆಗಳನ್ನು ತಂದೊಡ್ಡಿಲ್ಲ. ಬದಲಿಗೆ ಶ್ವಾನಗಳ ಫ್ಯಾಶನ್ ಶೋಗಳಲ್ಲಿ ಲೌಗೆ ಆತನ ಕಿವಿಗಳು ಭಾರೀ ಜನಪ್ರಿಯತೆ ತಂದುಕೊಟ್ಟಿವೆ.
“ಪ್ರತಿಯೊಬ್ಬರೂ ಲೌನ ಕಿವಿಗಳನ್ನು ಮುಟ್ಟಿ ನೋಡಲು ಬಯಸುತ್ತಾರೆ. ಬರೀ ಒಮ್ಮೆ ನೋಡಿದರೆ ಸಾಕು ಆತನ ಮೇಲೆ ಲವ್ ಆಗಿಬಿಡುತ್ತದೆ” ಎಂದು ಒಸ್ಲೆನ್ ತಿಳಿಸಿದ್ದಾರೆ.