ಪ್ರಧಾನಿ ನರೇಂದ್ರ ಮೋದಿ ಅವಿರತ ಕೆಲಸ, ಜನಪರ ಕಾಳಜಿಗೆ ಹೆಸರುವಾಸಿ. ತಮ್ಮ ದಿನನಿತ್ಯದ ಚಟುವಟಿಕೆಗಳಲ್ಲಿ ಸುಮಾರು 18 ಗಂಟೆಗಳು ಅವರು ಸರ್ಕಾರಿ ಕೆಲಸಗಳಿಗೆ ಮೀಸಲಿಟ್ಟಿದ್ದಾರೆ ಎಂದು ಅವರ ಆಪ್ತ ಮೂಲಗಳು ಹೇಳುತ್ತವೆ. ಇದೇ ಕಾರ್ಯಶೈಲಿ, ಕೆಲಸದ ಮಂತ್ರವನ್ನು ಅವರು ಇತ್ತೀಚಿನ ನಾಲ್ಕು ದಿನಗಳ ಅಮೆರಿಕ ಪ್ರವಾಸದಲ್ಲೂ ಮುಂದುವರಿಸಿದ್ದಾರೆ.
ತಮ್ಮ ವಿಶೇಷ ವಿಮಾನದಲ್ಲಿ ಪ್ರಯಾಣಿಸುವಾಗ ವಿಶ್ವಸಂಸ್ಥೆ ಪ್ರಧಾನ ಸಭೆಗೆ ಪೂರ್ವ ತಯಾರಿಗಾಗಿ ನಡೆಸಿದ ಸಭೆಗಳು ಸೇರಿದಂತೆ ಒಟ್ಟು 65 ತಾಸುಗಳಲ್ಲಿ 24 ಮೀಟಿಂಗ್ ನಡೆಸಿದ ಸಾಧನೆ ಮೋದಿ ಅವರದ್ದು.
ಸೆ. 22ರಂದು ವಿಶೇಷ ವಿಮಾನದಲ್ಲಿ ಅವರು ಅಧಿಕಾರಿಗಳು ಹಾಗೂ ವಿದೇಶಾಂಗ ಸಚಿವರ ಜತೆಗೆ ಎರಡು ಪೂರ್ವ ತಯಾರಿ ಸಭೆಗಳನ್ನು ಗಂಟೆಗಟ್ಟಲೆ ನಡೆಸಿದ್ದಾರೆ. ಅಮೆರಿಕದ ವಾಷಿಂಗ್ಟನ್ ತಲುಪಿದ ಬಳಿಕ ತಾವು ತಂಗಿದ್ದ ಹೋಟೆಲ್‌ನಲ್ಲಿ ಮೂರು ಸಭೆಗಳನ್ನು ನಡೆಸಿದ್ದಾರೆ. ಬಳಿಕ ಪ್ರವಾಸದ ಭಾಗವಾಗಿ ಸೆ. 23ರಂದು ಜಾಗತಿಕ ಸಿಇಒಗಳ ಜತೆಗೆ, ಅಮೆರಿಕ ಉಪಾಧ್ಯಕ್ಷೆ ಕಮಲಾ ಹ್ಯಾರಿಸ್ ಜತೆಗೆ ಸಭೆ ನಡೆಸಿದ್ದಾರೆ.
BIG NEWS: ಹೆಚ್.ಡಿ.ಕೆ.-ಸಿದ್ದರಾಮಯ್ಯ ನಡುವೆ ಸುಳ್ಳಿನ ಸಮರ; ಸುಳ್ಳು ಹೇಳುವುದಕ್ಕೂ ಇತಿಮಿತಿ ಇರಬೇಕು; ವಿಪಕ್ಷ ನಾಯಕನಿಗೆ ಮಾಜಿ ಸಿಎಂ ತಿರುಗೇಟು
ಇದಲ್ಲದೇ ಆಸ್ಪ್ರೇಲಿಯಾ ಪ್ರಧಾನಿ ಸ್ಕಾಟ್ ಮಾರಿಸನ್ ಮತ್ತು ಜಪಾನ್ ಪ್ರಧಾನಿ ಯೊಶಿಹಿಡೆ ಸುಗಾ ಅವರೊಂದಿಗೆ ದ್ವಿಪಕ್ಷೀಯ ಸಭೆಗಳಲ್ಲಿ ಭಾಗಿಯಾಗಿ ಮಹತ್ವದ ಮಾತುಕತೆ ನಡೆಸಿದ್ದಾರೆ. ಬಳಿಕ ಮತ್ತೆ ತಮ್ಮ ನಿಯೋಗದ ಜತೆಯಲ್ಲಿ ಮೂರು ಆಂತರಿಕ ಸಭೆಗಳನ್ನು ನಡೆಸಿದ್ದಾರೆ. ಇದರ ಜತೆಗೆ ಅಮೆರಿಕ ಅಧ್ಯಕ್ಷ ಜೋ ಬೈಡೆನ್ ಜತೆಗೆ ಶ್ವೇತಭವನದಲ್ಲಿ ಮಹತ್ವದ ಚರ್ಚೆ, ಕ್ವಾಡ್ ಶೃಂಗದ ಕಾರ್ಯತಂತ್ರದ ಮಾತುಕತೆಯಲ್ಲೂ ಭಾಗಿಯಾಗಿದ್ದಾರೆ.
ಅಮೆರಿಕದಿಂದ ಸೆ. 25ರಂದು ವಾಪಸಾಗುವಾಗ ಪ್ರವಾಸದ ಒಟ್ಟಾರೆ ಫಲಿತಾಂಶ ಮತ್ತು ಕೈಗೊಳ್ಳಬೇಕಾದ ಕ್ರಮಗಳ ಕುರಿತು ಕೂಡ ಅವರು ನಿಯೋಗದ ಅಧಿಕಾರಿಗಳಿಗೆ ಸೂಚನೆ ನೀಡುವ ಸಂಬಂಧ ಸಭೆ ನಡೆಸಿದ್ದಾರೆ ಎನ್ನಲಾಗಿದೆ. ಭಾನುವಾರ ಬೆಳಗ್ಗೆ ದೆಹಲಿ ತಲುಪಿರುವ ಅವರು ಸರ್ಕಾರದ ಮಹತ್ವದ ಜವಾಬ್ದಾರಿಗಳನ್ನು ಕೂಡ ನಿಭಾಯಿಸಲು ಮುಂದಾಗಿದ್ದಾರೆ ಎಂದು ಸರ್ಕಾರಿ ಮೂಲಗಳು ತಿಳಿಸಿವೆ.