ಬ್ರಿಟನ್ನಲ್ಲಿರುವ ಭಾರತೀಯರಿಗೆ ಕೋವಿಡ್ ಲಸಿಕೆಯ ಸ್ಟೇಟಸ್ ಕುರಿತಂತೆ ವಾದ ವಿವಾದಗಳು ಜೋರಾಗಿರುವ ನಡುವೆಯೇ, ಕೋವಿಡ್-19 ಲಸಿಕೆಯ ಎರಡೂ ಲಸಿಕೆಗಳನ್ನು ಪಡೆದ ಮಂದಿಗೆ ಕೋವಿನ್ ಪ್ರಮಾಣ ಪತ್ರಗಳಲ್ಲಿ ಜನ್ಮ ದಿನಾಂಕವನ್ನೂ ನಮೂದಿಸಲು ನಿರ್ಧರಿಸಲಾಗಿದೆ.
ಈ ನಡೆಯಿಂದಾಗಿ ವಿದೇಶಗಳಿಗೆ ತೆರಳುವ ಭಾರತೀಯರಿಗೆ ಅನುಕೂಲವಾಗಲಿದೆ. ಸದ್ಯಕ್ಕೆ ಕೋವಿನ್ ಪ್ರಮಾಣ ಪತ್ರಗಳಲ್ಲಿ ಲಸಿಕೆ ಪಡೆದವರ ವಯಸ್ಸನ್ನಷ್ಟೇ ನೀಡಲಾಗುತ್ತಿದೆ. ಇದೀಗ ವಿಶ್ವ ಸಂಸ್ಥೆಯ ಮಾನದಂಡಗಳಿಗೆ ಅನುಗುಣವಾಗಿ ಕೋವಿನ್ ಪ್ರಮಾಣ ಪತ್ರದಲ್ಲಿ ಜನ್ಮ ದಿನಾಂಕವನ್ನೂ ನಮೂದಿಸಲಾಗುವುದು.
BIG BREAKING: ಒಂದೇ ದಿನದಲ್ಲಿ 28,326 ಜನರಲ್ಲಿ ಹೊಸದಾಗಿ ಕೊರೊನಾ ಸೋಂಕು ಪತ್ತೆ; ದೇಶದಲ್ಲಿದೆ ಇನ್ನೂ 3,03,476 ಸಕ್ರಿಯ ಪ್ರಕರಣ
“ಕೋವಿನ್ ಪ್ರಮಾಣ ಪತ್ರಕ್ಕೆ ಹೊಸ ಫೀಚರ್ ಸೇರಿಸಲು ನಿರ್ಧರಿಸಲಾಗಿದ್ದು, ಸಂಪೂರ್ಣ ಲಸಿಕೆ ಪಡೆದು ವಿದೇಶಗಳಿಗೆ ತೆರಳಲು ಇಚ್ಛಿಸುವ ಮಂದಿಗೆ ತಮ್ಮ ಲಸಿಕಾ ಪ್ರಮಾಣ ಪತ್ರಗಳ ಮೇಲೆ ಜನ್ಮ ದಿನಾಂಕವನ್ನೂ ನಮೂದಿಸಲಾಗುತ್ತದೆ” ಎಂದು ಹೆಸರು ಹೇಳಲಿಚ್ಛಿಸದ ಅಧಿಕಾರಿಯೊಬ್ಬರು ತಿಳಿಸಿದ್ದಾರೆ.
ಕೋವಿ ಶೀಲ್ಡ್ ಹಾಗೂ ಭಾರತದಲ್ಲಿ ನಿರ್ಮಿತವಾದ ಅಸ್ಟ್ರಾಜ಼ೆಂಕಾ ಲಸಿಕೆಯನ್ನು ಬ್ರಿಟನ್ ಸರ್ಕಾರವು ತನ್ನ ಅಂತಾರಾಷ್ಟ್ರೀಯ ಪ್ರಯಾಣ ಮಾರ್ಗಸೂಚಿಯಲ್ಲಿ ಅನುಮತಿಸಲಾದ ಪಟ್ಟಿಯಲ್ಲಿ ಸೇರಿಸಿದೆ.