alex Certify ತಾಲಿಬಾನಿ ಬಿಜೆಪಿ ಎಂದು ಕೇಂದ್ರ ಸರ್ಕಾರದ ವಿರುದ್ದ ಗುಡುಗಿದ ದೀದಿ | Kannada Dunia | Kannada News | Karnataka News | India News
ಕನ್ನಡ ದುನಿಯಾ
    Dailyhunt JioNews

Kannada Duniya

ತಾಲಿಬಾನಿ ಬಿಜೆಪಿ ಎಂದು ಕೇಂದ್ರ ಸರ್ಕಾರದ ವಿರುದ್ದ ಗುಡುಗಿದ ದೀದಿ

ವಿಶ್ವ ಶಾಂತಿ ಸಮ್ಮೇಳನದಲ್ಲಿ ಭಾಗಿಯಾಗಲು ತಾವು ಇಟಲಿಗೆ ತೆರಳಲು ಅಗತ್ಯ ಅನುಮತಿಗಾಗಿ ಪಶ್ಚಿಮ ಬಂಗಾಳ ಮುಖ್ಯಮಂತ್ರಿ ಮಮತಾ ಬ್ಯಾನರ್ಜಿ ಅವರು ಕೇಂದ್ರ ಸರ್ಕಾರಕ್ಕೆ ಕೇಳಿದ್ದರು.

ಆದರೆ ಕೇಂದ್ರ ವಿದೇಶಾಂಗ ಸಚಿವಾಲಯವು ಮಮತಾ ಅವರು ಇಟಲಿಯ ರೋಮ್‌ನಲ್ಲಿ ಮುಂಬರುವ ಅಕ್ಟೋಬರ್‌ನಲ್ಲಿ ನಡೆಯುವ ಶಾಂತಿ ಸಮ್ಮೇಳನಕ್ಕೆ ‘ತೆರಳುವುದು ಬೇಡ ‘ ಎಂದಿದೆ. ಅವರಿಗೆ ಅನುಮತಿಯನ್ನು ನಿರಾಕರಿಸಿದೆ.

ರಾಜ್ಯ ಮುಖ್ಯಮಂತ್ರಿಯೊಬ್ಬರು ಭಾಗಿಯಾಗುವಷ್ಟು ತಕ್ಕುದಾದ ಸಮ್ಮೇಳನವಲ್ಲ ಎಂಬ ಸಬೂಬು ಸಚಿವಾಲಯದಿಂದ ದೀದಿಗೆ ಸಿಕ್ಕಿದೆ.

ಈ ಬಗ್ಗೆ ಕೆಂಡಾಮಂಡಲ ಆಗಿರುವ ಮಮತಾ ಅವರು, ಬಿಜೆಪಿಯ ಸರ್ವಾಧಿಕಾರಿ ಧೋರಣೆಯನ್ನು ತಾಲಿಬಾನಿ ಉಗ್ರರ ಆಡಳಿತಕ್ಕೆ ಹೋಲಿಸಿದ್ದಾರೆ. ರಾಜ್ಯ ಸರಕಾರಗಳ ಸ್ವಾತಂತ್ರ್ಯಗಳನ್ನು ಹತ್ತಿಕ್ಕುವ ಕೇಂದ್ರ ಸರ್ಕಾರದ ಕೆಟ್ಟ ಧೋರಣೆಯನ್ನು ತೀವ್ರವಾಗಿ ಖಂಡಿಸಿದ್ದಾರೆ.

ಅಧಿಕಾರ ಹಿಡಿಯಲು ಜೆಡಿಎಸ್ ಮಹತ್ವದ ಕ್ರಮ: ಸಂಘಟನೆಗೆ ಚುರುಕು

ದೇಶದಲ್ಲಿ ಬಿಜೆಪಿಯ ದುರಾಡಳಿತ, ಸರ್ವಾಧಿಕಾರವನ್ನು ಟಿಎಂಸಿ ಒಂದೇ ಅಂತ್ಯಗೊಳಿಸಲಿದೆ. ಭವಾನಿಪುರದ ಉಪಚುನಾವಣೆಯಲ್ಲಿ ತಮ್ಮ ಪ್ರಚಂಡ ಜಯಭೇರಿಯಿಂದ ಇದು ಶುರುವಾಗಲಿದೆ. ಪೂರ್ಣ ದೇಶ ಗೆದ್ದು ಬಿಜೆಪಿಗೆ ಮಣ್ಣು ಮುಕ್ಕಿಸುತ್ತೇನೆ ಎಂದು ಕೊಲ್ಕತ್ತಾದ ಸಾರ್ವಜನಿಕ ಸಮಾರಂಭದಲ್ಲಿ ಗುಡುಗಿದ್ದಾರೆ.

ಕ್ಯಾಥೊಲಿಕ್‌ ಕ್ರಿಶ್ಚಿಯನ್ನರ ಉನ್ನತ ಧರ್ಮಗುರು ಪೋಪ್‌ ಫ್ರಾನ್ಸಿಸ್‌, ಜರ್ಮನಿ ಪ್ರಧಾನಿ ಏಂಜೆಲಾ ಮರ್ಕೆಲ್‌ ಅವರು ವಿಶ್ವ ಶಾಂತಿ ಸಮ್ಮೇಳನಕ್ಕೆ ಬರುವಂತೆ ಮಮತಾ ಅವರಿಗೆ ಆಹ್ವಾನ ನೀಡಿದ್ದಾರಂತೆ. ಆದರೆ, ರಾಜಕೀಯ ದ್ವೇಷದಿಂದ ಬಿಜೆಪಿಯು ಮಮತಾ ಅವರಿಗೆ ವಿದೇಶಕ್ಕೆ ಹಾರುವ ಅನುಮತಿಯನ್ನು ನಿರಾಕರಿಸಿದೆ. ಪಶ್ಚಿಮ ಬಂಗಾಳದ ವಿರುದ್ಧ ಪ್ರಧಾನಿ ಮೋದಿ ಹಗೆ ಸಾಧಿಸುತ್ತಿದ್ದಾರೆ ಎಂದು ಟಿಎಂಸಿ ವರಿಷ್ಠರು ಟ್ವಿಟರ್‌ನಲ್ಲಿ ಅಸಮಾಧಾನ ವ್ಯಕ್ತಪಡಿಸಿದ್ದಾರೆ.

Opinion Poll

  • ʼಮುಡಾʼ ಹಗರಣದಲ್ಲಿ ರಾಜೀನಾಮೆ ನೀಡ್ತಾರಾ ಸಿಎಂ ಸಿದ್ದರಾಮಯ್ಯ ?

    View Results

    Loading ... Loading ...