ದೇಶದ ಪ್ರತಿಷ್ಠಿತ ಮಾಹಿತಿ ತಂತ್ರಜ್ಞಾನ ಕಂಪನಿ ಎನಿಸಿರುವ ಎಚ್‌ಸಿಎಲ್ ಟೆಕ್ನಾಲಜೀಸ್‌ನಲ್ಲಿ ಈಗ ತಾನೇ ಇಂಜಿನಿಯರಿಂಗ್ ಪದವಿ ಪೂರ್ಣಗೊಳಿಸಿರುವವರಿಗೆ ಉದ್ಯೋಗಾವಕಾಶಗಳು ಇವೆಯಂತೆ. ಆದರೆ, ಅವರು ಮೊದಲು ತಮ್ಮ ’ಫಸ್ಟ್ ಕೆರಿಯರ್ಸ್ ಕಾರ್ಯಕ್ರಮ’ದ ಮೂಲಕ ತರಬೇತಿ ನೀಡಿ, ಅರ್ಹ ಅಭ್ಯರ್ಥಿಗಳು ಆಯ್ಕೆ ಮಾಡಿಕೊಳ್ಳಲು ಮುಂದಾಗಿದ್ದಾರೆ.
ಈ ಕಾರ್ಯಕ್ರಮದ ಉದ್ದೇಶವು ಯುವ ಪದವೀಧರರನ್ನು ಐಟಿ ಕ್ಷೇತ್ರಕ್ಕೆ ಸೂಕ್ತರಾದ ವೃತ್ತಿಪರರಂತೆ ಮಾರ್ಪಡಿಸುವುದಾಗಿದೆ. ಆಗ ಇತರ ಕಂಪನಿಗಳು ಕೂಡ ಇಂಥವರ ನೇಮಕಾತಿಗೆ ಮುಗಿಬೀಳುತ್ತವೆ ಎಂದು ಕಂಪನಿ ಪ್ರಕಟಣೆಯಲ್ಲಿ ಹೇಳಿದೆ. ಬಿ.ಇ/ಎಂ.ಟೆಕ್/ ಬಿಸಿಎ/ ಎಂ.ಇ/ಎಂಸಿಎ ಪದವಿಗಳನ್ನು 2018, 2019, 2020 ಮತ್ತು 2021ರಲ್ಲಿ ಮುಗಿಸಿರುವವರು ಈ ಕಾರ್ಯಕ್ರಮಕ್ಕೆ ಸೇರ್ಪಡೆ ಆಗಲು ಅರ್ಹರಾಗಿದ್ದಾರೆ.
ಮುಖ್ಯವಾಗಿ ಅಭ್ಯರ್ಥಿಗಳು 10ನೇ ತರಗತಿ ಮತ್ತು 2ನೇ ವರ್ಷದ ಪಿಯುಸಿಯಲ್ಲಿ ಕನಿಷ್ಠ 65% ಅಂಕ ಗಳಿಸಿರಬೇಕು. ಒಟ್ಟು ಆರು ತಿಂಗಳ ಕಾರ್ಯಕ್ರಮದಲ್ಲಿ ಮೊದಲ ಮೂರು ತಿಂಗಳು ‘ವರ್ಚುಯೆಲ್ ಕ್ಲಾಸ್‌ರೂಮ್ ‘ ತರಬೇತಿ ಅಭ್ಯರ್ಥಿಗಳಿಗೆ ನೀಡಲಾಗುವುದು. ಬಳಿಕ ಕಚೇರಿಯಲ್ಲೇ ವಿವಿಧ ಪ್ರಾಜೆಕ್ಟ್ ಗಳಲ್ಲಿ ಕೆಲಸ ಮಾಡುವ ಅನುಭವ ದೊರೆಯಲಿದೆ. ತರಬೇತಿ ಬಳಿಕ ಉತ್ತಮ ಪ್ರದರ್ಶನ ತೋರಿದ ಅಭ್ಯರ್ಥಿಗಳಿಗೆ ವಾರ್ಷಿಕ 2.75 ಲಕ್ಷ ರೂ. ಸಂಬಳ ನೀಡಿ ಕಂಪನಿಯೇ ನೇಮಕ ಮಾಡಿಕೊಳ್ಳಲಿದೆ ಎಂದು ತಿಳಿಸಲಾಗಿದೆ.
ಹೆಚ್ಚಿನ ಮಾಹಿತಿಗೆ ‘ https://hclfirstcareers.com/upcoming-walk-in-drives/ ‘ ವೆಬ್‌ಸೈಟ್‌ಗೆ ಭೇಟಿ ನೀಡಿರಿ.