alex Certify ಅಪ್ಪನಿಗೆ ಟ್ರಾಫಿಕ್ ನಿಯಮಗಳ ಪಾಠ ಹೇಳಿದ ಪುಟ್ಟ ಪೋರಿ | Kannada Dunia | Kannada News | Karnataka News | India News
ಕನ್ನಡ ದುನಿಯಾ
    Dailyhunt JioNews

Kannada Duniya

ಅಪ್ಪನಿಗೆ ಟ್ರಾಫಿಕ್ ನಿಯಮಗಳ ಪಾಠ ಹೇಳಿದ ಪುಟ್ಟ ಪೋರಿ

ಜೀವನ ಅನೇಕ ಕೌಶಲ್ಯಗಳನ್ನು ಕಲಿಸಲು ಪೋಷಕರು ತಮ್ಮ ಮಕ್ಕಳಿಗೆ ಪಾಠಗಳನ್ನು ಹೇಳುವುದು ಸಹಜ. ಆದರೆ ಪುಟ್ಟಿಯೊಬ್ಬಳು ತನ್ನ ತಂದೆಗೆ ಸಂಚಾರಿ ನಿಯಮ ಪಾಲಿಸುವ ಸಂಬಂಧ ಪಾಠ ಹೇಳುತ್ತಿರುವ ವಿಡಿಯೋವೊಂದು ವೈರಲ್ ಆಗಿದೆ.

ಸೂರತ್‌ ನಗರ ಪೊಲೀಸ್ ಹಂಚಿಕೊಂಡ ಈ ವಿಡಿಯೋ ಇನ್‌ಸ್ಟಾಗ್ರಾಂನಲ್ಲಿ ಸದ್ದು ಮಾಡುತ್ತಿದ್ದು, ತನ್ನ ಅಪ್ಪನಿಗೆ ಸಂಚಾರಿ ನಿಯಮಗಳನ್ನು ಉಲ್ಲಂಘನೆ ಮಾಡದಿರಲು ಬಾಲಕಿ ಕೇಳಿಕೊಳ್ಳುತ್ತಿದ್ದಾಳೆ. ನಿಯಮಗಳನ್ನು ಪಾಲಿಸದೇ ಇದ್ದರೆ ತಾನು ಬಹಳ ಸ್ಟ್ರಿಕ್ಟ್ ಆಗಬೇಕಾಗುತ್ತದೆ ಎಂದು ವಾರ್ನ್ ಮಾಡುವ ಸನ್ನಿವೇಶ ವಿಡಿಯೋದ ಆರಂಭದಲ್ಲಿ ಕಾಣಿಸಿಕೊಳ್ಳುತ್ತಾರೆ.

ಅಪ್ಪ-ಮಗಳ ನಡುವೆ ಸಂವಾದ ಮುಂದುವರೆದಂತೆ, ರಸ್ತೆಯ ತಪ್ಪಾದ ಬದಿಯಲ್ಲಿ ಕಾರು ಓಡಿಸುತ್ತಿರುವ ತನ್ನ ತಂದೆಗೆ, ಸಂಚಾರಿ ನಿಯಮ ಪಾಲಿಸದೇ ಇದ್ದರೆ ನಿನಗೆ ಯಾರು ದಂಡ ಹಾಕುತ್ತಾರೆ ಎಂದು ಮಗಳು ಕೇಳುವುದನ್ನು ವಿಡಿಯೋದಲ್ಲಿ ನೋಡಬಹುದಾಗಿದೆ. ಮಗಳಿಂದ ಹೀಗೊಂದು ಅಲರ್ಟ್ ಕೇಳುತ್ತಲೇ ತಂದೆ ಭಾರೀ ಮುಜುಗರಕ್ಕೊಳಗಾಗಿದ್ದಾರೆ.

ಪುಟಾಣಿಗಳು ದೊಡ್ಡವರನ್ನೇ ನೋಡುತ್ತಾ ಎಲ್ಲವನ್ನೂ ಕಲಿಯುವ ಕಾರಣ ದೊಡ್ಡವರು ತಾವು ಮಾಡುವ ಪ್ರತಿಯೊಂದು ಕೆಲಸದ ಬಗ್ಗೆಯೂ ಜಾಗರೂಕರಾಗಿರಬೇಕು ಎಂಬ ನೋಟ್‌ನೊಂದಿಗೆ ವಿಡಿಯೋ ಕೊನೆಗೊಳ್ಳುತ್ತದೆ.

https://www.instagram.com/p/CUM8Cp6rNCv/?utm_source=ig_embed&ig_rid=1e2c0032-204e-411d-bcfc-40af63b32573

 

 

Opinion Poll

  • ʼಮುಡಾʼ ಹಗರಣದಲ್ಲಿ ರಾಜೀನಾಮೆ ನೀಡ್ತಾರಾ ಸಿಎಂ ಸಿದ್ದರಾಮಯ್ಯ ?

    View Results

    Loading ... Loading ...