ಬೆಂಗಳೂರು: ಒಂದೂವರೆ ವರ್ಷದ ನಂತರ ಅಲ್ಕೋಮೀಟರ್ ಬಳಸಿ ಇಂದಿನಿಂದ ಡ್ರಂಕ್ ಅಂಡ್ ಡ್ರೈವ್ ತಪಾಸಣೆ ಮಾಡಲಾಗುತ್ತದೆ. ಹೊಸ ಅಲ್ಕೋಮೀಟರ್ ಮೂಲಕ ಟೆಸ್ಟ್ ಮಾಡಲಾಗುವುದು.
ಕೊರೋನಾಕಾರಣದಿಂದಾಗಿ ಒಂದೂವರೆ ವರ್ಷ ಡ್ರಂಕ್ ಅಂಡ್ ಡ್ರೈವ್ ಸ್ಥಗಿತಗೊಳಿಸಲಾಗಿತ್ತು. ಇಂದು ರಾತ್ರಿಯಿಂದಲೇ ರಸ್ತೆಗಿಳಿದು ಪೊಲೀಸರು ಡ್ರಂಕ್ ಅಂಡ್ ಡ್ರೈವ್ ಟೆಸ್ಟ್ ಮಾಡಲಿದ್ದಾರೆ.
ಪ್ರತಿ ಠಾಣೆಗೆ ತಲಾ 10 ಅಲ್ಕೋಮೀಟರ್ ನೀಡಲಾಗಿದೆ. ತಜ್ಞರ ಸಲಹೆಯಂತೆ ಡ್ರಂಕ್ ಅಂಡ್ ಡ್ರೈವ್ ತಪಾಸಣೆಯನ್ನು ಸ್ಥಗಿತಗೊಳಿಸಲಾಗಿತ್ತು. ಇದನ್ನೇ ದುರ್ಬಳಕೆ ಮಾಡಿಕೊಳ್ಳುವ ಘಟನೆಗಳು ನಡೆಯುತ್ತಿದ್ದು, ಇತ್ತೀಚೆಗೆ ಕೆಲವು ಅಪಘಾತಗಳು ನಡೆದಿರುವುದನ್ನು ಗಮನಿಸಲಾಗಿದೆ. ಅಲ್ಲದೇ, ದೇಶದ ಕೆಲವು ನಗರಗಳಲ್ಲಿ ಡ್ರಂಕ್ ಅಂಡ್ ಡ್ರೈವ್ ಶುರು ಮಾಡಲಾಗಿದೆ. ಇಲ್ಲಿಯೂ ತಜ್ಞರ ಸಲಹೆ ಪಡೆದು ಡ್ರಂಕ್ ಅಂಡ್ ಡ್ರೈವ್ ತಪಾಸಣೆ ಮಾಡಲಿದ್ದು, ಅನುಮಾನಿತರನ್ನು ವೈದ್ಯಕೀಯ ಪರೀಕ್ಷೆಗೆ ಒಳಪಡಿಸಲಾಗುತ್ತದೆ.
ಡ್ರಂಕ್ ಅಂಡ್ ಡ್ರೈವ್ ಟೆಸ್ಟ್ ಗೆ ಇಚ್ಛಿಸವರಿಗೆ ರಕ್ತ ಪರೀಕ್ಷೆಗೊಳಪಡಿಸುವ ಆಯ್ಕೆ ಇರುತ್ತದೆ. ಸಿಬ್ಬಂದಿಗೆ ಮಾಸ್ಕ್, ಗ್ಲೌಸ್ ಮತ್ತು ಫೇಸ್ ಶೀಲ್ಡ್ ಕಡ್ಡಾಯವಾಗಿದ್ದು, ರಕ್ಷಣಾತ್ಮಕವಾಗಿ ಡ್ರಂಕ್ ಅಂಡ್ ಡ್ರೈವ್ ತಪಾಸಣೆ ಮಾಡಲಾಗುವುದು. ಪೊಲೀಸರ ಜೊತೆಗೆ ಘರ್ಷಣೆಗೆ ಇಳಿಯದೆ ಸಾರ್ವಜನಿಕರು ಸಹಕಾರ ನೀಡಬೇಕೆಂದು ಎಂದು ಹೇಳಲಾಗಿದೆ.