alex Certify ಸುಪ್ರೀಂ ಕೋರ್ಟ್ ಇಮೇಲ್ ನಿಂದ ಪ್ರಧಾನಿ ಮೋದಿ ಫೋಟೋಗೆ ಕೊಕ್​..! | Kannada Dunia | Kannada News | Karnataka News | India News
ಕನ್ನಡ ದುನಿಯಾ
    Dailyhunt JioNews

Kannada Duniya

ಸುಪ್ರೀಂ ಕೋರ್ಟ್ ಇಮೇಲ್ ನಿಂದ ಪ್ರಧಾನಿ ಮೋದಿ ಫೋಟೋಗೆ ಕೊಕ್​..!

ಸುಪ್ರಿಂ ಕೋರ್ಟ್ ಅಧಿಕೃತ ಇಮೇಲ್​​ನಲ್ಲಿ ಪ್ರಧಾನಿ ಮೋದಿಯವರ ಫೋಟೋ ಹಾಗೂ ʼಸಬ್​ ಕಾ ಸಾಥ್​ ಸಬ್​ ಕಾ ವಿಕಾಸ್ʼ​ ಅಡಿಬರಹಗಳನ್ನು ಅಳಿಸಿಹಾಕುವಂತೆ ಸರ್ವೋಚ್ಛ ನ್ಯಾಯಾಲಯ ರಾಷ್ಟ್ರೀಯ ಮಾಹಿತಿ ಕೇಂದ್ರಕ್ಕೆ ಸೂಚನೆ ನೀಡಿದೆ.

ಪ್ರಧಾನಿ ಮೋದಿಯವರ ಫೋಟೋ ಇರುವ ಜಾಗದಲ್ಲಿ ಸುಪ್ರೀಂಕೋರ್ಟ್​ನ ಫೋಟೋ ಅಳವಡಿಸುವಂತೆಯೂ ಸೂಚನೆ ನೀಡಲಾಗಿದೆ.

ಅನೇಕ ವಕೀಲರು ನೀಡಿದ ದೂರನ್ನು ಆಧರಿಸಿ ಸುಪ್ರೀಂ ಕೋರ್ಟ್ ರಿಜಿಸ್ಟರ್​ ನಿನ್ನೆ ಎನ್​​ಐಸಿಗೆ ಪತ್ರವನ್ನು ಬರೆದಿದ್ದಾರೆ. ಇಮೇಲ್​ನಲ್ಲಿ ʼಆಜಾದಿ ಕಾ ಮಹೋತ್ಸವ್ʼ ಘೋಷ ವಾಕ್ಯ ಹಾಗೂ ಇದರೊಂದಿಗಿರುವ ಪ್ರಧಾನಿ ಮೋದಿ ಫೋಟೋವನ್ನು ಅಳಿಸಿ ಹಾಕಿ ಸುಪ್ರೀಂ ಕೋರ್ಟ್​ನದ್ದೇ ಫೋಟೋ ಹಾಕುವಂತೆ ಪತ್ರದಲ್ಲಿ ತಿಳಿಸಲಾಗಿದೆ.

ಪ್ರಧಾನಿ ಮೋದಿ ಫೋಟೋ ವಿವಾದದ ಕಿಡಿ ಹೊತ್ತಿಸಿರೋದು ಇದೇ ಮೊದಲೇನಲ್ಲ. ಕೋವಿಡ್​ ಲಸಿಕೆ ಪ್ರಮಾಣ ಪತ್ರಗಳಲ್ಲಿ ಮೋದಿಯ ಫೋಟೋ ಕೂಡ ಅನೇಕರ ಕೆಂಗಣ್ಣಿಗೆ ಕಾರಣವಾಗಿತ್ತು. ಆದರೆ ಕೇಂದ್ರ ಸರ್ಕಾರ ಮಾತ್ರ ವಿರೋಧಗಳ ನಡುವೆಯೂ ಯಾವುದೇ ಬದಲಾವಣೆಗಳನ್ನು ಮಾಡಿಲ್ಲ.

Opinion Poll

  • ʼಮುಡಾʼ ಹಗರಣದಲ್ಲಿ ರಾಜೀನಾಮೆ ನೀಡ್ತಾರಾ ಸಿಎಂ ಸಿದ್ದರಾಮಯ್ಯ ?

    View Results

    Loading ... Loading ...