alex Certify ಸಾಧನೆಗೆ ಅಡ್ಡಿಯೆನಿಸಲಿಲ್ಲ ದೇಹದ ನ್ಯೂನ್ಯತೆ..! ವಿಶ್ವ ದಾಖಲೆಯನ್ನೇ ನಿರ್ಮಿಸಿದ ದಿವ್ಯಾಂಗ | Kannada Dunia | Kannada News | Karnataka News | India News
ಕನ್ನಡ ದುನಿಯಾ
    Dailyhunt JioNews

Kannada Duniya

ಸಾಧನೆಗೆ ಅಡ್ಡಿಯೆನಿಸಲಿಲ್ಲ ದೇಹದ ನ್ಯೂನ್ಯತೆ..! ವಿಶ್ವ ದಾಖಲೆಯನ್ನೇ ನಿರ್ಮಿಸಿದ ದಿವ್ಯಾಂಗ

ಸಾಧಿಸಬೇಕೆಂಬ ಛಲವೊಂದಿದ್ದರೆ ಸಾಕು ಯಾವುದೇ ಅಡೆತಡೆಗಳು ಲೆಕ್ಕಕ್ಕೆ ಬರೋದಿಲ್ಲ. ಈ ಮಾತಿಗೆ ಪ್ರತ್ಯಕ್ಷ ಸಾಕ್ಷಿ ಎಂಬಂತೆ 23 ವರ್ಷದ ಜಿಯೋನ್​ ಕ್ಲಾರ್ಕ್ ಎಂಬವರು ಸಾಧನೆ ಮಾಡಿ ತೋರಿಸಿದ್ದಾರೆ.

20 ಮೀಟರ್​ಗಳಷ್ಟು ದೂರ ತಮ್ಮ ಕೈನಿಂದ ಅತ್ಯಂತ ವೇಗವಾಗಿ ಚಲಿಸುವ ಮೂಲಕ ಜಿಯೋನ್​ ವಿಶ್ವ ದಾಖಲೆ ನಿರ್ಮಿಸಿದ್ದಾರೆ. 20 ಮೀಟರ್​ ದೂರವನ್ನು ಜಿಯೋನ್​ ಕೇವಲ 4.76 ಸೆಕೆಂಡ್​ಗಳಲ್ಲಿ ಕ್ರಮಿಸಿದ್ದಾರೆ.

ಜಿಯೋನ್ ಕ್ಲಾರ್ಕ್​ ಸಾಧನೆ ಇಷ್ಟೊಂದು ವಿಶೇಷ ಎನಿಸಲು ವಿಶೇಷ ಕಾರಣವೊಂದಿದೆ. ಕ್ಲಾರ್ಕ್​ಗೆ ಎರಡೂ ಕಾಲುಗಳಿಲ್ಲ. ಓಹಿಯೋದ ನಿವಾಸಿಯಾದ ಕ್ಲಾರ್ಕ್​ ಹುಟ್ಟುತ್ತಲೇ ಕಾಲುಗಳನ್ನು ಹೊಂದಿರಲಿಲ್ಲ. ಕಾಡಲ್ ರಿಗ್ರೆಷನ್ ಸಿಂಡ್ರೋಮ್​ನಿಂದ ಬಳಲುತ್ತಿರುವ ಕ್ಲಾರ್ಕ್​ ಹುಟ್ಟುವಾಗಲೇ ತಮ್ಮ ಅರ್ಧ ದೇಹವನ್ನೇ ಹೊಂದಿರಲಿಲ್ಲ.

ಆದರೆ ಈ ನ್ಯೂನ್ಯತೆಯು ಕ್ಲಾರ್ಕ್​ರ ಸಾಧನೆಯ ಹಾದಿಗೆ ಅಡ್ಡಿ ಎನಿಸಲಿಲ್ಲ. ಶಾಲಾ ದಿನಗಳಲ್ಲಿ ಕುಸ್ತಿಪಟು ಕೂಡ ಆಗಿದ್ದ ಕ್ಲಾರ್ಕ್​ ಯಾವಾಗಲೂ ಕ್ರೀಡಾ ಲೋಕದಲ್ಲಿ ಆಸಕ್ತಿ ಹೊಂದಿದ್ದವರಾಗಿದ್ದರು.

ಈ ವರ್ಷದ ಫೆಬ್ರವರಿ ತಿಂಗಳಲ್ಲಿ ಕ್ಲಾರ್ಕ್​ ಕೈಗಳ ಸಹಾಯದಿಂದ ಚಲಿಸಬಲ್ಲ ವಿಶ್ವದ ವೇಗದ ವ್ಯಕ್ತಿ ಎನಿಸಿಕೊಳ್ಳಬೇಕೆಂದು ಮೊದಲ ಪ್ರಯತ್ನ ಮಾಡಿದರು. ಈ ಹಿಂದಿನ 4.78 ಸೆಕೆಂಡ್​ಗಳ ದಾಖಲೆಯನ್ನು ಮುರಿಯುವಲ್ಲಿ ಕ್ಲಾರ್ಕ್ ಯಶಸ್ವಿಯಾದರು.

https://www.instagram.com/tv/CUNq5QGjUBZ/?utm_source=ig_web_copy_link

https://www.instagram.com/p/CT5GJ5rvR9x/?utm_source=ig_web_copy_link

 

 

Opinion Poll

  • ʼಮುಡಾʼ ಹಗರಣದಲ್ಲಿ ರಾಜೀನಾಮೆ ನೀಡ್ತಾರಾ ಸಿಎಂ ಸಿದ್ದರಾಮಯ್ಯ ?

    View Results

    Loading ... Loading ...