ಕೊರೊನಾ ಸಂದರ್ಭದಲ್ಲಿ ವಿಮಾನ ಟಿಕೆಟ್ ಬುಕ್ ಮಾಡುವುದು ಸುಲಭವಲ್ಲ. ಅಗ್ಗದ ದರದಲ್ಲಿ ವಿಮಾನ ಟಿಕೆಟ್ ಸಿಗುವುದು ಕಷ್ಟ. ಕೆಲವೊಂದು ಸುಲಭ ವಿಧಾನದ ಮೂಲಕ ನೀವು ಅಗ್ಗದ ದರದಲ್ಲಿ ಟಿಕೆಟ್ ಖರೀದಿ ಮಾಡಬಹುದು.
ವಿಮಾನ ಟಿಕೆಟ್‌ಗಳನ್ನು ಹುಡುಕುವುದು ಮತ್ತು ಸಮಯಕ್ಕೆ ಸರಿಯಾಗಿ ಬುಕ್ ಮಾಡುವುದು ಸುಲಭವಲ್ಲ. ಅವಸರದಲ್ಲಿ ಟಿಕೆಟ್ ಬುಕ್ ಮಾಡಿದಾಗ ಹೆಚ್ಚಿನ ಹಣ ಪಾವತಿ ಮಾಡಬೇಕಾಗಿತ್ತದೆ. ಪ್ರಯಾಣದ ದಿನಾಂಕ ಮೊದಲೇ ನಿಮಗೆ ತಿಳಿದಿದ್ದರೆ, ನೀವು ಮುಂಚಿತವಾಗಿಯೇ ಟಿಕೆಟ್ ಕಾಯ್ದಿರಿಸಬಹುದು. ಒಂದು ತಿಂಗಳ ಮೊದಲೇ ಟಿಕೆಟ್ ಬುಕ್ ಮಾಡಿದ್ರೆ ನಿಮಗೆ ಕಡಿಮೆ ಬೆಲೆಗೆ ಟಿಕೆಟ್ ಸಿಗುತ್ತದೆ.
ಗೋಏರ್, ಏರ್ ಏಷ್ಯಾ, ಜೆಟ್ ಸ್ಟಾರ್, ಇಂಡಿಗೊ, ಸ್ಪೈಸ್ ಜೆಟ್ ನಂತಹ ಕಂಪನಿಗಳು ಕೆಲವೊಂದು ರಿಯಾಯಿತಿ ನೀಡುತ್ತದೆ. ಹಲವು ಬಾರಿ 1000 ರೂಪಾಯಿಗಳಿಗಿಂತ ಕಡಿಮೆ ಬೆಲೆಗೆ ವಿಮಾನ ಟಿಕೆಟ್ ಸಿಗುತ್ತದೆ. ಅಗ್ಗದ ವಿಮಾನ ಟಿಕೆಟ್ ಪಡೆಯಲು ಉತ್ತಮ ಮಾರ್ಗವೆಂದರೆ ಫ್ಲೈಟ್ ಅಲರ್ಟ್‌ಗಳಿಗೆ ಚಂದಾದಾರರಾಗುವುದು. ಎಲ್ಲಾ ಏರ್‌ಲೈನ್‌ಗಳ ಸಾಮಾಜಿಕ ಮಾಧ್ಯಮ ಪುಟಗಳನ್ನು ಪರಿಶೀಲಿಸುತ್ತಿರಬೇಕು. ಅದರಲ್ಲಿ ಹೊಸ ಕೊಡುಗೆಗಳ ಬಗ್ಗೆ ಮಾಹಿತಿ ಇರುತ್ತದೆ.
ಯಾವ ವಿಮಾನ ಸಂಸ್ಥೆ ಕಡಿಮೆ ಬೆಲೆಗೆ ಟಿಕೆಟ್ ನೀಡುತ್ತದೆ ಎಂಬುದನ್ನು ಪರಿಶೀಲಿಸಬೇಕು. ಬೆಲೆ ಹೋಲಿಕೆ ಮಾಡಿ ನೀವು ಟಿಕೆಟ್ ಬುಕ್ ಮಾಡಬೇಕು. ಹಾಗೆ ತಡೆರಹಿತ ವಿಮಾನಕ್ಕಿಂತ ಮಾರ್ಗ ಬದಲಾವಣೆ ವಿಮಾನ ಆಯ್ಕೆ ಮಾಡಿದ್ರೆ ದರ ಕಡಿಮೆಯಾಗುತ್ತದೆ. ಮುಂಬೈನಿಂದ ದೆಹಲಿಗೆ ಹೋಗಬೇಕಾದರೆ, ನೇರವಾಗಿ ದೆಹಲಿ ವಿಮಾನವನ್ನು ಆಯ್ಕೆ ಮಾಡುವ ಬದಲು, ಮುಂಬೈನಿಂದ ಬೇರೆ ರಾಜ್ಯಕ್ಕೆ ಹೋಗುವ ವಿಮಾನವನ್ನು ಆಯ್ಕೆ ಮಾಡಬಹುದು. ದೆಹಲಿ ನಿಲ್ದಾಣದಲ್ಲಿ ಆಗ ಇಳಿಯಬಹುದು.
ಅನೇಕ ಬ್ಯಾಂಕುಗಳು, ಗ್ರಾಹಕರಿಗೆ ಕ್ರೆಡಿಟ್ ಕಾರ್ಡ್ ಅಥವಾ ಡೆಬಿಟ್ ಕಾರ್ಡ್ ಪಾಯಿಂಟ್‌ಗಳ ರೂಪದಲ್ಲಿ ಉಚಿತ ವಿಮಾನದ ಆಫರ್ ನೀಡುತ್ತವೆ. ನೀವು ಇದ್ರ ಲಾಭ ಪಡೆಯಬಹುದು. ಒಂದಕ್ಕಿಂತ ಹೆಚ್ಚು ಬ್ಯಾಂಕ್ ಕಾರ್ಡ್ ಹೊಂದಿದ್ದರೆ, ನಂತರ ಪ್ರತಿ ಕಾರ್ಡ್‌ನ ನಿಯಮಗಳು ಮತ್ತು ಷರತ್ತುಗಳನ್ನು ಪರಿಶೀಲಿಸಿ, ಟಿಕೆಟ್ ಬುಕಿಂಗ್ ಮಾಡಬೇಕು. ಯಾವ ಕಾರ್ಡ್ ಗೆ ಹೆಚ್ಚು ರಿಯಾಯಿತಿ ಸಿಗುತ್ತದೆ ಎಂಬುದನ್ನು ಪರಿಶೀಲಿಸಬೇಕು.