ನವದೆಹಲಿ: ಭಾರತೀಯ ಅಂಚೆ ಇಲಾಖೆ ಗ್ರಾಮೀಣ ಡಾಕ್ ಸೇವಕ್(ಜಿಡಿಎಸ್) ಹುದ್ದೆಗಳ ನೇಮಕಾತಿಗೆ ಅರ್ಜಿಗಳನ್ನು ಆಹ್ವಾನಿಸಿದೆ.
ಆಯ್ದ ಅಭ್ಯರ್ಥಿಗಳನ್ನು ಬ್ರಾಂಚ್ ಪೋಸ್ಟ್ ಮಾಸ್ಟರ್, ಅಸಿಸ್ಟೆಂಟ್ ಬ್ರಾಂಚ್ ಪೋಸ್ಟ್ ಮಾಸ್ಟರ್ ಮತ್ತು ಡಾಕ್ ಸೇವಕ್ ಹುದ್ದೆಗಳಿಗೆ ನೇಮಕಾತಿ ಮಾಡಿಕೊಳ್ಳಲಾಗುವುದು. ಇಂಡಿಯಾ ಪೋಸ್ಟ್‌ನ ಉತ್ತರಾಖಂಡ ಪೋಸ್ಟಲ್ ಸರ್ಕಲ್ ನಲ್ಲಿ 581 ಕ್ಕಿಂತ ಹೆಚ್ಚು ಜಿಡಿಎಸ್ ಹುದ್ದೆಯ ಹುದ್ದೆಗಳಿಗೆ ಅಧಿಸೂಚನೆಯನ್ನು ಹೊರಡಿಸಿದೆ.
ಜಿಡಿಎಸ್ – 581 ಪೋಸ್ಟ್ ಗಳು
ಯುಆರ್ – 317
EWS – 57
ಒಬಿಸಿ – 78
PWD-B-6
PWD-C-7
PWD-DE-2
SC – 99
ST – 15
ಅಭ್ಯರ್ಥಿಗಳು ಮಾನ್ಯತೆ ಪಡೆದ ಮಂಡಳಿಯಿಂದ 10 ನೇ ತರಗತಿ ಮುಗಿಸಿರಬೇಕು ಮತ್ತು ಸ್ಥಳೀಯ ಭಾಷೆ ತಿಳಿದಿರಬೇಕು. ಕಂಪ್ಯೂಟರ್‌ಗಳ ಬೇಸಿಕ್ ಹೊಂದಿರಬೇಕು.
ಆಗಸ್ಟ್ 23, 2021 ರ ವೇಳೆಗೆ 18 ರಿಂದ 40 ವರ್ಷದೊಳಗಿನವರು ಮಾತ್ರ ಈ ನೇಮಕಾತಿ ಅಭಿಯಾನಕ್ಕೆ ಅರ್ಜಿ ಸಲ್ಲಿಸಬಹುದು. ಅಧಿಕೃತ ವೆಬ್‌ಸೈಟ್ https://indiapost.gov.in ಅಥವಾ https://appost.in/gdsonline ಮೂಲಕ ಅರ್ಜಿ ಸಲ್ಲಿಸಬಹುದು. ಅರ್ಜಿ ಸಲ್ಲಿಸಲು ಕೊನೆಯ ದಿನಾಂಕ ಸೆಪ್ಟೆಂಬರ್ 25, 2021 ಎಂಬುದನ್ನು ಗಮನಿಸಬಹುದು.
UR/OBC/EWS ಪುರುಷ/ಟ್ರಾನ್ಸ್-ಮ್ಯಾನ್- 100 ರೂ. ಶುಲ್ಕವಿದೆ. ಮಹಿಳಾ/ಟ್ರಾನ್ಸ್-ಮಹಿಳೆ ಅಭ್ಯರ್ಥಿಗಳಿಗೆ, SC/ST ಮತ್ತು PwD-ಯಾವುದೇ ಶುಲ್ಕ ಇಲ್ಲ.