alex Certify ಕೋವಿಡ್ ಲಸಿಕೆ ನೀಡಲು ಜೀವದ ಹಂಗು ತೊರೆದು ಗುಡ್ಡಗಾಡು ಪ್ರದೇಶದಲ್ಲಿ ನಡೆದ ಆರೋಗ್ಯ ಸಿಬ್ಬಂದಿ | Kannada Dunia | Kannada News | Karnataka News | India News
ಕನ್ನಡ ದುನಿಯಾ
    Dailyhunt JioNews

Kannada Duniya

ಕೋವಿಡ್ ಲಸಿಕೆ ನೀಡಲು ಜೀವದ ಹಂಗು ತೊರೆದು ಗುಡ್ಡಗಾಡು ಪ್ರದೇಶದಲ್ಲಿ ನಡೆದ ಆರೋಗ್ಯ ಸಿಬ್ಬಂದಿ

ಹಿಮಾಚಲ ಪ್ರದೇಶ ಎಂದರೇನೇ ಹಿಮಗಳಿಂದ ಆವೃತವಾದ ಗುಡ್ಡಗಾಡುಗಳ ಪ್ರಾಂತ್ಯ. ಅದರಲ್ಲೂ ‘ಮಲಾನ’ ಎಂಬ ಗ್ರಾಮವು ಬಂಡೆಗಳ ಸಾಲಿನ ಬೆಟ್ಟದ ತುದಿಯಲ್ಲಿದೆ. ಇಲ್ಲಿನ ಜನರು ಒಂದು ತರಹ ಬುಡಕಟ್ಟು ಸಮುದಾಯಕ್ಕೆ ಸೇರಿದವರಂತೆಯೇ ಮುಖ್ಯವಾಹಿನಿಯಿಂದ ಅಂತರ ಕಾಯ್ದುಕೊಂಡಿದ್ದಾರೆ. ಆದರೆ ಕೊರೊನಾ ಸಾಂಕ್ರಾಮಿಕ ಹತ್ತಿಕ್ಕಲು ಸಂಕಲ್ಪ ಮಾಡಿದ ಸರ್ಕಾರಿ ವೈದ್ಯರಿಗೆ ಮಲಾನ ತಲುಪಲೇ ಬೇಕಿತ್ತು.

ಹಾಗಾಗಿ ಡಾ. ಅತುಲ್‌ ಗುಪ್ತಾ ಅವರ ನೇತೃತ್ವದ ತಂಡವು ಟ್ರೆಕ್ಕಿಂಗ್‌ ಸಾಹಸ ಮಾಡಿದೆ. ಎರಡು ಬಾಕ್ಸ್‌ಗಳಲ್ಲಿ ಕೊರೊನಾ ನಿರೋಧಕ ಲಸಿಕೆಗಳನ್ನು ತುಂಬಿಕೊಂಡು, ಎಚ್ಚರಿಕೆಯಿಂದ ಹಗ್ಗದ ಮೂಲಕ ನದಿಗಳನ್ನು ದಾಟಿದೆ. ಬಂಡೆಗಳನ್ನು ಏರಿದೆ, ಕಿಲೋಮೀಟರ್‌ಗಟ್ಟಲೆ ಕಾಡಿನಲ್ಲಿ ಕಾಲು ಸವೆಸಿಕೊಂಡು ಗ್ರಾಮಕ್ಕೆ ತಲುಪಿದೆ. ಒಂದೇ ಒಂದು ಹೆಜ್ಜೆ ಜಾರಿದ್ದರೂ ಅವರು ಗ್ರಾಮದ ಬದಲಿಗೆ 330 ಅಡಿಗಳಷ್ಟು ಪ್ರಪಾತಕ್ಕೆ ಬಿದ್ದು ಸಾಯುವ ಅಪಾಯ ಇತ್ತು!

ಶುಂಠಿಯಲ್ಲಿದೆ ಸಾಕಷ್ಟು ಔಷಧಿ ಗುಣ

1,100 ಯುವಕ- ಯುವತಿಯರು, 50 ಮಂದಿ ವೃದ್ಧರು ಇರುವ ಗ್ರಾಮಕ್ಕೆ ವೈದ್ಯರು ತಲುಪಿದ ಕೂಡಲೇ ಅವರೆಲ್ಲರೂ ಲಸಿಕೆ ಬೇಡ ಎಂದು ಓಡಿದರಂತೆ. ಕೊನೆಗೆ ಅವರ ಮುಖಂಡರೊಬ್ಬರು ತಮ್ಮ ದೇವರಲ್ಲಿ ಅಪ್ಪಣೆ ಕೇಳಿ, ಒಪ್ಪಿಗೆ ಸಿಕ್ಕರೆ ಮಾತ್ರವೇ ಲಸಿಕೆ ಪಡೆಯುವುದಾಗಿ ಹೇಳಿದರಂತೆ. ಅದೇ ರೀತಿ ವೈದ್ಯರ ತಂಡ ಕೂಡ ಪ್ರಾರ್ಥಿಸಿದಾಗ, ದೇವರು ಅಪ್ಪಣೆ ನೀಡಿದೆ. ಸೆ.14ರಂದು ಗ್ರಾಮದ ಎಲ್ಲರೂ ಮೊದಲ ಕೊರೊನಾ ಡೋಸ್‌ ಪಡೆದಿದ್ದಾರೆ.

ಜನರಲ್ಲಿ ಲಸಿಕೆಯಿಂದ ಸಾವು, ನೋವು ಸಂಭವಿಸುವ ಭಯವಿತ್ತು. ಆದರೆ ಅವರ ಆರಾಧ್ಯ ದೇವರು ಅಭಯ ನೀಡಿದ ಮೇಲೆ , ಧೈರ್ಯ ಮಾಡಿದರು ಎಂದು ಗ್ರಾಮದ ಮುಖಂಡ ರಾಜುರಾಮ್‌ ವೈದ್ಯರಿಗೆ ತಿಳಿಸಿದ್ದಾರೆ.

Opinion Poll

  • ʼಮುಡಾʼ ಹಗರಣದಲ್ಲಿ ರಾಜೀನಾಮೆ ನೀಡ್ತಾರಾ ಸಿಎಂ ಸಿದ್ದರಾಮಯ್ಯ ?

    View Results

    Loading ... Loading ...